ಇಲ್ಲಿವರೆಗೆ ನೀವು MyStore ಭಾಗವಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಾವು MyStore ಆ್ಯಪ್ ಸ್ಥಗಿತಗೊಳಿಸಲು ಯೋಜಿಸುತ್ತಿದ್ದೇವೆ. ನಿಮ್ಮ MyStore ಆ್ಯಪ್ 15 ನವೆಂಬರ್ 2021 ರಿಂದ ಕಾರ್ಯ ನಿರ್ವಹಿಸುವುದಿಲ್ಲ. ಇದು ಉತ್ಪನ್ನ ಬಂಡವಾಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಕೈಗೊಂಡ ನಿರ್ಧಾರವಾಗಿದೆ.
ಈ ಪರಿವರ್ತನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.
ಯಾವುದು ಬದಲಾಗುತ್ತಿದೆ
MyStore ಅಧಿಕೃತವಾಗಿ 15 ನವೆಂಬರ್ 2021 ರಂದು ಸ್ಥಗಿತಗೊಳ್ಳುತ್ತದೆ. ಸ್ಥಗಿತಗೊಳಿಸುವ ಮೊದಲು, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ನಾವು ವಿನಂತಿಸುತ್ತೇವೆ.
- ಆರ್ಡರ್ ಇನ್‌ವಾಯ್ಸ್ ಹಂಚಿಕೊಳ್ಳುವ ಮೂಲಕ ಇನ್‌ವಾಯ್ಸ್ ಡೌನ್ಲೋಡ್ ಮಾಡಿ
- ಆ್ಯಪ್ ಅನ್‌ಇನ್ಸ್ಟಾಲ್ ಮಾಡುವ ಮೂಲಕ ಅದನ್ನು ಡಿಲೀಟ್ ಮಾಡಿ
ಈ ಪರಿವರ್ತನೆಯೊಂದಿಗೆ ನಿಮಗೆ ಬೆಂಬಲ ನೀಡಲು ನಾವು ಸದಾ ಸಿದ್ಧರಿದ್ದೇವೆ. ನಿಮ್ಮ MyStore ಆ್ಯಪ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ದಯವಿಟ್ಟು +(91) 9606500500 ಅಥವಾ feedback@khatabook.com ನಲ್ಲಿ ನಮ್ಮನ್ನು ಸಂಪರ್ಕಿಸಬಹುದು.
ನಮ್ಮ ಸಹಯೋಗ ಮುಂದುವರಿಯುತ್ತದೆ ...
ನಿಮ್ಮ ವಿಶ್ವಾಸ ಮತ್ತು ಬೆಂಬಲದ ಬಗ್ಗೆ ನಮಗೆ ಗೌರವವಿದೆ. ನಿಮ್ಮೊಂದಿಗಿನ ನಮ್ಮ ಒಡನಾಟ ಹೀಗೆ ಮುಂದುವರಿಯುತ್ತದೆ. ನಮ್ಮ ಇತರ ತಾಂತ್ರಿಕ ಪರಿಹಾರಗಳೊಂದಿಗೆ ನಿಮ್ಮ ವ್ಯಾಪಾರ ಅಗತ್ಯತೆಗಳನ್ನು ನಾವು ಮುಂದೆಯೂ ಪೂರೈಸುತ್ತೇವೆ.
- Khatabook ನಿಮ್ಮ ಬುಕ್‌ಕೀಪಿಂಗ್ ನಿರ್ವಹಣೆ ಮತ್ತು ಪೇಮೆಂಟ್ ಸ್ವೀಕಾರಕ್ಕಾಗಿ
- Biz Analyst ಬ್ಯುಸಿನೆಸ್ ಇಂಟಲಿಜೆನ್ಸ್ ಮತ್ತು ಬ್ಯುಸಿನೆಸ್ ನಿರ್ವಹಣೆಗಾಗಿ
- Pagarkhata ಸಿಬ್ಬಂದಿ ಮತ್ತು ವೇತನ ನಿರ್ವಹಣೆಗಾಗಿ
- Cashbook ನಗದು ನಿರ್ವಹಣೆ ಮತ್ತು ಅದರ ಟ್ರ್ಯಾಕಿಂಗ್‌ಗಾಗಿ. ಇದು Khatabook ಆ್ಯಪ್‌ನಲ್ಲಿ ಒಂದು ವೈಶಿಷ್ಟ್ಯವಾಗಿ ಲಭ್ಯವಿದ್ದರೂ, ನಿಮ್ಮಲ್ಲಿ ನಗದು ಮತ್ತು ಖರ್ಚು ನಿರ್ವಹಣಾ ಪರಿಹಾರಗಳಿಗಾಗಿ ಹುಡುಕುತ್ತಿರುವವರಿಗಾಗಿ ನಾವು ಸಂಪೂರ್ಣ ಕ್ರಿಯಾತ್ಮಕ Cashbook ಆಂಡ್ರಾಯ್ಡ್ ಆ್ಯಪ್ ಹೊಂದಿದ್ದೇವೆ.
ಧನ್ಯವಾದಗಳು,
MyStore ತಂಡ