Home ಜಿಎಸ್‌ಟಿ ಜಿಎಸ್‌ಟಿ ಕೌನ್ಸಿಲ್ – ಜಿಎಸ್‌ಟಿ ಸಮಿತಿಯ 33 ಸದಸ್ಯರು
GST-Council

ಜಿಎಸ್‌ಟಿ ಕೌನ್ಸಿಲ್ – ಜಿಎಸ್‌ಟಿ ಸಮಿತಿಯ 33 ಸದಸ್ಯರು

by Khatabook

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯು ಭಾರತವು ದೀರ್ಘಕಾಲದವರೆಗೆ ಕಂಡ ಅತ್ಯಂತ ರಚನಾತ್ಮಕ ತೆರಿಗೆ ಬದಲಾವಣೆಯಾಗಿದೆ. ಇದು ಕೆಲವು ಪರೋಕ್ಷ ತೆರಿಗೆಗಳನ್ನುಒಟ್ಟುಗೂಡಿಸಿ, ಅದನ್ನುಒಂದು ಪ್ರಮಾಣಿತ ಸರಕು ಮತ್ತು ಸೇವಾ ತೆರಿಗೆಯೊಂದಿಗೆ ಬದಲಾಯಿಸಿ ಜುಲೈ 1, 2017 ರಿಂದ ಜಾರಿಗೆ ತಂದಿದೆ.

ಜಿಎಸ್‌ಟಿಯ ಮುಖ್ಯ ಪ್ರಯೋಜನವೆಂದರೆ ಸೇವೆಗಳು ಮತ್ತು ಸರಕುಗಳನ್ನು ಒದಗಿಸುವ ವ್ಯವಹಾರಗಳಿಗೆ ತೆರಿಗೆ ಕಾನೂನುಗಳನ್ನು ಸರಳೀಕರಿಸುವುದು. ಅದರ ಅನುಷ್ಠಾನದೊಂದಿಗೆ, ಭ್ರಷ್ಟಾಚಾರ ಮತ್ತುರಶೀದಿಗಳಿಲ್ಲದೆ ನಡೆಯುತ್ತಿರುವ ಮಾರಾಟವನ್ನು ಕಡಿಮೆ ಮಾಡುವುದು, ಅಸಂಘಟಿತ ವ್ಯಾಪಾರ ಕ್ಷೇತ್ರಗಳಲ್ಲಿ ಹೊಣೆಗಾರಿಕೆ ಮತ್ತು ನಿಯಂತ್ರಣವನ್ನು ಕಾಯ್ದುಕೊಳ್ಳುವುದು ಮತ್ತು ತೆರಿಗೆ ವಂಚನೆಯ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನುಜಿಎಸ್‌ಟಿ ಹೊಂದಿದೆ.

ಜಿಎಸ್‌ಟಿ ಅಡಿಯಲ್ಲಿ ಐದು (0%, 5%, 12%, 18% ಮತ್ತು 28%) ತೆರಿಗೆ ಸ್ಲ್ಯಾಬ್‌ಗಳಿವೆ. ಇದನ್ನು ಹೊರತುಪಡಿಸಿ, ಚಿನ್ನದಂತಹ ಲೋಹಗಳಿಗೆ 3% ದರ, ಪರಿಶುದ್ಧಗೊಳಿಸದ ವಜ್ರಗಳು ಮತ್ತು ಅಮೂಲ್ಯ ಕಲ್ಲುಗಳಿಗೆ 0.25% ದರ ಅನ್ವಯವಾಗುತ್ತದೆ.

ಒಟ್ಟು ಜಿಎಸ್‌ಟಿ ದರದಲ್ಲಿ ಸರಕುಪಟ್ಟಿ ಪರಿಶೀಲಿಸಿದರೆ, ಅದನ್ನು ಸಿಜಿಎಸ್‌ಟಿ +ಎಸ್‌ಜಿಎಸ್‌ಟಿ ಅಥವಾ ಸಿಜಿಎಸ್‌ಟಿ + ಯುಟಿಜಿಎಸ್‌ಟಿ ಎಂದು ಬರೆಯಲಾಗುತ್ತದೆ. ಅವುಗಳಲ್ಲಿ ಪ್ರತಿಯೊಂದೂ ಏನನ್ನು ಪ್ರತಿನಿಧಿಸುತ್ತದೆ ಎನ್ನುವುದನ್ನು ನೋಡೋಣ.

ಜಿಎಸ್‌ಟಿ ವಿಧಗಳು

ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ)

ಇದು ಬ್ಯುಸಿನೆಸ್ ಕಾರ್ಯಕ್ಕಾಗಿ ಸರಕು ಮತ್ತು ಸೇವೆಗಳ ರಾಜ್ಯದೊಳಗಿನ ಪೂರೈಕೆಗಾಗಿ ಕೇಂದ್ರ ಸರ್ಕಾರವು ಸಂಗ್ರಹಿಸುವುದಾಗಿದೆ. 

ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ)

ಎಸ್‌ಜಿಎಸ್‌ಟಿಯನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ. ರಾಜ್ಯ ಮಾರಾಟ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಐಷಾರಾಮಿ ತೆರಿಗೆ, ಮನರಂಜನಾ ತೆರಿಗೆ, ಬೆಟ್ಟಿಂಗ್, ಜೂಜು, ಪ್ರವೇಶ ತೆರಿಗೆ, ಲಾಟರಿ ಗೆಲುವಿನ ಮೇಲಿನ ತೆರಿಗೆಗಳು, ರಾಜ್ಯ ಸೆಸ್‌ಗಳು ಮತ್ತು ಹೆಚ್ಚುವರಿ ಶುಲ್ಕಗಳನ್ನು ಎಸ್‌ಜಿಎಸ್‌ಟಿ ಅಡಿಯಲ್ಲಿ ಸೇರಿಸಲಾಗಿದೆ.

ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ)

ಸರಕು ಮತ್ತು ಸೇವೆಗಳ ಪೂರೈಕೆಯನ್ನು ಒಳಗೊಂಡಿರುವ ಕೇಂದ್ರ ಸರ್ಕಾರವು ಸಿಜಿಎಸ್‌ಟಿ  ಅಥವಾ ಎಸ್‌ಜಿಎಸ್‌ಟಿಗೆ ಬದಲಾಗಿ ಐಜಿಎಸ್‌ಟಿಯನ್ನು ಸಂಗ್ರಹಿಸುತ್ತದೆ, ಆದರೆ ರಫ್ತು ಶೂನ್ಯಕ್ಕೆ ರೇಟ್ ಆಗುತ್ತದೆ. ಇದು ಭಾರತದಾದ್ಯಂತ ಅನ್ವಯಿಸುತ್ತದೆ.

ಕೇಂದ್ರಾಡಳಿತ ಸರಕು ಮತ್ತು ಸೇವಾ ತೆರಿಗೆ (ಯುಟಿಜಿಎಸ್‌ಟಿ)

ಕೇಂದ್ರಾಡಳಿತ ಪ್ರದೇಶವು ನೇರವಾಗಿ ಕೇಂದ್ರ ಸರ್ಕಾರದ ಆಡಳಿತದಲ್ಲಿದೆ. ಇದು ತಮ್ಮದೇ ಆದ ಚುನಾಯಿತ ಸರ್ಕಾರಗಳನ್ನು ಹೊಂದಿರುವ ರಾಜ್ಯಗಳಿಂದ ಅವರನ್ನು ಪ್ರತ್ಯೇಕಿಸುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಡ್ ಮತ್ತು ಲಕ್ಷದ್ವೀಪ ಸೇರಿದಂತೆ ಭಾರತದ ಯಾವುದೇ ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಸರಕು ಮತ್ತು ಸೇವೆಗಳಿಗೆ ಇದು ಅನ್ವಯವಾಗುತ್ತದೆ.

ಜಿಎಸ್‌ಟಿ ಕೌನ್ಸಿಲ್ ಎಂದರೇನು?

ಜಿಎಸ್‌ಟಿ ನಿಯಮಗಳನ್ನು ರೂಪಿಸಲು, ಪ್ರಸ್ತುತ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 33 ಸದಸ್ಯರನ್ನು ಒಳಗೊಂಡಿರುವ ಜಿಎಸ್‌ಟಿ ಕೌನ್ಸಿಲ್ ಅನ್ನು ಸರ್ಕಾರ ನೇಮಿಸಿದೆ.

what-is-gst-council kannada

ಗೊತ್ತುಪಡಿಸಿದ ಸದಸ್ಯರು:

 • ಕೇಂದ್ರ ಹಣಕಾಸು ಸಚಿವರು, ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳುವರು.
 • ಕೇಂದ್ರ ಕಂದಾಯ ಉಸ್ತುವಾರಿ ರಾಜ್ಯ ಸಚಿವರು ಪರಿಷತ್ತಿನ ಸದಸ್ಯರಾಗಿರುತ್ತಾರೆ.
 • ಹಣಕಾಸು ಸಚಿವರಾಗಿ ಪ್ರತಿ ರಾಜ್ಯ ಮತ್ತು ಕೇಂದ್ರ ಪ್ರದೇಶದ ಒಬ್ಬ ಸದಸ್ಯರು.
 • ರಾಜ್ಯ ಸಚಿವರಲ್ಲಿ ಒಬ್ಬರನ್ನು ಜಿಎಸ್‌ಟಿ ಪರಿಷತ್ತಿನ ಸದಸ್ಯರು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ.
 • ಕಂದಾಯ ಕಾರ್ಯದರ್ಶಿ ಜಿಎಸ್‌ಟಿ ಕೌನ್ಸಿಲ್‌ನ ಎಕ್ಸ್-ಆಫಿಸಿಯೊ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎಲ್ಲಾ ಪ್ರಕ್ರಿಯೆಗಳಲ್ಲಿ ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರು ಖಾಯಂ ಆಹ್ವಾನಿತರಾಗಿರುತ್ತಾರೆ. ಜಿಎಸ್‌ಟಿ ಕೌನ್ಸಿಲ್‌ನ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ ಮತ್ತು ಇದುವರೆಗೆ 37 ಸಭೆಗಳನ್ನು ವೈಯಕ್ತಿಕವಾಗಿ ಅಥವಾ ವಿಡಿಯೋ ಕರೆಯ ಮೂಲಕ ನಡೆಸಲಾಗಿದೆ.

ಸಹಕಾರಿ ಫೆಡರಲಿಸಂನ ಅತ್ಯುನ್ನತ ಮಾನದಂಡಗಳನ್ನು ಸ್ಥಾಪಿಸುವುದು ಜಿಎಸ್‌ಟಿ ಕೌನ್ಸಿಲ್‌ನ ದೃಷ್ಟಿಕೋನವಾಗಿದೆ(ಅವರ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ), ಇದು ಜಿಎಸ್‌ಟಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುವ ಮೊದಲ ಸಾಂವಿಧಾನಿಕ ಸಂಯುಕ್ತ ಸಂಸ್ಥೆಯಾಗಿದೆ.

ಜಿಎಸ್‌ಟಿ ಕೌನ್ಸಿಲ್ ಸಮಗ್ರ ಸಮಾಲೋಚನೆ ಪ್ರಕ್ರಿಯೆಯ ಮೂಲಕ  ಅಭಿವೃದ್ಧಿಪಡಿಸಿಕೊಳ್ಳುವ ಗುರಿ ಹೊಂದಿದೆ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ರಚನೆಯು ಬಳಕೆದಾರ ಸ್ನೇಹಿಯಾಗಿದೆ ಮತ್ತು ಮಾಹಿತಿ ತಂತ್ರಜ್ಞಾನವನ್ನು ಆಧರಿಸಿದೆ.

ಜಿಎಸ್‌ಟಿ ಕೌನ್ಸಿಲ್ ಪಾತ್ರ

ಜಿಎಸ್‌ಟಿ ಕೌನ್ಸಿಲ್ ಈ ಕೆಳಗಿನವುಗಳನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಶಿಫಾರಸುಗಳನ್ನು ಮಾಡುತ್ತದೆ:

 • ಜಿಎಸ್‌ಟಿ ಅಡಿಯಲ್ಲಿ ಸಂಯೋಜಿಸಬಹುದಾದ ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆಗಳು, ಸೆಸ್‌ಗಳು ಮತ್ತು ಹೆಚ್ಚುವರಿ ಶುಲ್ಕಗಳು.
 • ಜಿಎಸ್‌ಟಿಗೆ ಒಳಪಟ್ಟಿರುವ ಅಥವಾ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳು
 • ಜಿಎಸ್‌ಟಿ ಕಾನೂನುಗಳ ಮಾದರಿ ಮತ್ತು ಇಂಟಿಗ್ರೇಟೆಡ್ ಗೂಡ್ಸ್ & ಸರ್ವೀಸಸ್ ಟ್ಯಾಕ್ಸ್ (ಐಜಿಎಸ್ಟಿ) ಮತ್ತು ಸರಬರಾಜು ಮಾಡುವ ಸ್ಥಳವನ್ನು ನಿಯಂತ್ರಿಸುವ ವಿಚಾರಗಳು.
 • ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ನಿರ್ದಿಷ್ಟ ಅವಧಿಗೆ ವಿಶೇಷ ದರಗಳು.
 • ಆಯಾ ಉತ್ತರ ಮತ್ತು ಈಶಾನ್ಯ ರಾಜ್ಯ (ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ) ಗಳಿಗೆ ವಿಶೇಷ ನಿಬಂಧನೆಗಳು.
 • ಹೈಸ್ಪೀಡ್ ಡೀಸೆಲ್, ಪೆಟ್ರೋಲಿಯಂ ಕಚ್ಚಾ, ನೈಸರ್ಗಿಕ ಅನಿಲ ಮತ್ತು ವಾಯುಯಾನ ಟರ್ಬೈನ್ ಇಂಧನಕ್ಕೆ ಜಿಎಸ್‌ಟಿ ವಿಧಿಸಬೇಕಾದ ದಿನಾಂಕ.
 • ಸರಕು ಮತ್ತು ಸೇವೆಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವ ವಹಿವಾಟಿನ ಗರಿಷ್ಠ ಮಿತಿ.
 • ಫ್ಲೋರ್ ದರಗಳ ಜಿಎಸ್‌ಟಿ ಬ್ಯಾಂಡ್ ಗಳು ಸೇರಿದಂತೆ ದರಗಳು.
 • ಕೌನ್ಸಿಲ್ ಪರಿಗಣಿಸಿದಂತೆ ಜಿಎಸ್‌ಟಿ ಸಂಬಂಧಿತ ಯಾವುದೇ ವಿಷಯಗಳು.

ಜಿಎಸ್‌ಟಿ ಕೌನ್ಸಿಲ್ ನಿರ್ಧಾರಗಳು 

ಪರಿಷತ್ತಿನಲ್ಲಿ ಜಿಎಸ್‌ಟಿ  ಸಂಬಂಧಿತ ನಿರ್ಧಾರಗಳನ್ನು ರವಾನಿಸಲು 3 ಮುಖ್ಯ ಅವಶ್ಯಕತೆಗಳಿವೆ.

 • ಸಭೆ ಮಾನ್ಯವಾಗಬೇಕಾದರೆ, ಜಿಎಸ್‌ಟಿ ಪರಿಷತ್ತಿನ ಒಟ್ಟು ಸದಸ್ಯರಲ್ಲಿ ಕನಿಷ್ಠ 50% ಸದಸ್ಯರು  ಹಾಜರಿರಬೇಕು.
 • ಸಭೆಯ ಸಮಯದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಕೆಳಗೆ ವಿವರಿಸಿರುವಂತೆ ಹಾಜರಿರುವ ಸದಸ್ಯರಿಂದ ಕನಿಷ್ಠ 75% ಮತಗಳಿಂದ ಬೆಂಬಲವನ್ನು ಪಡೆಯಬೇಕು.

ವಿಧಿ 279 ಎ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಟ್ಟು ಮತಗಳನ್ನು ಹಂಚುವ ಒಂದು ತತ್ವವನ್ನು ಸೂಚಿಸುತ್ತದೆ:

ಕೇಂದ್ರ ಸರ್ಕಾರದ ಮತವು ಒಟ್ಟು ಮತಗಳ ಮೂರನೇ ಒಂದು ಭಾಗವನ್ನು ಹೊಂದಿರುತ್ತದೆ. ಮತ್ತು ರಾಜ್ಯ ಸರ್ಕಾರದ ಮತಗಳು ಸಭೆಯಲ್ಲಿ ಒಟ್ಟು ಮೂರನೇ ಎರಡರಷ್ಟು ಮತಗಳನ್ನು ಹೊಂದಿರುತ್ತವೆ.

ಜಿಎಸ್‌ಟಿ  ಕೌನ್ಸಿಲ್ ಸ್ಥಾಪನೆಯ ಸಮಯದಲ್ಲಿ ಉಳಿದಿರುವ ಯಾವುದೇ ಕೊರತೆಯ ಆಧಾರದ ಮೇಲೆ ಒಂದು ಕಾರ್ಯ ಅಥವಾ ನಿರ್ಧಾರವನ್ನು ಅಮಾನ್ಯವೆಂದು ಘೋಷಿಸಲಾಗುವುದಿಲ್ಲ. ಅವುಗಳೆಂದರೆ:

 • ಯಾವುದಾದರೂ ಖಾಲಿ ಹುದ್ದೆ ಇದೆಯೇ ಎನ್ನುವುದು. 
 • ಸಮಿತಿಯ ಸಂಯೋಜನೆಯಲ್ಲಿ ಯಾವುದೇ ದೋಷವಿದೆಯೇ ಎನ್ನುವುದು
 • ಯಾವುದೇ ಕಾರ್ಯವಿಧಾನದ ಅನುಸರಣೆ ಇಲ್ಲವೇ ಎನ್ನುವುದು. 
 • ಕೌನ್ಸಿಲ್ ಸದಸ್ಯರ ನೇಮಕದಲ್ಲಿ ಏನಾದರೂ ದೋಷವಿದೆಯೇ ಎನ್ನುವುದು. 

ಒಂದು ವೇಳೆ ಜಿಎಸ್‌ಟಿ ಕೌನ್ಸಿಲ್ ಸದಸ್ಯರ ನಡುವೆ  ಮನಸ್ತಾಪ ಉಂಟಾದರೆ, ಯಾವುದೇ ಭಿನ್ನಾಭಿಪ್ರಾಯಗಳನ್ನು ನಿರ್ಣಯಿಸಲು ಅವಕಾಶಗಳಿವೆ. ‘ವಿವಾದ ಕಾರ್ಯವಿಧಾನ’ ಎಂದು ಉಲ್ಲೇಖಿಸಲಾಗಿರುವ ಸಂಯೋಜನೆಯು, ಅಗತ್ಯವಿದ್ದಾಗ ಅನುಸರಿಸಲು ನಿಯಮಗಳನ್ನು ಒದಗಿಸಿದೆ.

ಸಂವಿಧಾನದಲ್ಲಿ 2016 ರಲ್ಲಿ ಅಂಗೀಕರಿಸಲ್ಪಟ್ಟ ನೂರು ಮತ್ತು ಮೊದಲ ತಿದ್ದುಪಡಿ ಕಾಯ್ದೆಯು ಇವುಗಳ ನಡುವೆ ಯಾವುದೇ ವಿವಾದವನ್ನು ಸರಿಪಡಿಸುವ ಕಾರ್ಯವಿಧಾನವನ್ನು ಹೇಳುತ್ತದೆ:

 • ಭಾರತ ಸರ್ಕಾರ ಮತ್ತು ಒಂದು ಅಥವಾ ಹೆಚ್ಚಿನ ರಾಜ್ಯಗಳು.
 • ಒಂದು ಅಥವಾ ಹೆಚ್ಚಿನ ಇತರ ರಾಜ್ಯಗಳ ವಿರುದ್ಧ ಯಾವುದೇ ರಾಜ್ಯದೊಂದಿಗೆ ಭಾರತ ಸರ್ಕಾರ.
 • ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳಿಂದ ಉದ್ಭವಿಸುವ ಎರಡು ಅಥವಾ ಹೆಚ್ಚಿನ ರಾಜ್ಯಗಳು.
 • ಮತ್ತು ಭಾರತ ಸರ್ಕಾರದ ನಡುವೆ

Related Posts

Leave a Comment