written by khatabook | August 4, 2020

ಜಿಎಸ್‌ಟಿ ಟ್ರ್ಯಾಕಿಂಗ್ - ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಿ

×

Table of Content


ಜುಲೈ 2017 ರಿಂದ ಜಾರಿಗೊಳಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಭಾರತವು ಕಂಡ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ‘ಒನ್ ನೇಷನ್, ಒನ್ ಟ್ಯಾಕ್ಸ್’ ಉಪಕ್ರಮದಡಿಯಲ್ಲಿ ಜಿಎಸ್‌ಟಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಕೇಂದ್ರ ಅಬಕಾರಿ, ಸೇವಾ ತೆರಿಗೆ, ರಾಜ್ಯ ವ್ಯಾಟ್, ಪ್ರವೇಶ ತೆರಿಗೆ, ಐಷಾರಾಮಿ ತೆರಿಗೆ ಇತ್ಯಾದಿ ವಿಧಿಸುವ ವಿವಿಧ ತೆರಿಗೆಗಳನ್ನು ಒಟ್ಟು ಸೇರಿಸಿತು.

ಅನೇಕ ಪರೋಕ್ಷ ತೆರಿಗೆಗಳನ್ನು ಒಂದು ಪ್ರಮಾಣಿತ ತೆರಿಗೆಯೊಂದಿಗೆ ಬದಲಾಯಿಸುವುದರಿಂದ ಕಾಗದಪತ್ರಗಳ ಕೆಲಸವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ, ಇದರಿಂದಾಗಿ ತೆರಿಗೆದಾರರ ಮೇಲಿನ ಹೊರೆ ನೇರವಾಗಿ ಕಡಿಮೆಯಾಗುತ್ತದೆ. ಈ ಲೇಖನದಲ್ಲಿ, ಜಿಎಸ್‌ಟಿ ಬಗ್ಗೆ ನಿಮ್ಮ ಅರಿವನ್ನು ಹೆಚ್ಚಿಸಲು ಕೆಲವು ಪ್ರಮುಖ ಕಾಳಜಿಗಳು ಮತ್ತು ನಿಬಂಧನೆಗಳನ್ನು ಹೈಲೈಟ್ ಮಾಡಲಾಗಿದೆ.

ಜಿಎಸ್‌ಟಿ ನೋಂದಣಿ ಯಾವಾಗ ಅಗತ್ಯ?

ಕೆಳಗೆ ಪಟ್ಟಿ ಮಾಡಲಾದ ವರ್ಗಗಳ ಅಡಿಯಲ್ಲಿ ಬರುವ ಯಾವುದೇ ವ್ಯವಹಾರವು ಜಿಎಸ್‌ಟಿಗೆ ನೋಂದಾಯಿಸಲೇಬೇಕು :

  • ಇ-ಕಾಮರ್ಸ್ ವ್ಯವಹಾರಗಳು, ಅವುಗಳ ವಹಿವಾಟು ಲೆಕ್ಕವಿಲ್ಲ
  • 20 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ರಾಜ್ಯದೊಳಗಿ ವ್ಯವಹಾರಗಳು.
  • ಈಶಾನ್ಯ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ವರ್ಗದ ರಾಜ್ಯಗಳಿಗೆ ರಾಜ್ಯದೊಳಗೆ ರೂ .10 ಲಕ್ಷದವರೆಗೆ ವಹಿವಾಟು ನಡೆಸುವ ವ್ಯವಹಾರಗಳು.

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (ಜಿಎಸ್‌ಟಿಐಎನ್) ಅಗತ್ಯವಿದೆ. ಇದು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲಾದ ಪ್ರತಿ ತೆರಿಗೆದಾರರಿಗೆ ನಿಯೋಜಿಸಲಾದ ಅನನ್ಯ 15 ಅಂಕಿಯ ಸಂಖ್ಯೆಯಾಗಿದ್ದು, ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿ ನಿಮ್ಮನ್ನು ಪ್ರತಿನಿಧಿಸುತ್ತದೆ. ನಿಮ್ಮ ನೋಂದಣಿ ಪೂರ್ಣಗೊಂಡ ನಂತರ ಮಾತ್ರ ನಿಮಗೆ ಜಿಎಸ್‌ಟಿಐಎನ್ ನಿಯೋಜಿಸಲಾಗುತ್ತದೆ.

ಯಾರು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಾಗಿ ಕ್ಲೈಮ್ ಮಾಡಬಹುದು:

  • ವ್ಯವಹಾರದ ವಾರ್ಷಿಕ ವಹಿವಾಟು ಎಷ್ಟೇ ಇರಲಿ ಜಿಎಸ್‌ಟಿಐಎನ್ ಹೊಂದಿರಬೇಕು.
  • ವಿವಿಧ ರಾಜ್ಯಗಳಲ್ಲಿ ಅನೇಕ ವ್ಯವಹಾರಗಳ ಸಂದರ್ಭದಲ್ಲಿ, ಪ್ರತ್ಯೇಕ ನೋಂದಣಿ ಕಡ್ಡಾಯ.
  • ಓರ್ವ ಸಾಮಾನ್ಯ ತೆರಿಗೆದಾರ ಮಾಡುವ ತೆರಿಗೆ ಸಹಿತ ಪೂರೈಕೆ
  • ಇಲ್ಲಿನ ನಿವಾಸಿಯಲ್ಲದ, ಆದರೆ ತೆರಿಗೆದಾರ ವ್ಯಕ್ತಿ ಮಾಡುವ ತೆರಿಗೆ ಸಹಿತ ಪೂರೈಕೆ
  • ರಿವರ್ಸ್ ಚಾರ್ಜ್ ಅಡಿಯಲ್ಲಿ ತೆರಿಗೆ ಪಾವತಿಸಬೇಕಾದ ಜನರು.

ಜಿಎಸ್‌ಟಿ ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ?

ಜಿಎಸ್‌ಟಿ ಆನ್‌ಲೈನ್ ಪಾವತಿಸುವುದು ಈಗ ಅತ್ಯಂತ ಸರಳೀಕೃತ ಪ್ರಕ್ರಿಯೆಯಾಗಿದೆ. ಪ್ರಾರಂಭಿಸಲು, ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

  • PAN ಕಾರ್ಡ್
  • ಆಧಾರ್ ಕಾರ್ಡ್
  • ವ್ಯಾಪಾರ ನೋಂದಣಿ ಪ್ರಮಾಣಪತ್ರ
  • ಇನ್‌ಕಾರ್ಪೊರೇಷನ್ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್
  • ಡಿಜಿಟಲ್ ಸಹಿ

ಜಿಎಸ್‌ಟಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ಹಂತಗಳನ್ನು ಅನುಸರಿಸಿ:

  • ಬ್ರೌಸರ್ ತೆರೆಯಿರಿ ಮತ್ತು ಜಿಎಸ್‌ಟಿ ಪೋರ್ಟಲ್ ವೆಬ್‌ಸೈಟ್ (www.gst.gov.in) ಗೆ ಮುಂದುವರಿಯಿರಿ
  • ‘ನ್ಯೂ ಯೂಸರ್’ ಲಾಗಿನ್ ಟ್ಯಾಬ್ ಆಯ್ಕೆಮಾಡಿ.
  • ನಿಮ್ಮ ವ್ಯವಹಾರಕ್ಕೆ ಅಗತ್ಯವಾದ ಜಿಎಸ್‌ಟಿ ಫಾರ್ಮ್ ಅನ್ನು ಆರಿಸಿ.
  • ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಜಿಎಸ್‌ಟಿ ಫಾರ್ಮ್ ಅನ್ನು ಸಲ್ಲಿಸಿ.
  • ಫಾರ್ಮ್ ಜೊತೆಗೆ ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ಪೂರ್ಣಗೊಂಡ ನಂತರ, ಅಪ್ಲಿಕೇಶನ್ ರೆಫೆರೆನ್ಸ್ ನಂಬರ್ (ARN) ಸ್ವಯಂಚಾಲಿತವಾಗಿ ಸಿದ್ಧವಾಗುತ್ತದೆ.

ನಿಮ್ಮ ಜಿಎಸ್‌ಟಿಐಎನ್ ಪಡೆಯುವವರೆಗೆ ಎಆರ್‌ಎನ್ ತಾತ್ಕಾಲಿಕ ಸಂಖ್ಯೆಯಾಗಿದೆ, ಪೋರ್ಟಲ್‌ನಲ್ಲಿ ನಿಮ್ಮ ನೋಂದಣಿಯ ಸ್ಥಿತಿಯನ್ನು ಪತ್ತೆಹಚ್ಚಲು ಎಆರ್‌ಎನ್ ಬಳಸಬಹುದು. ನಿಮ್ಮ ಅಪ್ಲಿಕೇಶನ್ ಅನ್ನು ಅನುಮೋದಿಸಿದ ನಂತರ, ಮುಂದಿನ ಲಾಗಿನ್‌ಗಳಿಗೆ ಬಳಸಬಹುದಾದ ಜಿಎಸ್‌ಟಿಐಎನ್ ಅನ್ನು ರಚಿಸಲಾಗುತ್ತದೆ.

  • ಪಾಸ್‌ವರ್ಡ್ ಅನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ, ಇಮೇಲ್ ತೆರೆಯಿರಿ ಮತ್ತು ಲಿಂಕ್ ಅನ್ನು ಅನುಸರಿಸಿ.
  • ನಿಮ್ಮನ್ನು ಜಿಎಸ್‌ಟಿ ಪೋರ್ಟಲ್ ಲಾಗಿನ್ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
  • ಗುರುತು ಪತ್ರಗಳನ್ನು ನಮೂದಿಸಿ ಮತ್ತು ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಿದ ಪಾಸ್‌ವರ್ಡ್ ಬಳಸಿ.
  • ಒಮ್ಮೆಆಕ್ಸೆಸ್ ಸಿಕ್ಕ ನಂತರ, ಅಗತ್ಯವಿದ್ದರೆ ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನೀವು ಬದಲಾಯಿಸಬಹುದು.

ನಿಮ್ಮ ಜಿಎಸ್‌ಟಿ ಅರ್ಜಿಯ ಸ್ಟೇಟಸ್ ಅನ್ನುಟ್ರ್ಯಾಕ್ ಮಾಡುವುದು ಹೇಗೆ?

ಒಮ್ಮೆ ನೀವು ಜಿಎಸ್‌ಟಿಗಾಗಿ ನೋಂದಾಯಿಸಿಕೊಂಡ ನಂತರ, ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ವಿವಿಧ ರೀತಿಯಲ್ಲಿ ಟ್ರ್ಯಾಕ್ ಮಾಡಬಹುದು, ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ.   

                                                   

ಜಿಎಸ್‌ಟಿ ಪೋರ್ಟಲ್‌ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸುವುದು

ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಜಿಎಸ್‌ಟಿ ಪೋರ್ಟಲ್ ಅಪ್‌ಡೇಟ್ ಮಾಡುತ್ತದೆ.

  • ವೆಬ್‌ಸೈಟ್ ತೆರೆಯಿರಿ ಮತ್ತು ಲಾಗಿನ್ ಮಾಡಿ.
  • ಪ್ರದರ್ಶಿಸಲಾದ ಪಟ್ಟಿಯಿಂದ ‘ರಿಜಿಸ್ಟ್ರೇಷನ್’ ಆಯ್ಕೆಮಾಡಿ.
  • ‘ಸರ್ವಿಸಸ್’ ಆಯ್ಕೆಮಾಡಿ, ‘ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್’ ಆಯ್ಕೆ ಕಾಣಿಸಿಕೊಳ್ಳುತ್ತದೆ.

ನಿಮ್ಮ ಅಪ್ಲಿಕೇಶನ್‌ನ ಪ್ರಸ್ತುತ ಸ್ಟೇಟಸ್ ಕಾಣಿಸುತ್ತದೆ.

ಈ ಕೆಳಗಿನಂತೆ ನೀವು ತಿಳಿದಿರಬೇಕಾದ ವಿಭಿನ್ನ ಅಪ್ಲಿಕೇಶನ್ ಸ್ಥಿತಿ ಪ್ರಕಾರಗಳಿವೆ:

  • ಎಆರ್‌ಎನ್ ರಚಿಸಲಾಗಿದೆ - ನೋಂದಾಯಿತ ಅರ್ಜಿಯನ್ನು ಸಲ್ಲಿಸುವಾಗ ಟೆಂಪರರಿ ರೆಫರೆನ್ಸ್ ನಂಬರ್ (ಟಿಆರ್‌ಎನ್) ಸ್ಥಿತಿ.
  • ಪೆಂಡಿಂಗ್ ಫಾರ್ ಪ್ರೊಸೆಸ್ಸಿಂಗ್ - ನೋಂದಾಯಿತ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.
  • ಪ್ರಾವಿಷನಲ್ - ನೋಂದಾಯಿತ ಅರ್ಜಿಯನ್ನು ಅನುಮೋದಿಸುವವರೆಗೆ ಚಲನ್ ರಚನೆಯಾಗುವಾಗ (ಸಾಂದರ್ಭಿಕ ತೆರಿಗೆ ಪಾವತಿದಾರರಿಗೆ) ಜಿಎಸ್‌ಟಿಐಎನ್‌ನ ಸ್ಟೇಟಸ್.
  • ಪೆಂಡಿಂಗ್ ಫಾರ್ ವಾಲಿಡೇಶನ್ - ಎಆರ್‌ಎನ್ ಸಿದ್ಧವಾಗುವವರೆಗೆ ನೋಂದಾಯಿತ ಅರ್ಜಿಯನ್ನು ಸಲ್ಲಿಸಿದಾಗ.
  • ವಾಲಿಡೇಶನ್ ಎರರ್ - ARN ಸಿದ್ಧವಾಗುವವರೆಗೆ ನೋಂದಣಿ ಅರ್ಜಿಯನ್ನು ಸಲ್ಲಿಸುವಾಗ, ವಾಲಿಡೇಶನ್ ವಿಫಲವಾದರೆ.

ಜಿಎಸ್‌ಟಿ ಪೋರ್ಟಲ್‌ಗೆ ಲಾಗಿನ್ ಆಗದೆ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸುವುದು

ಒಂದು ವೇಳೆ ನೀವು ಜಿಎಸ್‌ಟಿ ಪೋರ್ಟಲ್‌ಗೆ ಲಾಗಿನ್ ಆಗದೆ ನಿಮ್ಮ ಅರ್ಜಿಯನ್ನು ಸಲ್ಲಿಸಿದ್ದರೂ, ನೀವು ಎಆರ್‌ಎನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

  • ಜಿಎಸ್‌ಟಿ ಪೋರ್ಟಲ್ ತೆರೆಯಿರಿ, ರಿಜಿಸ್ಟ್ರೇಷನ್’, ನಂತರ ‘ಸರ್ವಿಸಸ್’ ಆಯ್ಕೆಮಾಡಿ.
  • ‘ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್’ ಆಯ್ಕೆ ಕಾಣಿಸುತ್ತದೆ, ಅದನ್ನುಆಯ್ಕೆ ಮಾಡಿ.
  • ತೆರೆದ ನಂತರ, ‘ಟ್ರಾಕ್ ಅಪ್ಲಿಕೇಶನ್ ವಿಥ್ ಎಆರ್‌ಎನ್’ ಆಯ್ಕೆ ಮಾಡಿ
  • ನಿಮ್ಮ ಎಆರ್‌ಎನ್ ನಮೂದಿಸಬೇಕಾದ ಸ್ಥಳದಲ್ಲಿಅಡ್ಡಲಾದ ಕಾಲಮ್ ಕಾಣಿಸುತ್ತದೆ.
  • ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಿದ ಅದೇ ಎಆರ್‌ಎನ್ ನಮೂದಿಸಿ.
  • ಕ್ಯಾಪ್ಚಾವನ್ನುಭರ್ತಿ ಮಾಡಲು ಮುಂದುವರಿಯಿರಿ ಮತ್ತು ‘ಸರ್ಚ್’ ಕ್ಲಿಕ್ ಮಾಡಿ.

ಜಿಎಸ್‌ಟಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ತೆರಿಗೆದಾರರಿಗೆ ಜಿಎಸ್‌ಟಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ತೆರಿಗೆದಾರರ ವ್ಯವಹಾರದ ಸ್ಥಳದಲ್ಲಿ ಪ್ರದರ್ಶಿಸಬೇಕು. ಜಿಎಸ್‌ಟಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಪೋರ್ಟಲ್‌ಗೆ ಲಾಗಿನ್ ಮಾಡಿ (www.gst.gov.in)
  • ‘ಸರ್ವಿಸಸ್’, ನಂತರ ‘ಯೂಸರ್ ಸರ್ವಿಸಸ್’ ಆಯ್ಕೆಮಾಡಿ.
  • ‘ವ್ಯೂ/ ಡೌನ್‌ಲೋಡ್ ಸರ್ಟಿಫಿಕೇಟ್’ ಆಯ್ಕೆ ಕಾಣಿಸುತ್ತದೆ
  • ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಫೈಲ್ ಅನ್ನು ಉಳಿಸಿ.

ಜಿಎಸ್‌ಟಿ ಪ್ರಮಾಣಪತ್ರದ ಮಾನ್ಯತೆ

ಜಿಎಸ್‌ಟಿ ನೋಂದಣಿಯನ್ನು ಜಿಎಸ್‌ಟಿ ಪ್ರಾಧಿಕಾರವು ವಶಪಡಿಸಿಕೊಳ್ಳುವವರೆಗೆ ಅಥವಾ ರದ್ದುಮಾಡುವವರೆಗೆ .ಸಾಮಾನ್ಯ ತೆರಿಗೆ ಪಾವತಿದಾರರಿಗೆ ನೀಡಲಾಗುವ ಜಿಎಸ್‌ಟಿ ಪ್ರಮಾಣಪತ್ರದ ಅವಧಿ ಮೀರುವುದಿಲ್ಲ.

ಸಾಂದರ್ಭಿಕ ತೆರಿಗೆ ಪಾವತಿದಾರ ಅಥವಾ ಅನಿವಾಸಿ ತೆರಿಗೆದಾರರರಿಗೆ ನೀಡಲಾದ, ಪ್ರಮಾಣಪತ್ರದ ಸಿಂಧುತ್ವವು ಗರಿಷ್ಠ 90 ದಿನಗಳವರೆಗೆ ಇರುತ್ತದೆ. ಅದರ ಮಾನ್ಯತೆಯ ಅವಧಿಯ ಕೊನೆಯಲ್ಲಿ ಅದನ್ನು ವಿಸ್ತರಿಸಬಹುದು ಅಥವಾ ನವೀಕರಿಸಬಹುದು.

ಜಿಎಸ್‌ಟಿ ಪ್ರಮಾಣಪತ್ರದಲ್ಲಿ ಬದಲಾವಣೆಗಳಿದ್ದಲ್ಲಿ?

ಜಿಎಸ್‌ಟಿ ನೋಂದಣಿ ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ದರೆ, ತೆರಿಗೆದಾರರು ಜಿಎಸ್‌ಟಿ ಪೋರ್ಟಲ್‌ನಲ್ಲಿ ತಿದ್ದುಪಡಿಯನ್ನು ಮಾಡಬಹುದು. ಈ ತಿದ್ದುಪಡಿಗೆ ತೆರಿಗೆ ಅಧಿಕಾರಿಗಳ ಅನುಮೋದನೆ ಅಗತ್ಯವಿರುತ್ತದೆ.

ಜಿಎಸ್‌ಟಿ ನೋಂದಣಿ ಪ್ರಮಾಣಪತ್ರದಲ್ಲಿ ಅನುಮತಿಸಲಾದ ಕೆಲವು ಬದಲಾವಣೆಗಳು ಹೀಗಿವೆ:

  • PANನಲ್ಲಿನ ಬದಲಾವಣೆಗಳಲ್ಲದೆ, ವ್ಯವಹಾರದ ಕಾನೂನು ಹೆಸರಿನ ಬದಲಾವಣೆಗಳು.
  • ವ್ಯವಹಾರದ ಪ್ರಮುಖ ಸ್ಥಳದಲ್ಲಿನ ಬದಲಾವಣೆಗಳು.
  • ವ್ಯವಹಾರದ ಹೆಚ್ಚುವರಿ ಸ್ಥಳಗಳಲ್ಲಿನ ಬದಲಾವಣೆಗಳು (ರಾಜ್ಯದೊಳಗಿನ ಬದಲಾವಣೆಯನ್ನು ಹೊರತುಪಡಿಸಿ).
  • ವ್ಯಾಪಾರ ಪಾಲುದಾರರು, ವ್ಯವಸ್ಥಾಪಕ ನಿರ್ದೇಶಕರು, ಟ್ರಸ್ಟಿಗಳ ಮಂಡಳಿ, ಸಿಇಒಗಳ ಸೇರ್ಪಡೆ ಅಥವಾ ತೆಗೆದುಹಾಕುವಂತಹ  ಬದಲಾವಣೆಗಳು.

ತಿದ್ದುಪಡಿ ಮಾಡಿದ ಅರ್ಜಿಯನ್ನು ಅನುಮೋದಿಸಿದ ನಂತರ ಅಥವಾ ತಿರಸ್ಕರಿಸಿದ ನಂತರ, ನೀವು SMS ಮೂಲಕ ಇಮೇಲ್ ಅಥವಾ ನೋಟಿಫಿಕೇಶನ್ ಸ್ವೀಕರಿಸುತ್ತೀರಿ. ಅಲ್ಲದೆ, ಸರಿಪಡಿಸಿದ ವಿವರಗಳೊಂದಿಗೆ ತಿದ್ದುಪಡಿ ಮಾಡಿದ ನೋಂದಣಿ ಪ್ರಮಾಣಪತ್ರ ಡೌನ್‌ಲೋಡ್‌ಗೆ ಲಭ್ಯವಿರುತ್ತದೆ.

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.