written by Khatabook | June 2, 2022

ಹಿರಿಯರ ಹೋಮ್ ಕೇರ್ ಬ್ಯುಸಿನೆಸ್ ಸರ್ವಿಸ್ ಪ್ರಾರಂಭಿಸುವುದು ಹೇಗೆ?

×

Table of Content


ಇತ್ತೀಚಿನ ದಿನಗಳಲ್ಲಿ ಹಿರಿಯರ ಕೇರ್ ಟೇಕರ್ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ಸಿಟಿಗಳಲ್ಲಿ ತುಸು ಹೆಚ್ಚಾಗಿಯೇ ಇದೆ. ಗಂಡ ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋಗುವ ಈಗಿನ ಕಾಲದಲ್ಲಿ ಮನೆಯಲ್ಲಿರುವ ಹಿರಿಯರನ್ನು ಅದರಲ್ಲೂ ಅನಾರೋಗ್ಯ ಪೀಡಿತ ಹಿರಿಯನ್ನು ನೋಡಿಕೊಳ್ಳಲು ಕೇರ್ ಟೇಕರ್ ಅಗತ್ಯ ಬಹಳ ಇದೆ. ಅವರಿಗೆ ಔಷಧ ಕೊಡಿಸುವುದರಿಂದ ಹಿಡಿದು ಸ್ನಾನ ಮಾಡಿಸುವುದು, ಡ್ರೆಸ್ಸಿಂಗ್, ಊಟ ಮಾಡಿಸುವುದು ಹೀಗೆ ಅವರಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ನಿರ್ವಹಿಸುವುದು ಕೇರ್ ಟೇಕರ್ ಕೆಲಸವಾಗಿರುತ್ತದೆ.  ನೀವು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಆನಂದಿಸುವವರಾಗಿದ್ದರೆ, ಅವರ ಕಾಳಜಿ ನಿರ್ವಹಿಸುವುದು ನಿಮಗೆ ಸಂತೋಷ ತರುವುದಾದರೆ ಜೊತೆಗೆ ನಿಮ್ಮದೇ ಆದ ಸ್ವಂತ ವ್ಯವಹಾರವನ್ನು ನಡೆಸಲು ಬಯಸಿದರೆ, ವೈದ್ಯಕೀಯೇತರ ಹಿರಿಯರ ಆರೈಕೆ ಬ್ಯುಸಿನೆಸ್ ಪ್ರಾರಂಭಿಸಿ. 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಯಾವುದೇ ಒಂದು ಬ್ಯುಸಿನೆಸ್ ಪ್ರಾರಂಭಿಸಲು ಅದಕ್ಕೆ ಸರಿಯಾದ ಯೋಜನೆ ರೂಪಿಸುವುದು ಅವಶ್ಯಕ. ಅದರ ಲಾಭ ನಷ್ಟಗಳು, ಬೇಕಾಗುವ ಬಂಡವಾಳ, ಕೆಲಸಕ್ಕೆ ಜನ, ಕೆಲಸದ ಸಮಯ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಯೋಜನೆ ರೂಪಿಸಿದ ಮೇಲಷ್ಟೇ ಈ ಬ್ಯುಸಿನೆಸ್ ಪ್ರಾರಂಭಿಸುವುದು ಬಹಳ ಮುಖ್ಯ. ಅದರಲ್ಲೂ ನಿಮ್ಮಂತೆಯೇ ಹಿರಿಯರನ್ನು ಅಕ್ಕರೆ ಮತ್ತು ಪ್ರೀತಿಯಿಂದ ಕಾಣುವ ಸಿಬ್ಬಂದಿಗಳು ಸಿಕ್ಕ ಬಳಿಕ ಪ್ರಾರಂಭಿಸಿದರೆ ಒಳಿತು. 

ಹಂತ ಹಂತದ ಸಲಹೆಗಳು

ಉತ್ತಮ ಯೋಜನೆಯನ್ನು ಸಿದ್ಧಪಡಿಸಿ

ಯಾವುದೇ ಒಂದು ವ್ಯವಹಾರಕ್ಕೆ ಸರಿಯಾದ ಯೋಜನೆ ಭದ್ರ ಬುನಾದಿಯನ್ನು ಹಾಕುತ್ತದೆ. ನಿಮ್ಮ ಯೋಜನೆ ಸರಿಯಾಗಿದ್ದರೆ ಅಥವಾ ಸರಿಯಾದ ದಾರಿಯಲ್ಲಿದ್ದರೆ ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಯಾವೆಲ್ಲ ಪ್ರದೇಶದಲ್ಲಿ ಈ ಬ್ಯುಸಿನೆಸ್ ಪ್ರಾರಂಭಿಸಲು ಬಯಸುತ್ತೀರಿ, ಎಷ್ಟು ಜನ ಸಿಬ್ಬಂದಿಗಳನ್ನು ಹೊಂದಲು ಬಯಸುತ್ತೀರಿ, ನಿಮ್ಮ ಬ್ಯುಸಿನೆಸ್ ಬಗ್ಗೆ ಮಾರ್ಕೆಟಿಂಗ್ ಹೇಗೆ ಮಾಡುತ್ತೀರಿ, ನೀವು ಯಾವೆಲ್ಲ ಸೇವೆಗಳನ್ನು ನೀಡಲು ಬಯಸುತ್ತೀರಿ, ಯಾವುದಾದರೂ ಪ್ಯಾಕೇಜ್ ಲಭ್ಯವಿದೆಯೇ, ಹಣಕಾಸು ಯೋಜನೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ನೀವು ಯೋಜನೆಯನ್ನು ಸಿದ್ಧಪಡಿಸಿ ಅದನ್ನು ತಿಳಿದವರೊಂದಿಗೆ ಚರ್ಚಿಸಿ ಮುಂದುವರೆಯುವುದು ಬಹಳ ಉತ್ತಮ. ಸಂಶೋಧನೆ ಮತ್ತು ತಿಳಿದವರೊಂದಿಗೆ ಚರ್ಚಿಸುವುದು ನಿಮಗೆ ಬ್ಯುಸಿನೆಸ್ ಬೆಳೆಸಲು ಇನ್ನಷ್ಟು ಸಹಾಯ ಮಾಡುತ್ತದೆ. 

ಹಿರಿಯರ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ

ಯಾವುದೇ ಒಂದು ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ಇಡೀ ರೀತಿಯ ಕೆಲವು ಕೇಂದ್ರಗಳಿಗೆ ಅಥವಾ ಸಂಸ್ಥೆಗಳಿಗೆ ಸ್ವಯಂ ಭೇಟಿ ನೀಡಿ ಪರಿಶೀಲಿಸುವುದು ಬಹಳ ಉತ್ತಮ. ಏಕೆಂದರೆ ಇಂಟರ್ನೆಟ್ ಅಥವಾ ಬೇರೆ ಲೇಖನಗಳಿಂದ ಸಿಗುವ ಮಾಹಿತಿಗಳು ಮತ್ತು ನೇರವಾಗಿ ನಿಮಗೆ ಸಿಗುವ ಮಾಹಿತಿಗಳಿಗೆ ಬಹಳ ವ್ಯತ್ಯಾಸವಿದೆ. ಹಾಗಾಗಿ ಖುದ್ದಾಗಿ ನೀವೇ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಗಮನಿಸಿದರೆ ನಿಮಗೆ ಸರಿಯಾದ ಐಡಿಯಾ ಸಿಗುವುದರಲ್ಲಿ ಎರಡು ಮಾತಿಲ್ಲ 

ಯಾವೆಲ್ಲ ಸೇವೆಗಳನ್ನು ನೀಡಬಹುದು

ಒಂದು ಹಂತದ ಯೋಜನೆ ಸಿದ್ಧವಾದ ನಂತರ ನೀವು ಪಟ್ಟಿ ಮಾಡಬೇಕಾದದ್ದು ನೀವು ಯಾವೆಲ್ಲ ಸೇವೆಗಳನ್ನು ನೀಡಬಹುದು ಎನ್ನುವುದನ್ನು. ಹಿರಿಯರ ಆರೈಕೆ ಅಥವಾ ಕಾಳಜಿ ವಿಷಯಕ್ಕೆ ಬಂದಾಗ ಹಲವಾರು ಸೇವೆಗಳು ಲಭ್ಯವಿರುತ್ತವೆ. ಇವುಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲು ನಿಮ್ಮಲ್ಲಿ ಸಾಧ್ಯವಾಗದೆ ಇರಬಹುದು ಅಥವಾ ಸಾಧ್ಯವಾಗಬಹುದು. ಹಾಗಾಗಿ ಯಾವೆಲ್ಲ ಸೇವೆಗಳು ನಿಮ್ಮ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದನ್ನು ಪಟ್ಟಿ ಮಾಡಿ. ಇದಕ್ಕಾಗಿ ಕೆಲವು ಸಂಶೋಧನೆ ಮಾಡಿದರೂ ಸರಿ. ಕೆಲವೊಂದು ಐಡಿಯಾಗಳು ಇಲ್ಲಿವೆ

ವೈಯಕ್ತಿಕ ಆರೈಕೆ

ಇದರಲ್ಲಿ ಕೇವಲ ಒಬ್ಬರ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ ಅಂದರೆ ಅವರನ್ನು ಸ್ನಾನ ಮಾಡಿಸುವುದು ಆಗಿರಬಹುದು, ಡ್ರೆಸ್ಸಿಂಗ್ ಆಗಿರಬಹುದು, ತಲೆ ಬಾಚುವುದಾಗಿರಬಹುದು ಜೊತೆಗೆ ಊಟ, ತಿಂಡಿ ನೋಡಿಕೊಳ್ಳುವುದು ಆಗಿರಬಹುದು. ಇದನ್ನು ಹೊರತುಪಡಿಸಿ ಕೆಲವೊಂದು ಮನೆಗಳಲ್ಲಿ ಆ ಹಿರಿಯರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಅನಿವಾರ್ಯತೆ ಕೂಡ ಇರಬಹುದು. ಉದಾಹರಣೆಗೆ ಆ ವ್ಯಕ್ತಿ ಸಂಪೂರ್ಣ ಅನಾರೋಗ್ಯ ಪೀಡಿತರಾಗಿದ್ದರೆ, ದಿನದ ೨೪ ಗಂಟೆಗಳ ಕಾಲ ನೀವು ಅವರ ಬಳಿಯೇ ಇರಬೇಕಾಗಬಹುದು. ಊಟ, ತಿಂಡಿ, ಶೌಚ, ವಾಕಿಂಗ್ ಅನಿರ್ವಾರ್ಯತೆ ಇದ್ದರೆ ವೀಲ್ ಚೇರ್ ಮೂಲಕ ವಾಕಿಂಗ್ ಕರೆದುಕೊಂಡು ಹೋಗಿರುವುದು ಆಗಿರಬಹುದು ಹೀಗೆ ಎಲ್ಲಾ ಜವಾಬ್ದಾರಿಗಳನ್ನು ನೀವು ತೆಗೆದುಕೊಳಬೇಕಾಗುತ್ತದೆ. ಈ ರೀತಿಯ ವಿವಿಧ ಸೇವೆಗಳಿಗೆ ನೀವು ವಿವಿಧ ರೀತಿಯ ಬೆಲೆಯನ್ನು ನಿಗದಿಪಡಿಸಬಹುದು.

ಮನೆ ಕೆಲಸದ ಜೊತೆಗೆ ವೈಯಕ್ತಿಕ ಆರೈಕೆ

ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯರು ಮನೆಯಲ್ಲಿದ್ದುಕೊಂಡು ಮಕ್ಕಳು ದೂರದ ಊರಿನಲ್ಲಿ ನೆಲೆಸಿರುವ ಸಾಧ್ಯತೆಗಳು ಹೆಚ್ಚು. ಇಂತಹ ಸಂದರ್ಭಗಳಲ್ಲಿ ನೀವು ಅವರ ಆರೈಕೆಯ ಜೊತೆಗೆ ಮನೆಯ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಈ ಸೇವೆಗಳಿಗೆ ನೀವು ಅವರ ಮನೆಯಲ್ಲಿಯೇ ಇದ್ದುಕೊಂಡು ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಸೇವೆಗಳಿಗೆ ನೀವು ಹೆಚ್ಚಿನ ಬೆಲೆಯನ್ನು ನಿಗದಿಪಡಿಸಬಹುದು. ಇದರಲ್ಲಿ ಯಾವೆಲ್ಲಾ ಸೇವೆಗಳು ಬರಬಹುದು? 

ಅಡುಗೆ ಮಾಡಬೇಕಾಗಬಹುದು

ಮನೆಯಲ್ಲಿ ಒಬ್ಬರು ಅಥವಾ ಇಬ್ಬರು ಹಿರಿಯರಿದ್ದರೆ ಅವರ ಇಷ್ಟ ಕಷ್ಟಗಳನ್ನು ನೋಡಿಕೊಂಡು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಸಿದ್ಧಪಡಿಸಬೇಕಾಗಬಹುದು. ನೀವು ಮೆಡಿಕಲ್ ಸೇವೆಯ ಹೊರತಾದ ಆರೈಕೆ ಸೇವೆಯನ್ನು ನೀಡುತ್ತಿದ್ದರೆ ಅವರ ಫ್ಯಾಮಿಲಿ ಡಾಕ್ಟರ್ ಅಥವಾ ಮನೆಯವರ ಬಳಿ ಅವರಿಗೆ ಯಾವ ಆಹಾರವನ್ನು ಕೊಡಬೇಕು ಮತ್ತು ಕೊಡಬಾರದು ಎನ್ನುವುದರ ಬಗ್ಗೆ ಮಾತನಾಡಿ ಅದಕ್ಕೆ ತಕ್ಕ ಹಾಗೆ ಕೆಲಸ ಮಾಡುವುದು ಒಳಿತು. 

ಮನೆಕೆಲಸ ಮಾಡಬೇಕಾಗಬಹುದು

ಕೆಲವೊಂದು ಸಂದರ್ಭದಲ್ಲಿ ಹೆಚ್ಚಿನ ಕೆಲಸದಾಳುಗಳನ್ನು ಇಟ್ಟುಕೊಳ್ಳುವುದು ಮನೆಯವರಿಗೆ ಕಷ್ಟ ಸಾಧ್ಯ ಎನಿಸಿದಾಗ ಎಲ್ಲವನ್ನೂ ನಿರ್ವಹಿಸುವ ಸಿಬ್ಬಂದಿಗಳು ಅಥವಾ ವ್ಯಕ್ತಿಗಳನ್ನು ಮನೆಯವರು ಹುಡುಕಬಹುದು. ನಿಮ್ಮಲ್ಲಿ ಅಂತಹ ಸೇವೆಗಳಿದ್ದರೆ ಇದು ಕೂಡ ನಿಮಗೆ ಹೆಚ್ಚಿನ ಹಣ ಸಂಪಾದಿಸಲು ಸಹಾಯ ಮಾಡುತ್ತದೆ.ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇದೆಲ್ಲದಕ್ಕೂ ನೀವು ಪ್ರತ್ಯೇಕ ಬೆಲೆಯನ್ನು ನಿಗದಿಪಡಿಸಬಹುದು. 

ಇತರ ಕೆಲಸ

ಮನೆಯಲ್ಲಿ ಎಲ್ಲವನ್ನೂ ನೀವೇ ನಿಭಾಯಿಸಬೇಕು ಎಂದಾಗ ಮನೆಗೆ ಅಗತ್ಯಕ್ಕೆ ಬೇಕಾದ ವಸ್ತುಗಳು, ಅಡುಗೆಗೆ ಬೇಕಾಗುವ ಸಾಮಾನುಗಳು, ಮೆಡಿಕಲ್ ನಿಂದ ಔಷಧಿಗಳನ್ನು ತರುವುದು ಹೀಗೆ ಅಗತ್ಯ ಕೆಲಸಗಳನ್ನು ಮಾಡುವ ಅವಶ್ಯಕತೆ ಬರಬಹುದು. ಇದೆಲ್ಲವನ್ನೂ ನೀವು ಮೊದಲೇ ಕೇಳಿ ಮುಂದುವರೆಯುವುದು ಒಳ್ಳೆಯದು. ನೀವು ಸಿಟಿಯಲ್ಲಿ ಈ ಸೇವೆಯನ್ನು ನೀಡುತ್ತಿದ್ದರೆ ನಿಮಗೆ ಇವೆಲ್ಲವನ್ನೂ ನೋಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ ಎಷ್ಟೋ ಆನ್ ಲೈನ್ ಸಂಸ್ಥೆಗಳು ಆಹಾರ ಪದಾರ್ಥಗಳು, ದಿನಸಿ ಸಾಮಗ್ರಿಗಳು, ಔಷಧಿಗಳನ್ನು ಮನೆಗೆ ತಲುಪಿಸುವುದರಿಂದ ನೀವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ . ಆದರೆ ನೀವು ಹಳ್ಳಿ ಪ್ರದೇಶಗಳಲ್ಲಿ ಈ ಸೇವೆಯನ್ನು ನೀಡುತ್ತಿದ್ದರೆ ಇವೆಲ್ಲಾ ಸೇವೆಗಳನ್ನು ನೀಡಬೇಕಾದ ಅವಶ್ಯಕತೆ ಬರಬಹುದು. ಇದೆಲ್ಲವನ್ನೂ ಮೊದಲೇ ತಿಳಿದುಕೊಂಡು ಅದಕ್ಕೆ ಬೇಕಾದ ಬೆಲೆಯನ್ನು ನಿಗದಿಪಡಿಸಬಹುದು. 

ನಿಮ್ಮ ಬ್ಯುಸಿನೆಸ್‌ಗೊಂದು ಹೆಸರು ಕೊಡಿ

ನಿಮ್ಮ ಬ್ಯುಸಿನೆಸ್‌ಗೊಂದು ಚಂದದ ಹೆಸರು ಕೊಡಿ. ಹೆಸರು ಆಕರ್ಷಕವಾಗಿರಲಿ, ಮನಸ್ಸಿಗೆ ಮುಟ್ಟುವಂತಿರಲಿ. ಆದಷ್ಟು ಆ ಹೆಸರಿನಲ್ಲಿ ಆರೈಕೆ ಅಥವಾ ಕಾಳಜಿ ಎನ್ನುವ ಪದಗಳನ್ನು ಬಳಸಿ. ಚಂದದ ಹೆಸರಿನಂತೆ ನೀವು ನೀಡುವ ಸೇವೆಯೂ ಕೂಡ ಚೆನ್ನಾಗಿರಲಿ. ಹೆಸರು ಫೈನಲ್ ಮಾಡುವ ಮುನ್ನ ಈ ಹೆಸರನ್ನು ಬೇರೆಯವರು ಬಳಸಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಿ. 

ನಿಮ್ಮ ಬ್ಯುಸಿನೆಸ್ ರಿಜಿಸ್ಟರ್ ಮಾಡಿ

ಲೈಸೆನ್ಸ್ ಮತ್ತು ಸರ್ಟಿಫಿಕೇಟ್ ಪಡೆಯಲು ಹೆಸರು ಅಂತಿಮವಾದ ಬಳಿಕ ನೀವು ಬ್ಯುಸಿನೆಸ್ ರಿಜಿಸ್ಟರ್ ಮಾಡಬೇಕಾಗುತ್ತದೆ. ರಿಜಿಸ್ಟರ್ ಆದ ಬಳಿಕ ನೀವು ಯಾವುದೇ ಭಯವಿಲ್ಲದೆ ಮುಂದುವರೆಯಬಹುದು. 

ಈ ಸೇವೆಗಳಿಗೆ ನರ್ಸಿಂಗ್ ಡಿಗ್ರಿ ಅಥವಾ ಮೆಡಿಕಲ್ ಹಿನ್ನೆಲೆ ಅವಶ್ಯವೇ?

ಇಲ್ಲ ಮೆಡಿಕಲ್ ರಹಿತ ಸೇವೆಗಳಿಗೆ ಯಾವುದೇ ನರ್ಸಿಂಗ್ ಡಿಗ್ರಿ ಅಥವಾ ಮೆಡಿಕಲ್ ಹಿನ್ನೆಲೆ ಅವಶ್ಯಕತೆಯಿಲ್ಲ. ಹಿರಿಯರ ಜೊತೆಗೆ ಬೆರೆಯಲು, ಅವರ ಜೊತೆ ಸಮಯ ಕಳೆಯುವುದು ಸಂತಸ ತಂದರೆ, ನೀವು ಈ ಸೇವೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಇನ್ನು ನೀವು ನೋಡಿಕೊಳ್ಳುವ ವ್ಯಕ್ತಿ ತುಂಬಾ ಅನಾರೋಗ್ಯ ಪೀಡಿತರಾಗಿದ್ದರೆ, ಅವರಿಗೆ ಪ್ರತಿದಿನ ಬೇಕಾಗುವ ಔಷಧ ಅಥವಾ ಇಂಜೆಕ್ಷನ್ ವ್ಯವಸ್ಥೆಗಳನ್ನು ಸಂಬಂಧಪಟ್ಟ ವೈದ್ಯರೇ ಮಾಡುತ್ತಾರೆ.  

ಸಿಬ್ಬಂದಿಗಳನ್ನು ಆಯ್ಕೆ ಮಾಡಿ

ಇನ್ನು ಮುಂದಿನ ಕೆಲಸ ನಿಮ್ಮ ಸಂಸ್ಥೆಗೆ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದು. ಹೌದು, ನಿಮ್ಮ ಸೇವೆಗಳ ವ್ಯಾಪ್ತಿಯನ್ನು ನೋಡಿಕೊಂಡು ನಿಮ್ಮ ಸಂಸ್ಥೆಗೆ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದು ಈಗ ಬಹು ದೊಡ್ಡ ಕೆಲಸ. ಈ ಕೆಲಸಕ್ಕೆ ದೊಡ್ಡ ಕಚೇರಿಯ ಅವಶ್ಯಕತೆ ಇಲ್ಲದೆ ಇರುವುದರಿಂದ ನಿಮ್ಮ ಮನೆ ಅಥವಾ ಬಾಡಿಗೆ ಕೋಣೆ ಇಟ್ಟುಕೊಂಡು ಸಂಸ್ಥೆಯನ್ನು ನಡೆಸಬಹುದು. ಸಿಬ್ಬಂದಿಗಳು ಮನೆಗಳಿಗೆ ಹೋಗಿ ಕೆಲಸ ಮಾಡುವುದರಿಂದ ಅಷ್ಟೂ ಸಿಬ್ಬಂದಿಗಳಿಗೆ ಆಗುವಷ್ಟು ದೊಡ್ಡ ಕಚೇರಿಯ ಅವಶ್ಯಕತೆ ಇಲ್ಲ. ಸಿಬ್ಬಂದಿಗಳನ್ನು ಆಯ್ಕೆ ಮಾಡುವಾಗ ಅವರಿಗೆ ಈ ಕೆಲಸ ಮಾಡಿದ ಅನುಭವ ಇದೆಯೇ, ಎಷ್ಟು ವರ್ಷಗಳ ಅನುಭವ ಇದೆ, ಯಾವೆಲ್ಲಾ ಕೆಲಸ ಮಾಡಲು ಅವರು ಅರ್ಹರು, ಯಾವುದೇ ಸೇವೆಗಳನ್ನು ನೀಡಲು ಅವರು ತಯಾರಿದ್ದಾರೆಯೇ ಎನ್ನುವುದನ್ನು ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು. ನೆನಪಿರಲಿ ಇಂತಹ ಸೇವೆಗಳಿಗೆ ಬಹಳಷ್ಟು ಡಿಮ್ಯಾಂಡ್ ಇರುವುದರಿಂದ ಆಯ್ಕೆ ಮಾಡುವಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. 

ಮಾರ್ಕೆಟಿಂಗ್

ಇನ್ನು ಯಾವುದೇ ಸಂಸ್ಥೆಗಳನ್ನು ಅಥವಾ ಉದ್ಯಮವನ್ನು ಪ್ರಾರಂಭಿಸುವಾಗ ಸರಿಯಾದ ಮಾರ್ಕೆಟಿಂಗ್ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಹವಾ ಜೋರಾಗಿರುವುದರಿಂದ ಮಾರ್ಕೆಟಿಂಗ್ ಮಾಡುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ಬೇಕಾದಷ್ಟು ಫೇಸ್‌ಬುಕ್ ಪೇಜ್‌ಗಳು ಇದಕ್ಕಾಗಿ ಕಾರ್ಯ ನಿರ್ವಹಿಸುತ್ತವೆ. ನೀವು ನಿಮ್ಮದೇ ಆದ ವೆಬ್‌ಸೈಟ್, ಫೇಸ್‌ಬುಕ್ ಪೇಜ್ ರಚಿಸಿ ಅದರ ಮೂಲಕ ಜನರಿಗೆ ನಿಮ್ಮ ಸಂಸ್ಥೆಗಳ ಬಗ್ಗೆ ತಿಳಿಸಬಹುದು. ಇದನ್ನು ಹೊರತುಪಡಿಸಿ ಲೋಕಲ್ ಏರಿಯಾಗಳಲ್ಲಿ ಯಾವುದಾದರೂ ವಿಧಾನದ ಮೂಲಕ ಜನರಿಗೆ ನಿಮ್ಮ ಸಂಸ್ಥೆಗಳಿಗೆ ತಿಳಿಸಬಹುದು. ನೀವು ಜಾಹೀರಾತುಗಳಿಗೆ ಖರ್ಚು ಮಾಡಲು ತಯಾರಿರುವವರು ಆಗಿದ್ದರೆ, ಯಾರಾದರೂ ಹಿರಿಯರ ಮೂಲಕ ವಿಡಿಯೋ ಮಾಡಿ ನಿಮ್ಮ ಪೇಜ್ ಅಥವಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಸಾಮಾನ್ಯ ಜಾಹೀರಾತುಗಳಿಗಿಂತ ಈ ರೀತಿಯ ಜಾಹೀರಾತುಗಳು ಜನರನ್ನು ಸುಲಭವಾಗಿ ಆಕರ್ಷಿತರನ್ನಾಗಿ ಮಾಡುತ್ತವೆ. 

ನಿಮ್ಮ ಬ್ಯುಸಿನೆಸ್ ಅನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡುವುದು ಹೇಗೆ?

ಯಾವುದೇ ಬ್ಯುಸಿನೆಸ್ ಪ್ರಾರಂಭಿಸುವಾಗ ಅದರಿಂದ ಆಗುವ ಲಾಭದ ಬಗ್ಗೆಯೂ ಯೋಚಿಸಿ ಮುಂದುವರೆಯುವುದು ಬಹಳ ಒಳ್ಳೆಯದು. ಇಲ್ಲವಾದರೆ ನೀವು ಈ ಬ್ಯುಸಿನೆಸ್ ಪ್ರಾರಂಭಿಸಿ ಯಾವುದೇ ಉಪಯೋಗವಿಲ್ಲ. ಹೀಗಾಗಿ ನೀವು ನೀಡುವ ಸೇವೆಗೆ ತಕ್ಕ ಹಾಗೆ ನೀವು ಬೆಲೆಯನ್ನು ನಿಗದಿಪಡಿಸುವುದು ಉತ್ತಮ. ಸಿಬ್ಬಂದಿ ವೇತನ, ನಿಮ್ಮ ಕಚೇರಿ ಬಾಡಿಗೆ(ಇದ್ದರೆ), ಇತರ ಖರ್ಚುಗಳನ್ನು ಸರಿದೂಗಿಸಲು ನಿಮಗಾಗುವ ಖರ್ಚು ಇವೆಲ್ಲವನ್ನೂ ಸರಿಯಾಗಿ ಲೆಕ್ಕಹಾಕಿ ಲಾಭಾಂಶವನ್ನು ಇಟ್ಟುಕೊಂಡು ನೀವು ಬೆಲೆ ನಿಗದಿಪಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ನೀವು ನಷ್ಟವನ್ನು ಅನುಭವಿಸುವ ಅನಿವಾರ್ಯತೆ ಎದುರಾದೀತು. ಆದರೆ ನೆನಪಿರಲಿ, ನಿಮ್ಮ ಗ್ರಾಹಕರು ನಿಮಗೆ ಪಾವತಿಸುವ ಹಣಕ್ಕೆ ಅವರಿಗೆ ಉತ್ತಮ ಸೇವೆಗಳನ್ನು ಕೊಡುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಯಾವುದೇ ಸೇವೆಗಳನ್ನು ತೆಗೆದುಕೊಳ್ಳುವಾಗ ಜನರು ಆ ಸಂಸ್ಥೆ ಅಥ ಸೇವೆಗೆ ಜನರು ಕೊಟ್ಟಿರುವ ರಿವ್ಯೂಗಳ ಮೇಲೆ ಮುಂದುವರೆಯಲು ಇಚ್ಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ಉತ್ತಮ ಸೇವೆಯನ್ನು ಒದಗಿಸುವುದು ನಿಮ್ಮ ಸಂಸ್ಥೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಹೀಗಾಗಿ ಲಾಭದ ಜೊತೆಗೆ ಉತ್ತಮ ಸೇವೆ ಕೂಡ ನಿಮ್ಮ ಗುರಿಯಾಗಿರಲಿ. 

ಆಧುನಿಕ ಸೇವೆಗಳನ್ನು ಬಳಸಿಕೊಳ್ಳಿ 

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸ ಕಡಿಮೆ ಮಾಡುವ ಆಧುನಿಕ ಆಯ್ಕೆಗಳು ಬಹಳಷ್ಟಿವೆ. ಅಕೌಂಟ್ಸ್ ಸಂಬಂಧಿತ, ಟ್ಯಾಲಿ ಸಂಬಂಧಿತ ಅಥವಾ ನಿಮ್ಮ ಸಿಬ್ಬಂದಿಗಳನ್ನು ಸುಲಭವಾಗಿ ನಿರ್ವಹಿಸಲು, ಅವರ ವೇತನ ಎಲ್ಲವನ್ನು ನಿರ್ವಹಿಸಲು ಬೇಕಾದಷ್ಟು ಮೊಬೈಲ್ ಅಪ್ಲಿಕೇಶನ್ ಗಳು ಲಾಭವಿದ್ದು ನೀವು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. 

ಉಪಸಂಹಾರ

ವೈದ್ಯಕೀಯವಲ್ಲದ ಹೋಮ್ ಕೇರ್ ಬ್ಯುಸಿನೆಸ್ ಹಿರಿಯರು ತಮ್ಮ ಸ್ವಂತ ಮನೆಯಲ್ಲಿ ಸಾಧ್ಯವಾದಷ್ಟು ಕಾಲ ಸ್ವತಂತ್ರವಾಗಿರಲು ಸಹಾಯ ಮಾಡುವ ಸೇವೆಗಳನ್ನು ಒದಗಿಸುತ್ತದೆ. ಆರೈಕೆದಾರರು ದಿನಸಿ ಶಾಪಿಂಗ್ ಕೆಲಸಗಳು, ಸ್ನಾನ, ಡ್ರೆಸ್ಸಿಂಗ್, ಶುಚಿಗೊಳಿಸುವಿಕೆ ಮತ್ತು ಊಟ ತಯಾರಿಕೆಯಂತಹ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ. ವೈದ್ಯಕೀಯೇತರ ಹೋಮ್ ಕೇರ್ ಬ್ಯುಸಿನೆಸ್ ಪ್ರಾರಂಭಿಸುವುದು ಶ್ರೀಮಂತ ಸ್ಕೀಮ್ ಅಲ್ಲ, ಆದರೆ ಹಿರಿಯರು ಸ್ವತಂತ್ರ ಜೀವನವನ್ನು ನಡೆಸಲು ಸಹಾಯ ಮಾಡುವ, ಆದಾಯವನ್ನು ಗಳಿಸುವ ಉತ್ತಮ ಮಾರ್ಗವಾಗಿದೆ ಎಂದರೆ ತಪ್ಪಾಗಲಾರದು. ಮೊದಲಿಗೆ ಒಬ್ಬರಿಂದ ಪ್ರಾರಂಭಿಸಿ, ನಂತರ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ನಿಮ್ಮ ಬ್ಯುಸಿನೆಸ್ ಪ್ರಾರಂಭಿಸಲು ಇಲ್ಲಿ ಬಹಳಷ್ಟು ಅವಕಾಶಗಳಿವೆ. ಏಕೆಂದರೆ ಇದಕ್ಕೆ ಬೇಡಿಕೆ ತುಂಬಾ ದೊಡ್ಡದಾಗಿದೆ. ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆದರೆ ಕೆಲವೇ ವರ್ಷಗಳಲ್ಲಿ ನೀವು ಕೈತುಂಬಾ ಆದಾಯ ಗಳಿಸುವುದು ದೂರದ ಮಾತಲ್ಲ.

ಹೆಚ್ಚು ಕೇಳಲಾದ ಪ್ರಶ್ನೆಗಳು

ಪ್ರಶ್ನೆ: ಯಾರು ಬೇಕಾದರೂ ಇದನ್ನು ಪ್ರಾರಂಭಿಸಬಹುದೇ?

ಉತ್ತರ:

ಹೌದು, ನೀವು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಆನಂದಿಸುವವರಾಗಿದ್ದರೆ, ಅವರ ಕಾಳಜಿ ನಿರ್ವಹಿಸುವುದು. ಆರೈಕೆ ಮಾಡುವುದು ನಿಮಗೆ ಸಂತೋಷ ತರುವುದಾದರೆ ಜೊತೆಗೆ ನಿಮ್ಮದೇ ಆದ ಸ್ವಂತ ವ್ಯವಹಾರವನ್ನು ನಡೆಸಲು ಬಯಸಿದರೆ, ವೈದ್ಯಕೀಯೇತರ ಹಿರಿಯರ ಆರೈಕೆ ಬ್ಯುಸಿನೆಸ್ ಪ್ರಾರಂಭಿಸಿ.

ಪ್ರಶ್ನೆ: ಈ ಸಂಸ್ಥೆ ಆರಂಭಿಸಲು ಬಂಡವಾಳದ ಅವಶ್ಯಕತೆ ಬಹಳ ಇದೆಯೇ?

ಉತ್ತರ:

ಇಲ್ಲ ಇದಕ್ಕೆ ಬಹಳಷ್ಟು ಬಂಡವಾಳದ ಅಗತ್ಯವಿಲ್ಲ. ಸಿಬ್ಬಂದಿಗಳ ವೇತನ, ಬ್ಯುಸಿನೆಸ್ ರಿಜಿಸ್ಟ್ರೇಷನ್ ಮಾರ್ಕೆಟಿಂಗ್ ನಂತಹ ಕೆಲವು ಸಣ್ಣ ಪುಟ್ಟ ಅವಶ್ಯಕತೆಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಹೆಚ್ಚಿನ ಹಣದ ಅವಶ್ಯಕತೆಯಿಲ್ಲ.

ಪ್ರಶ್ನೆ: ಹಿರಿಯರ ಆರೈಕೆ ಕೇಂದ್ರ ಪ್ರಾರಂಭಿಸಲು ನರ್ಸಿಂಗ್ ಪದವಿ ಅಗತ್ಯವಿದೆಯೇ?

ಉತ್ತರ:

ಇಲ್ಲ ಮೆಡಿಕಲ್ ರಹಿತ ಸೇವೆಗಳಿಗೆ ಯಾವುದೇ ನರ್ಸಿಂಗ್ ಡಿಗ್ರಿ ಅಥವಾ ಮೆಡಿಕಲ್ ಹಿನ್ನೆಲೆ ಅವಶ್ಯಕತೆಯಿಲ್ಲ. ಹಿರಿಯರ ಜೊತೆಗೆ ಬೆರೆಯಲು, ಅವರ ಜೊತೆ ಸಮಯ ಕಳೆಯುವುದು ಸಂತಸ ತಂದರೆ, ನೀವು ಈ ಸೇವೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.