written by khatabook | October 26, 2020

ಭಾರತದಲ್ಲಿ ಬೇಕರಿ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ? - ಹೆಚ್ಚುವರಿ ಆದಾಯವನ್ನುಗಳಿಸಲು ಸಲಹೆಗಳು!

×

Table of Content


ಸ್ನೇಹಿತರ ಬರ್ತ್‌ಡೇ ಪಾರ್ಟಿಗಾಗಿ ಕಾಲೇಜಿನಲ್ಲಿರುವ ಪ್ರತಿಯೊಬ್ಬರೂ ಕೇಕ್ ತಯಾರಿಸಲು ನಿಮ್ಮ ಬಳಿ ಕೇಳಿಕೊಳ್ಳುತ್ತಿದ್ದಾರಾ? ನಿಮಗೆ ತಿಳಿದಿರುವ ಪಾಕ ಕೌಶಲ್ಯವನ್ನು ಪ್ರಯೋಗಿಸಲು ಇಷ್ಟಪಡುತ್ತೀರಾ? ಬೇಕಿಂಗ್ ಬಗ್ಗೆ ನಿಮಗಿರುವ ಉತ್ಸಾಹದಿಂದ ಹಣವನ್ನು ಗಳಿಸಲು ನೀವು ಆಸಕ್ತಿ ಹೊಂದಿದ್ದೀರಾ? ಕೆಲವು ಪರಿಣಾಮಕಾರಿ ಸಲಹೆಗಳನ್ನು ಪಡೆಯಲು ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ!

ಭಾರತದಲ್ಲಿ ನಿಮ್ಮ ಸ್ವಂತ ಬೇಕರಿ ವ್ಯವಹಾರವನ್ನು ಪ್ರಾರಂಭಿಸುವ ನಿರ್ಧಾರ, ಖಂಡಿತವಾಗಿಯೂ ಬುದ್ಧಿವಂತ ನಿರ್ಧಾರ! ಭಾರತದಲ್ಲಿಈ ದಿನಗಳಲ್ಲಿ ಬೇಕರಿಗಳು ಜನಪ್ರಿಯ ಬ್ಯುಸಿನೆಸ್ ಆಗಿದೆ. ಜಾಗತೀಕರಣ ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವ ಭಾರತೀಯರ ಆಸಕ್ತಿಯಿಂದಾಗಿ, ಬೇಕರಿ ವಸ್ತುಗಳ ಬೇಡಿಕೆ ಕಳೆದ ಒಂದೆರಡು ವರ್ಷಗಳಲ್ಲಿ ಸ್ಥಿರವಾಗಿ ಏರಿಕೆಯಾಗಿದೆ. ಭಾರತೀಯ ನಗರಗಳಲ್ಲಿನ ಪ್ರತಿಯೊಂದು ಬೀದಿಯಲ್ಲಿ ಕನಿಷ್ಠ ಒಂದು ಬೇಕರಿ ಅಂಗಡಿಯಾದರೂ ಇರುವುದನ್ನು ನೀವು ಗಮನಿಸಿರಬಹುದು.

ಪ್ರಮುಖ ಮಾರುಕಟ್ಟೆ ಸಂಶೋಧನಾ ಕಂಪನಿ IMRC ಮಾರ್ಚ್ 2019ರಲ್ಲಿ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ, ಭಾರತೀಯ ಬೇಕರಿ ಮಾರುಕಟ್ಟೆಗಳು 2018ರಲ್ಲಿ 7.22 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದೆ ಎಂದು ಹೇಳಿದೆ. ಮುಂದಿನ 5 ವರ್ಷಗಳಲ್ಲಿ ಮಾರುಕಟ್ಟೆ ಮೌಲ್ಯವು 12 ಬಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ. ಬೇಕರಿ ಅಂಗಡಿಯೊಂದನ್ನು ತೆರೆಯುವ ಬ್ಯುಸಿನೆಸ್ ಯೋಜನೆ ಬಗ್ಗೆ ನಾವು ಆಳವಾಗಿ ತಿಳಿದುಕೊಳ್ಳೋಣ. ಬೇಕರಿ ಅಂಗಡಿ ತೆರೆಯಲು ತಿಳಿದುಕೊಳ್ಳಬೇಕಾದ ಅಂಶಗಳನ್ನು ಚರ್ಚಿಸೋಣ.

ಭಾರತದಲ್ಲಿ ಬೇಕರಿ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ನಿಮ್ಮ ಬೇಕರಿ ಬ್ಯುಸಿನೆಸ್ ರಚನೆ, ರೀತಿ ಮತ್ತು ಸ್ವರೂಪವನ್ನು ನಿರ್ಧರಿಸಿ

  • ಹೋಮ್ ಆನ್‌ಲೈನ್ ಬೇಕರಿ: ನಿಮ್ಮ ಕೆಲಸದ ಫೋಟೋಗಳನ್ನುಮತ್ತು ಗ್ರಾಹಕರಿಂದ ಪ್ರಶಂಸಾಪತ್ರಗಳನ್ನು ಹೊಂದಿರುವ ವೆಬ್‌ಸೈಟ್‌ನೊಂದಿಗೆ,ನೀವು ಆನ್‌ಲೈನ್‌ನಲ್ಲಿ ಬೇಕರಿ ಸೇವೆಯನ್ನು ಪ್ರಾರಂಭಿಸಬಹುದು. ನೀವು ಅದನ್ನು ನಿಮ್ಮ ಮನೆಯಿಂದಲೇ ನಡೆಸಬಹುದು. ನೀವು ಅಂಗಡಿಯನ್ನುತೆರೆಯುವ ಅಗತ್ಯವಿಲ್ಲ.
  • ಕೌಂಟರ್ ಸರ್ವಿಸ್ ಬೇಕರಿ: ಇಲ್ಲಿ ನೀವು ಬೇಕರಿ ಅಂಗಡಿಯನ್ನು ತೆರೆಯಬಹುದು, ಆ ದಾರಿಯಾಗಿ ಹೋಗುವಾಗ ಗ್ರಾಹಕರು ತಿಂಡಿಗಳನ್ನುತೆಗೆದುಕೊಂಡು ಹೋಗಬಹುದು.
  • ಸಿಟ್ ಡೌನ್ ಟು ಡೈನ್ ಬೇಕರಿ ಶಾಪ್: ನಿಮ್ಮ ಗ್ರಾಹಕರು ಖರೀದಿಸಿ, ಕುಳಿತುಕೊಂಡು ಆರಾಮದಾಯಕ ತಿಂಡಿಗಳನ್ನು ಸವಿಯುವ ಸ್ಥಳವನ್ನು ನೋಡಿ ನೀವು ಅಂಗಡಿ ತೆರೆಯಬಹುದು.
  • ಫುಡ್ ಟ್ರಕ್ ಬೇಕರಿ ಶಾಪ್: ಬೇಕರಿ ಅಂಗಡಿಯನ್ನು ಬೀದಿ ಬದಿ ನಡೆಸುವ ಬದಲು, ನಿಮ್ಮ ಉತ್ಪನ್ನಗಳನ್ನುಮನೆಯಲ್ಲಿ ಬೇಯಿಸಿ ನಂತರ ಚಲಿಸುವ ಟ್ರಕ್‌ನಲ್ಲೂ ಮಾರಾಟ ಮಾಡಬಹುದು.
  • ಹೋಲ್ ಸೇಲ್ ಬೇಕರಿ: ನಿಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಬದಲು, ನಿಮ್ಮ ಉತ್ಪನ್ನಗಳನ್ನುಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಕಿರಾಣಿ ಅಂಗಡಿಗಳಂತಹ ವಿವಿಧ ಬ್ಯುಸಿನೆಸ್‌ಗಳಿಗೆ ಮಾರಾಟ ಮಾಡಬಹುದು.

ಬೇಕರಿ ಶಾಪ್ ಬ್ಯುಸಿನೆಸ್ ಯೋಜನೆಯನ್ನು ರಚಿಸಿ

ಭಾರತದಲ್ಲಿ ಬೇಕರಿ ಬ್ಯುಸಿನೆಸ್ ಪ್ರಾರಂಭಿಸುವ ಮೊದಲು, ವಿವಿಧ ವಿಷಯಗಳನ್ನುಅಧ್ಯಯನ ಮಾಡಿ ಮತ್ತು ಬೇರೆ ಬೇರೆ ಬೇಕರಿ ಉದ್ಯಮಿಗಳ ಬಳಿ ಮಾತನಾಡಿ ನಂತರ ಸರಿಯಾದ ವ್ಯಾಪಾರ ಯೋಜನೆಯನ್ನು ರೂಪಿಸಿ. ಕೆಲಸವನ್ನು ಸುಗಮಗೊಳಿಸಲು, ನಿಮ್ಮ ಬೇಕರಿಯ ಬಜೆಟ್ ಮತ್ತು ಕಾರ್ಯದ ವಿಧಾನವನ್ನು ನಿರ್ಧರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

  • ಬ್ಯುಸಿನೆಸ್ ಯೋಜನೆ ಸಾರಾಂಶ: ನಿಮ್ಮ ವ್ಯವಹಾರದ ಬಗ್ಗೆ ಸ್ಪಷ್ಟ ಸ್ಟೇಟ್‌ಮೆಂಟ್, ನಿಮ್ಮ ಬೇಕರಿ ಅಂಗಡಿಯ ಸಂಕ್ಷಿಪ್ತ ಇತಿಹಾಸ, ಅದರ ಐಡಿಯಾ ಮತ್ತು ನಿಮ್ಮ ಬೇಕರಿ ಅಂಗಡಿಯ ಭವಿಷ್ಯದ ಯೋಜನೆ, ಸ್ಪಷ್ಟಗುರಿಯನ್ನು ನೀವು ಹೊಂದಿರಬೇಕು.
  • ಮಾರುಕಟ್ಟೆ ವಿಶ್ಲೇಷಣೆ: ಮಾರುಕಟ್ಟೆ, ಸ್ಥಳ, ಹೂಡಿಕೆದಾರರು, ಉದ್ದೇಶಿತ ಪ್ರೇಕ್ಷಕರು ಮತ್ತು ಸ್ಪರ್ಧಿಗಳ ಬಗ್ಗೆ ಆಳವಾದ ವಿಶ್ಲೇಷಣೆ ಮಾಡಿ.
  • ಆಕರ್ಷಕ ಕೊಡುಗೆಗಳು ಮತ್ತು ಮೆನು:ಇದು ನಿಮ್ಮ ಬೇಕರಿ ಅಂಗಡಿಯ ವ್ಯವಹಾರದ ಅವಲೋಕನ ಮತ್ತು ನೀವು ಒದಗಿಸುವ ಸೇವೆಗಳ ವಿಧವನ್ನು ಒಳಗೊಂಡಿರಬೇಕು. ಇದು ನಿಮ್ಮ ಗ್ರಾಹಕರಿಗೆ ನೀವು ನೀಡಲು ಹೊರಟಿರುವ ಮೆನು ಮತ್ತು ವಸ್ತುಗಳನ್ನುಒಳಗೊಂಡಿರಬೇಕು.
  • ನಿಮ್ಮಕಾರ್ಯಗಳನ್ನುವಿಂಗಡಿಸಿ: ಬೇಕರಿಯ ಕಾರ್ಯವೈಖರಿ, ಆರ್ಡರ್-ಪ್ಲೇಸ್‌ಮೆಂಟ್ ಸೇವೆಗಳು, ಮೆನು ರಚನೆ, ಕಚ್ಚಾ ವಸ್ತುಗಳ ಖರೀದಿ, ಸಿಬ್ಬಂದಿಗಳ ನೇಮಕಾತಿ ಇತ್ಯಾದಿಗಳ ವಿವರಗಳನ್ನು ಒಳಗೊಂಡಂತೆ ದಿನನಿತ್ಯದ ಕಾರ್ಯಾಚರಣೆಗಳ ಸ್ಪಷ್ಟ ಯೋಜನೆಯನ್ನು ಹೊಂದಿರಿ.
  • ಆರ್ಥಿಕ ವಿಶ್ಲೇಷಣೆ: ಇದು ಹಣದ ಹರಿವಿನ ಸ್ಟೇಟ್‌ಮೆಂಟ್ , ನಿರ್ವಹಣಾ ವೆಚ್ಚಗಳು, ಸ್ಥಿರ ಮತ್ತು ಮರುಕಳಿಸುವ ವೆಚ್ಚಗಳು, ಲಾಭಾಂಶಗಳು ಇತ್ಯಾದಿಗಳನ್ನು ಒಳಗೊಂಡಿರಬೇಕು.
  • SWOT ವಿಶ್ಲೇಷಣೆ:ನಿಮ್ಮ ಬೇಕರಿ ವ್ಯವಹಾರದ SWOT ವಿಶ್ಲೇಷಣೆ ನಿಮ್ಮ ಸ್ವಂತ ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳನ್ನುಗುರುತಿಸಲು ಸಹಾಯ ಮಾಡುತ್ತದೆ..

ನಿಮ್ಮ ಬೇಕರಿ ಅಂಗಡಿಗೆ ಸೂಕ್ತವಾದ ಸ್ಥಳವನ್ನು ಆರಿಸಿ

  • ನಿಮ್ಮ ಬೇಕರಿ ಅಂಗಡಿಯ ಬ್ಯುಸಿನೆಸ್ ಸ್ಥಳವನ್ನು ನಿರ್ಧರಿಸುವುದು ಒಂದು ನಿರ್ಣಾಯಕ ನಿರ್ಧಾರವಾಗಿದೆ ಏಕೆಂದರೆ ಅದು ನಿಮ್ಮ ಮಾರಾಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೈ ಎಂಡ್ ರಸ್ತೆ ಅಥವಾ ಶಾಪಿಂಗ್ ಮಾರುಕಟ್ಟೆಇದಕ್ಕೆ ಉತ್ತಮ ಸ್ಥಳವಾಗಿದ್ದುಅಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಅಲ್ಲದೆ, ಈ ಸ್ಥಳದಲ್ಲಿ ಸಮರ್ಥ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯವೂ ಇರಬೇಕು.
  • ತಾತ್ತ್ವಿಕವಾಗಿ, ಬೀದಿ ಬದಿ ಮಾದರಿಯ ಸಂದರ್ಭದಲ್ಲಿ, ಕಟ್ಟಡದ ನೆಲ ಮಹಡಿಯಲ್ಲಿ ಮುಂಭಾಗದ ಪ್ರದೇಶ ಗೋಚರಿಸುವ ಅಂಗಡಿ ಬೇಕರಿ ವ್ಯವಹಾರಕ್ಕೆ ಸೂಕ್ತವಾಗಿದೆ. ನೀವು ಮೊದಲ ಮಹಡಿಯಲ್ಲಿ ಸಂಪೂರ್ಣ ಸುಸಜ್ಜಿತ ಮತ್ತು ಕ್ರಿಯಾತ್ಮಕ ಅಡುಗೆಮನೆ ಮತ್ತು ನೆಲಮಹಡಿಯಲ್ಲಿ ಡಿಸ್ಪ್ಲೇ ಕಮ್ ಸರ್ವಿಂಗ್ ಪ್ರದೇಶವನ್ನು ಹೊಂದಬಹುದು. ಈ ರೀತಿಯಾಗಿ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನೀವು ಫ್ರೆಶ್ ತಿಂಡಿಗಳನ್ನು ಮಾರಾಟ ಮಾಡಬಹುದು.
  • ನಿಮಗೆ ಜಾಗ ನೀಡಿದವರಿಂದ ಅವನ / ಅವಳ ಭೂಮಿಯನ್ನು ನೀವು ಆಹಾರ ಉತ್ಪನ್ನ ಮಾರಾಟದ ಉದ್ದೇಶಕ್ಕಾಗಿ ಬಳಸುವುದರಿಂದ ತಮಗೆ ಯಾವುದೇ ತೊಂದರೆಯಿಲ್ಲ ಎಂದು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ಪಡೆಯಲು ಮರೆಯಬೇಡಿ.

ಬೇಕರಿ ತೆರೆಯಲು ಎಷ್ಟು ವೆಚ್ಚವಾಗುತ್ತದೆ?

ಭಾರತದಲ್ಲಿ ಬೇಕರಿ ವ್ಯವಹಾರವನ್ನು ಪ್ರಾರಂಭಿಸುವ ವಿವಿಧ ಅಂಶಗಳ ಅಂದಾಜು ವೆಚ್ಚಈ ಕೆಳಗಿನಂತಿರುತ್ತದೆ. ಇದನ್ನು ಉದಾಹರಣೆಯಾಗಿ ಬಳಸಿ.

  • ಬಾಡಿಗೆ: ರೂ. 60,000
  • ಲೈಸೆನ್ಸ್: ಬೇಕರಿ ನಡೆಸಲು ವಿವಿಧ ಪರವಾನಗಿಗಳನ್ನು ಪಡೆಯಬೇಕಾಗುತ್ತದೆ. ನೀವು FSSAIನಿಂದ ಅನುಮೋದನೆ ಪಡೆಯಬೇಕು ಅದಕ್ಕೆ ನಿಮಗೆ ರೂ. 15,000 ವೆಚ್ಚ ತಗುಲಬಹುದು. TIN ಸಂಖ್ಯೆ ಪಡೆಯಲು ರೂ. 10,000 ಬೇಕಾಗಬಹುದು. ಪುರಸಭೆಯ ಆರೋಗ್ಯ ಪರವಾನಗಿ ಪಡೆಯಲು ನಿಮಗೆ ಸುಮಾರು ರೂ. 3000 ಮತ್ತು ಅಗ್ನಿಶಾಮಕ ಪರವಾನಗಿಗೆ ರೂ.1000 ರಿಂದ ರೂ.2000 ಬೇಕಾಗಬಹುದು. ಆದ್ದರಿಂದ, ಒಟ್ಟು ಪರವಾನಗಿಗೆ ಸುಮಾರು ರೂ. 30,000 ವೆಚ್ಚ ತಗುಲಬಹುದು
  • Manpower cost: ನಿಮಗೆ ಮುಖ್ಯ ಬಾಣಸಿಗ, ಹೆಲ್ಪರ್, ಸರ್ವಿಸ್ ಬಾಯ್ಸ್, ಕ್ಯಾಷಿಯರ್ ಮತ್ತು ಸ್ವೀಪರ್ ಇತ್ಯಾದಿಗಳಿಗೆ ಸೇರಿ ಸುಮಾರು 1 ಲಕ್ಷ ರೂ. ಬೇಕಾಗಬಹುದು
  • ಅಡುಗೆ ಮನೆ ಸಲಕರಣೆ: ಸಂಪೂರ್ಣ ಅಡುಗೆಮನೆ ಮತ್ತು ಬೇಕರಿ ಯಂತ್ರೋಪಕರಣಗಳನ್ನುಸೆಟ್ ಮಾಡಲು ಸುಮಾರು 8 ಲಕ್ಷ ರೂ.ವರೆಗೆ ಬೇಕಾಗಬಹುದು
  • ಮಾರ್ಕೆಟಿಂಗ್: ಡಿಸ್ಪ್ಲೇ ಬೋರ್ಡುಗಳು, ಕರಪತ್ರಗಳು ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್‌ನಂತಹ ಮಾರ್ಕೆಟಿಂಗ್ ಕೆಲಸಗಳಿಗೆ ಸುಮಾರು 50,000.ರೂ. ಬೇಕಾಗಬಹುದು
  • ವಿವಿಧ ವೆಚ್ಚಗಳು: ಮುಖ್ಯಸ್ಥರ ಸಮವಸ್ತ್ರ, ಡಿಸ್ಪ್ಲೇ ಇತ್ಯಾದಿಗಳ ವಿವಿಧ ವೆಚ್ಚಗಳು ಸುಮಾರು 20,000ದವರೆಗೆ ತಗುಲಬಹುದು.

ಭಾರತದಲ್ಲಿ ಬೇಕರಿ ವ್ಯವಹಾರವನ್ನು ಪ್ರಾರಂಭಿಸಲು ಒಟ್ಟು ಅಂದಾಜು ವೆಚ್ಚ ಸುಮಾರು 10-12 ಲಕ್ಷ ರೂ. ಆದಾಗ್ಯೂ, ಸಲಕರಣೆಗಳ ವೆಚ್ಚ ಮತ್ತು ಸ್ಥಳದ ಅಂದಾಜು ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸಕ್ಕೆ ಕಾರಣವಾಗಬಹುದು.

ಭಾರತದಲ್ಲಿ ಬೇಕರಿ ವ್ಯವಹಾರವನ್ನು ತೆರೆಯಲು ಉಪಕರಣಗಳು ಬೇಕಾಗುತ್ತವೆ

ಮೂಲ ಅಥವಾ ಉನ್ನತ ಮಟ್ಟದ ಬೇಕರಿ ಅಡುಗೆಮನೆಯಾಗಿರಲಿ, ನೀವು ಉತ್ತಮ ಉತ್ಪನ್ನಗಳನ್ನು ತಯಾರಿಸಲು ಬಯಸಿದರೆ ಉತ್ತಮ ಗುಣಮಟ್ಟದ ಉಪಕರಣಗಳ ಅಗತ್ಯವಿದೆ. ಏಕೆಂದರೆ ಪ್ರತೀ ಉಪಕರಣವು ಉತ್ತಮ ಗುಣಮಟ್ಟದ ಗಟ್ಟಿಯಾದ ಮತ್ತು ದೀರ್ಘಕಾಲೀನ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಉನ್ನತ ಮಟ್ಟದ ಗಾಜಿನ ಸಾಮಾನುಗಳಿಂದ ಕೂಡಿರುತ್ತದೆ.

  • ಹಿಟ್ಟು ತಯಾರಿ ಮತ್ತು ಕೇಕ್ ಮೇಕರ್ಸ್: ಸಂಪೂರ್ಣ ಕ್ರಿಯಾತ್ಮಕ ಬೇಕರಿಯ ಪ್ರಮುಖ ಉಪಕರಣಗಳು ಪ್ಲಾನೆಟರಿ ಮಿಕ್ಸರ್ಗಳು, ಓವನ್, ಡೀಪ್ ಫ್ರಿಜ್, ಕೂಲಿಂಗ್ ಫ್ರಿಜ್, ವರ್ಕಿಂಗ್ ಟೇಬಲ್, ಗ್ಯಾಸ್ ಸ್ಟೌವ್, ಸಿಲಿಂಡರ್ ಇತ್ಯಾದಿಗಳನ್ನು ಒಳಗೊಂಡಿದೆ.
  • Storage: ನಿಮ್ಮಅಡುಗೆ ಕೋಣೆಯನ್ನು ವ್ಯವಸ್ಥಿತವಾಗಿಡಲು ಉತ್ತಮ ಶೇಖರಣಾ ಪಾತ್ರೆಗಳು ನಿಮಗೆ ಸಹಾಯ ಮಾಡುತ್ತವೆ. ಅಲ್ಲದೆ, ಅಡುಗೆಮನೆಯಲ್ಲಿ ದೊಡ್ಡ ಚೀಲ ಹಿಟ್ಟು ಮತ್ತು ಸಕ್ಕರೆಯನ್ನು ಸರಿಸಲು ಟ್ರಕ್ ಮತ್ತು ಬಂಡಿಗಳನ್ನು ಖರೀದಿಸಿ.
  • ಡಿಸ್ಪ್ಲೇ ಮತ್ತು ಸೇಲ್ಸ್: ಡಿಸ್ಪ್ಲೇ ಕೇಸ್ ಗಳನ್ನುಎಚ್ಚರಿಕೆಯಿಂದ ಆರಿಸಿ ಏಕೆಂದರೆ ಅವುಗಳು ಹೆಚ್ಚು ಆಕರ್ಷಕವಾಗಿರುತ್ತವೆ, ಮತ್ತು ನೀವು ಹೆಚ್ಚಿನ ಮಾರಾಟವನ್ನು ಪಡೆಯುತ್ತೀರಿ. ನಿಮ್ಮ ಸರಕುಗಳ ಪ್ಯಾಕೇಜಿಂಗ್ ಮತ್ತು ಮಾರಾಟಕ್ಕಾಗಿ ಸೊಗಸಾದ ಪೆಟ್ಟಿಗೆಗಳನ್ನು ಆಯ್ಕೆಮಾಡಿ.
  • ಕ್ಲೀನಿಂಗ್ ಮತ್ತು ಸ್ಯಾನಿಟೇಶನ್: ನಿಮ್ಮ ಕ್ಲೀನಿಂಗ್ ಪ್ರದೇಶಕ್ಕಾಗಿ ಮೂರು ವಿಭಾಗದ ಸಿಂಕ್ ಇರಲಿ. ನಿಮ್ಮ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಕೈ ತೊಳೆಯುವ ಸ್ಟೇಷನ್ ಗಳನ್ನು ನೀವು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಉತ್ತಮ ನೈರ್ಮಲ್ಯಕ್ಕಾಗಿ ನೀವು ಬಿಸಾಡಬಹುದಾದ ಗ್ಲೋವ್ಸ್ ಬಳಸಬೇಕು. ನೀವು ಕ್ಲೀನಿಂಗ್ ರಾಸಾಯನಿಕಗಳು, ಸ್ಕ್ರಬ್ಬರ್‌ಗಳು ಮತ್ತು ಇತರ ಶುಚಿಗೊಳಿಸುವ ವಸ್ತುಗಳನ್ನು ಖರೀದಿಸಬೇಕು.
  • POS /a> ಮತ್ತು ಬಿಲ್ಲಿಂಗ್ ಸಾಫ್ಟ್ ವೇರ್ ಇನ್ಸ್ಟಾಲ್ ಮಾಡಿ<: ಇತ್ತೀಚಿನ ದಿನಗಳಲ್ಲಿ POS ದಾಸ್ತಾನು ನಿರ್ವಹಣಾ ಸಾಫ್ಟ್ ವೇರ್ ನೊಂದಿಗೆಬರುತ್ತವೆ. ಇದು ಬಿಲ್ಲಿಂಗ್ ಮಾಡುತ್ತದೆ, ನಿಮ್ಮ ಶೆಲ್ಫ್ ನಲ್ಲಿರುವ ಬಿಲ್ ಮಾಡಿದ ವಸ್ತುಗಳನ್ನು ಮತ್ತು ಬೇಗ ಹಾಳಾಗುವ ವಸ್ತುಗಳನ್ನು ಟ್ರ್ಯಾಕ್ ಮಾಡುತ್ತದೆ

ಹೆಚ್ಚುವರಿ ಆದಾಯವನ್ನು ಗಳಿಸಲು ನಿಮಗೆ ಕಾರಣವಾಗುವ ಸಲಹೆಗಳು

  • ಪ್ಯಾಕೇಜಿಂಗ್ ಅನ್ನು ಆಕರ್ಷಕವಾಗಿ ಮಾಡಿ: ಈ ದಿನಗಳಲ್ಲಿ ಜನರು ತಮ್ಮ ಉತ್ಪನ್ನಗಳನ್ನು ಜನರಿಗೆ ಎದ್ದು ಕಾಣುವಂತೆ ಮಾಡಲು ಪ್ಯಾಕೇಜಿಂಗ್ ಮಾಡುವ ಸಣ್ಣ ಬ್ರಾಂಡ್‌ಗಳಿಂದ ಆಕರ್ಷಿತರಾಗುತ್ತಿದ್ದಾರೆ. ಉತ್ತಮ ನೋಟದ ಜೊತೆಗೆ ವಿಶಿಷ್ಟ ಪ್ಯಾಕೇಜಿಂಗ್ ನಿಮ್ಮ ಉತ್ಪನ್ನಕ್ಕೆ ಸಂಬಂಧಿಸಿದ ನೆನಪುಗಳನ್ನು ವಿಶೇಷವಾಗಿಸುತ್ತದೆ.
  • ಸಾಮಾಜಿಕ ಜಾಲತಾಣದ ಬಳಕೆ: ನಿಮ್ಮ ಫೋನ್ ಅಥವಾ DSLR ಬಳಸಿ ನಿಮ್ಮ ಉತ್ಪನ್ನದ ಉತ್ತಮ ಮತ್ತು ಆಕರ್ಷಕ ಚಿತ್ರಗಳನ್ನು ಕ್ಲಿಕ್ ಮಾಡಿ. ಈ ಚಿತ್ರಗಳು ಇಮೇಜ್ ಆಧಾರಿತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ Instagram, Snapchat, Facebook ಮತ್ತು Pinterestನಲ್ಲಿ ನಿಮ್ಮ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತವೆ. ಚಿತ್ರಗಳು ಗ್ರಾಹಕರ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ, ಅದು ನಿಮ್ಮ ಉತ್ಪನ್ನಗಳನ್ನು ಆರ್ಡರ್ ಮಾಡಲು ಅವರನ್ನು ಪ್ರಚೋದಿಸುತ್ತದೆ.
  • ಉತ್ತಮ ಡಿಸ್ಪ್ಲೇ ಮತ್ತು ವಾತಾವರಣವನ್ನು ಇರಲಿ: ನಿಮ್ಮ ಕೆಫೆ ಅಥವಾ ಬೇಕರಿ ಅಂಗಡಿಯ ಕ್ಯಾಬಿನೆಟ್‌ಗಳು ಕೇಕ್, ಪೇಸ್ಟ್ರಿ, ಮಫಿನ್ ಇತ್ಯಾದಿಗಳಂತಹ ಆಕರ್ಷಕವಾದ ಮತ್ತುಬಾಯಲ್ಲಿ ನೀರೂರಿಸುವ ಉತ್ಪನ್ನಗಳಿಂದ ಕೂಡಿದೆ ಎಂದು ಖಚಿತಪಡಿಸಿಕೊಳ್ಳಿ.
  • ಉಚಿತ ಸ್ಯಾಂಪಲ್ ಕೊಡುಗೆ: ಹೆಚ್ಚುವರಿ ಕೇಕ್ ಪೀಸ್ ಅಥವಾ ಮಫಿನ್ ಅನ್ನುಯಾರು ಆನಂದಿಸುವುದಿಲ್ಲಹೇಳಿ ಅದೂ ಕೂಡ ಸಂಪೂರ್ಣ ಉಚಿತವಾಗಿ! ನಿಮ್ಮ ಸಂಭಾವ್ಯ ಗ್ರಾಹಕರು ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನದನ್ನು ಆರ್ಡರ್ ಮಾಡಿದಾಗ ನಿಮ್ಮ ಅತ್ಯುತ್ತಮ ಪಾಕಶಾಲೆಯ ಸತ್ಕಾರಗಳನ್ನು ನೀವು ತೋರಿಸಬಹುದು. ಮುಂದಿನ ಬಾರಿ, ಅವರು ಬೇರೆ ಯಾವುದನ್ನಾದರೂ ಆರ್ಡರ್ ಮಾಡಿದಾಗ, ಅದರ ಜೊತೆ ಏನನ್ನು ಖರೀದಿ ಮಾಡಬೇಕೆಂದು ಯೋಚಿಸಲು ಇದು ಸಹಾಯ ಮಾಡುತ್ತದೆ. ಈ ರೀತಿಯಾಗಿ ನೀವು ಕಡಿಮೆ ಮಾರಾಟದ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಬಹುದು.
  • ಬೇಕಿಂಗ್ ತರಗತಿಗಳನ್ನು ನೀಡಿ: ನೀವು ಬೇಕಿಂಗ್‌ನಲ್ಲಿ ಉತ್ತಮವಾಗಿದ್ದರೆ ಮತ್ತು ಬೇಯಿಸುವುದು ಫನ್ ಭಾವಿಸುವ ಅನೇಕ ಜನರಿದ್ದಾರೆ ಎಂದು ನಿಮಗೆ ತಿಳಿದಿದ್ದರೆ, ಆ ಕಲ್ಪನೆಯನ್ನು ಹಣವನ್ನಾಗಿ ಪರಿವರ್ತಿಸಿ! ನಿಮ್ಮ ಸ್ವಂತ ಬ್ರಾಂಡ್ ಬೇಕಿಂಗ್ ಆಫ್‌ಲೈನ್ ಮತ್ತು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿ. ಈ ತರಗತಿಗಳಿಗೆ ನೀವು ಸಾಕಷ್ಟು ಶುಲ್ಕ ವಿಧಿಸಬಹುದು ಮತ್ತು ಈ ರೀತಿಯಾಗಿ ನೀವು ಪರ್ಯಾಯ ಆದಾಯದ ಹರಿವನ್ನು ಸಹ ಹೊಂದಬಹುದು.

ಇನ್ನೂ ನೀವು ಯಾವುದಕ್ಕೆ ಕಾಯುತ್ತಿದ್ದೀರಿ? ಮೊದಲ ಹೆಜ್ಜೆ ಇಡಿ. ಸರಿಯಾದ ಸ್ಥಳ ಮತ್ತು ಲೊಕೇಶನ್ ಹುಡುಕಿ, ಅಗತ್ಯಕ್ಕೆ ಬೇಕಾದಷ್ಟುಹಣವನ್ನುಹೊಂದಿರಿನವೀಕೃತ ಪರವಾನಗಿಗಳು ಮತ್ತು ಪರ್ಮಿಟ್ ಹೊಂದಿರಿ, ನಿಮ್ಮ ಸ್ವಂತ ಬೇಕರಿ ಬ್ಯುಸಿನೆಸ್ ಹೊಂದಲು ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ. ನಿಮ್ಮ ಹೊಸ ಉದ್ಯಮದಲ್ಲಿ ನಿಮಗೆ ಒಳ್ಳೆಯದಾಗಲಿ!

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.