written by khatabook | August 21, 2020

BHIM UPI ಎಷ್ಟು ಸುರಕ್ಷಿತ? | ಪೂರ್ಣ ಮಾಹಿತಿ

×

Table of Content

BHIM UPI ಬಗ್ಗೆ ಸಂಪೂರ್ಣ ಮಾಹಿತಿ

BHIM aka ಭಾರತ್ ಇಂಟರ್ಫೇಸ್ ಫಾರ್ ಮನಿ ಎನ್ನುವುದು ಡಿಸೆಂಬರ್ 30, 2016 ರಂದು ಭಾರತದಲ್ಲಿ ಪ್ರಾರಂಭಿಸಲಾದ ವರ್ಚುವಲ್ ಪೇಮೆಂಟ್ ಆ್ಯಪ್ ಆಗಿದೆ. UPI ಬಳಸಿ ತ್ವರಿತ ಮತ್ತು ಸುಲಭವಾದ ಹಣಕಾಸಿನ ವಹಿವಾಟು ನಡೆಸಲು BHIM ಅಪ್ಲಿಕೇಶನ್ ನಿಮಗೆ ಅವಕಾಶ ನೀಡುತ್ತದೆ. UPI ಅಂದರೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಆಗಿದ್ದು, ಇದು ಹಣವನ್ನು ಸುಲಭವಾಗಿ ವರ್ಗಾಯಿಸಲು ಮತ್ತು ಒಂದೇ ಮೊಬೈಲ್ ಆ್ಯಪ್ ನಲ್ಲಿ ಅನೇಕ ಬ್ಯಾಂಕ್ ಖಾತೆಗಳನ್ನು ಬಳಸಲು ನಿಮಗೆ ಅನುಮತಿಸುತ್ತದೆ. ಕೇವಲ ಮೊಬೈಲ್ ಸಂಖ್ಯೆ ಅಥವಾ ವರ್ಚುವಲ್ ಪೇಮೆಂಟ್ ಅಡ್ರೆಸ್ (ವಿಪಿಎ) ಯೊಂದಿಗೆ ನೇರವಾಗಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಲು BHIM ಅಪ್ಲಿಕೇಶನ್ ನಿಮಗೆ ಅನುವು ಮಾಡಿಕೊಡುತ್ತದೆ. BHIM ಹೊಂದಿರುವ ವೈಶಿಷ್ಟ್ಯಗಳನ್ನು ನೋಡೋಣ

ಹಣ ಕಳುಹಿಸಿ

BHIM ಆ್ಯಪ್ ಬ್ಯಾಂಕಿನ ಹಣ ವರ್ಗಾವಣೆಗೆ ತ್ವರಿತವಾಗಿ ಅನುಮತಿಸುತ್ತದೆ. ಸೆಂಡ್ ಮನಿ ಆಯ್ಕೆ ಮಾಡಿ ವರ್ಚುವಲ್ ಪೇಮೆಂಟ್ ಅಡ್ರೆಸ್ (VPA) ಬಳಸಿ ಖಾತೆ ಸಂಖ್ಯೆ & IFSC, ಅಥವಾ QR ಸ್ಕ್ಯಾನ್ ಮೂಲಕ ಹಣವನ್ನು ಕಳುಹಿಸಬಹುದು.

ಹಣ ವಿನಂತಿಸಿ

ನೀವು ಇನ್ನೊಬ್ಬರಿಂದ ಹಣವನ್ನು ವಿನಂತಿಸಲು ಬಯಸುವಿರಾ? BHIM UPI ನಿಮಗೆ ಇದನ್ನು ಸುಲಭವಾಗಿಸುತ್ತದೆ. ವರ್ಚುವಲ್ ಪೇಮೆಂಟ್ ಅಡ್ರೆಸ್ (ವಿಪಿಎ) ನಮೂದಿಸುವ ಮೂಲಕ ಹಣವನ್ನು ಕಲೆಕ್ಟ್ ಮಾಡಲು BHIM ಆ್ಯಪ್ ನಲ್ಲಿ ರಿಕ್ವೆಸ್ಟ್ ಮನಿ ಆಯ್ಕೆಯನ್ನು ಬಳಸಿ.

ಸ್ಕ್ಯಾನ್ & ಪಾವತಿಸಿ

ವರ್ಚುವಲ್ ಪೇಮೆಂಟ್ ಅಡ್ರೆಸ್(VPA) ನೆನಪಿಲ್ಲವೇ? ಚಿಂತೆ ಬೇಡ, ಪೇ ವಿಥ್ ಸ್ಕ್ಯಾನ್ ಕೊಡಿ ಮತ್ತು ಪಾವತಿಸಿ. ಪೇಮೆಂಟ್ ಪ್ರಾರಂಭಿಸಲು ಸ್ಕ್ಯಾನ್ & ಪೇ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ. ನೀವು ಬ್ಯುಸಿನೆಸ್ ಹೊಂದಿದ್ದರೆ ಮಾರಾಟದ ವೇಳೆ ಪೇಮೆಂಟ್ ಸ್ವೀಕರಿಸಲು ಅನನ್ಯ QR -ಕೋಡ್ ಅನ್ನು ರಚಿಸಬಹುದು.

ವಹಿವಾಟು

BHIM UPI ನಲ್ಲಿನ ವಹಿವಾಟುಗಳು ನಿಮ್ಮ ಪೇಮೆಂಟ್ ವಹಿವಾಟು ವಿವರ ಮತ್ತು ಬಾಕಿ ಉಳಿದಿರುವ ವಿನಂತಿಗಳು ಯಾವುದಾದರೂ ಇದ್ದರೆ ಪರಿಶೀಲಿಸಲು ನಿಮಗೆ ಅನುಮತಿಸುತ್ತದೆ. ಇಲ್ಲಿಂದ ನೀವು ಆ ವಿನಂತಿಗಳನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು. ರಿಪೋರ್ಟ್ ಇಶ್ಯು ಕ್ಲಿಕ್ ಮಾಡುವ ಮೂಲಕ ನೀವು ದೂರು ಕೂಡ ನೀಡಬಹುದು.

ಪ್ರೊಫೈಲ್

ಪ್ರೊಫೈಲ್ ಎನ್ನುವುದು ನಿಮ್ಮ ಸ್ಥಿರ QR ಕೋಡ್, ಪೇಮೆಂಟ್ ಅಡ್ರೆಸ್ ಮುಂತಾದ ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಹುಡುಕುವ ಸ್ಥಳವಾಗಿದೆ. ಇದಲ್ಲದೆ, ನೀವು Whatsapp, ಇಮೇಲ್, ಮುಂತಾದ ವಿವಿಧ ಮೆಸೇಂಜರ್ ಆ್ಯಪ್ ಗಳ ಮೂಲಕವೂ QR ಅನ್ನು ಹಂಚಿಕೊಳ್ಳಬಹುದು.

ಬ್ಯಾಂಕ್ ಖಾತೆ

BHIM UPI ನಲ್ಲಿನ ಬ್ಯಾಂಕ್ ಅಕೌಂಟ್ ಆಯ್ಕೆಯು ನಿಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳು ಮತ್ತು ಅವುಗಳ UPI PIN ಸ್ಥಿತಿಯನ್ನು ತೋರಿಸುತ್ತದೆ. ನಿಮ್ಮ UPI PIN ಅನ್ನು ನೀವು ಇಲ್ಲಿ ಹೊಂದಿಸಬಹುದು ಅಥವಾ ಬದಲಾಯಿಸಬಹುದು ಮತ್ತು ಮೆನುವಿನಲ್ಲಿ ಒದಗಿಸಲಾದ ಖಾತೆಯನ್ನು ಬದಲಿಸಿ ಕ್ಲಿಕ್ ಮಾಡುವ ಮೂಲಕ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳನ್ನು ಸಹ ಬದಲಾಯಿಸಬಹುದು. ನೀವು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸಿದರೆ ಆಯಾ ಬ್ಯಾಂಕ್ ಖಾತೆಯ ರಿಕ್ವೆಸ್ಟ್ ಬ್ಯಾಲೆನ್ಸ್ ಕ್ಲಿಕ್ ಮಾಡಿ.

BHIM UPI ಪೇಮೆಂಟ್ ಆ್ಯಪ್ ನ SWOT ವಿಶ್ಲೇಷಣೆ

ನಾವು BHIM ಅನ್ನು ಆ್ಯಪ್ ನಂತೆ ವಿಶ್ಲೇಷಿಸಿದಾಗ, ಈ ವರ್ಚುವಲ್ ಪೇಮೆಂಟ್ ವಿಧಾನದ ಸಾಧಕ, ಬಾಧಕಗಳನ್ನು ಮತ್ತು ಅವಕಾಶಗಳನ್ನು ನಾವು ಗುರುತಿಸಬಹುದು.

ಸಾಮರ್ಥ್ಯ BHIM ಬಳಸಲು ತುಂಬಾ ಸುಲಭ ಮತ್ತು NPCIನಿಂದ ಬೆಂಬಲಿಸಲ್ಪಟ್ಟಿದೆ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಇದು ಸರ್ಕಾರಿ ಸಂಸ್ಥೆಯಾಗಿದೆ.
ದೌರ್ಬಲ್ಯ ಆ್ಯಪ್ ನ ಕ್ರಿಯಾತ್ಮಕತೆಗಳ ಬಗ್ಗೆ ಅರಿವಿನ ಕೊರತೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಪೋರ್ಟ್ ಸಿಸ್ಟಮ್ ಕೊರತೆಯಿಂದಾಗಿ, ಅನೇಕ ಅತೃಪ್ತ ಗ್ರಾಹಕರು ಇದ್ದಾರೆ.
ಅವಕಾಶಗಳು ದೇಶಾದ್ಯಂತ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳ ಬಳಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ ಅನೇಕ ಸಂಸ್ಥೆಗಳು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಹಣ ವರ್ಗಾವಣೆ ಸೇವೆಗಳನ್ನು ನೀಡುತ್ತಿವೆ. ಮೆಟ್ರೊ-ಅಲ್ಲದ ( II ಮತ್ತು III) ಪಟ್ಟಣಗಳು ಮತ್ತು ಭಾರತದ ಹಳ್ಳಿಗಳಿಗೆ ಇಂಟರ್ನೆಟ್ ಸೇವೆಗಳ ಪ್ರಸರಣದೊಂದಿಗೆ ಇದನ್ನು ವರ್ಧಿಸಲಾಗಿದೆ.
ತ್ರೆಟ್ ಡಿಜಿಟಲ್ ವಹಿವಾಟು ಸುರಕ್ಷತೆಯು ಅಪ್ಲಿಕೇಶನ್‌ನ ದೊಡ್ಡದಾದ ಸಮಸ್ಯೆ. ಇದು ಅಪ್ಲಿಕೇಶನ್ ಬಳಕೆಯನ್ನು ಕಡಿಮೆ ಮಾಡಬಹುದು

ಇಂಟರ್ನೆಟ್ ಇಲ್ಲದೆ BHIM ಅನ್ನು ಬಳಸಬಹುದಾ?

ಹೌದು ನೀವು ಬಳಸಬಹುದು! ನೀವು ಸ್ಮಾರ್ಟ್‌ಫೋನ್ ಬಳಕೆದಾರರಲ್ಲದಿದ್ದರೆ ಅಥವಾ ಇಂಟರ್ನೆಟ್ ಸಂಪರ್ಕದ ಕೊರತೆಯಿದ್ದರೆ, ನೀವು BHIM UPI app ಬಳಸಿ ಡಿಜಿಟಲ್ ವಹಿವಾಟು ನಡೆಸಬಹುದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಇಲ್ಲಿ ನೋಡಿ:

  1. ನಿಮ್ಮ ಫೋನ್ ನಿಂದ *99# ಡಯಲ್ ಮಾಡಿ.
  2. ನಿಮ್ಮ ನೆಚ್ಚಿನ ಭಾಷೆ ಆಯ್ಕೆ ಮಾಡಿ.
  3. ನೀವು ಮಾಡಲು ಇಚ್ಚಿಸುವ ವಹಿವಾಟಿನ ವಿಧವನ್ನು ಆಯ್ಕೆ ಮಾಡಿ.
  4. ಬ್ಯಾಂಕ್ ಖಾತೆಯಲ್ಲಿರುವ ನಿಮ್ಮ ಹೆಸರು ಅಥವಾ ನಿಮ್ಮ ಬ್ಯಾಂಕ್ ಖಾತೆಯ IFSC ಕೋಡ್ ನ ಮೊದಲ 4 ಡಿಜಿಟ್ ನಮೂದಿಸಿ ಕ್ಲಿಕ್ ಮಾಡಿ“reply”.
  5. ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿದ್ದರೆ, ನೀವು ವಹಿವಾಟು ಮಾಡಲು ಬಯಸುವ ಅಪೇಕ್ಷಿತ ಖಾತೆಯನ್ನು ಆಯ್ಕೆ ಮಾಡಿ.
  6. ಹೆಚ್ಚುವರಿಯಾಗಿ, ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕೆಗಳನ್ನು ನಮೂದಿಸಿ ನಂತರ ಸ್ಪೇಸ್ ಮತ್ತು ನಂತರ ಕಾರ್ಡ್‌ನ ಮುಕ್ತಾಯ ದಿನಾಂಕವನ್ನು ಹಾಕಿ ಪ್ರೆಸ್ ಮಾಡಿ reply.
  7. 6 ಡಿಜಿಟ್ UPI PIN ನಂಬರ್ ನಮೂದಿಸಿ.

ಇಷ್ಟೇ. ಈಗ ವಹಿವಾಟು ಪೂರ್ತಿಯಾಗುತ್ತದೆ!

BHIM UPI ಆ್ಯಪ್ ಬಳಕೆಯ ಪ್ರಯೋಜನಗಳೇನು?

BHIM UPI ಆ್ಯಪ್ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ.

  • ಭಾರತದ ಎಲ್ಲಾ ಬ್ಯಾಂಕುಗಳಲ್ಲಿ ನೀವು ಡಿಜಿಟಲ್ ಪೇಮೆಂಟ್ ಮಾಡಬಹುದು.
  • BHIM ಅಪ್ಲಿಕೇಶನ್ ಬಳಸಲು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
  • ಪ್ರಕ್ರಿಯೆಯು ಸರಳ, ವೇಗ ಮತ್ತು ಸುರಕ್ಷಿತವಾಗಿದೆ
  • ರಜಾ ದಿನ ಮುಗಿಯಲು ಕಾಯಬೇಕಾಗಿಲ್ಲ. ನೀವು ವರ್ಷಕ್ಕೆ 365 ದಿನ ವಹಿವಾಟು ಮಾಡಬಹುದು.
  • ಇಂಟರ್ನೆಟ್ ಸಂಪರ್ಕವಿಲ್ಲದೆ BHIM ಆ್ಯಪ್ ಕಾರ್ಯನಿರ್ವಹಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬೇಸಿಕ್ ಫೋನ್‌ನೊಂದಿಗೆ ಸಹ, ನೀವು UPI ವಹಿವಾಟುಗಳನ್ನು ಮಾಡಬಹುದು..
  • UPI ವರ್ಗಾವಣೆ ಮಿತಿ ಪ್ರತಿ ವಹಿವಾಟಿಗೆ 20,000 ರೂ.
  • ನೀವು ಯಾವುದೇ ಬ್ಯಾಂಕ್ ಆ್ಯಪ್ ನಲ್ಲಿ BHIM UPI ಬಳಸಬಹುದು.
  • ಅಂತಿಮವಾಗಿ, BHIM ಆ್ಯಪ್ ಮೂಲಕ ವಹಿವಾಟು ನಡೆಸಿ ಅದ್ಭುತ ಕ್ಯಾಶ್ ಬ್ಯಾಕ್ ಪಡೆಯಿರಿ

BHIM ಆ್ಯಪ್ ಬಗ್ಗೆ ಕೇಳಲಾದ ಪ್ರಮುಖ ಪ್ರಶ್ನೆಗಳು - ನಾವು ನಿಮಗಾಗಿ ಉತ್ತರಿಸಿದ್ದೇವೆ!

BHIM ಆ್ಯಪ್ ಸುರಕ್ಷಿತ?

ಹೆಚ್ಚು ಕೇಳಿದ ಪ್ರಶ್ನೆಗಳಲ್ಲಿ ಒಂದು. ಹೌದು. BHIM ಅಪ್ಲಿಕೇಶನ್ ಬಳಸಿ ಡಿಜಿಟಲ್ ವಹಿವಾಟು ನಡೆಸುವುದು ಸುರಕ್ಷಿತವಾಗಿದೆ. ಭಾರತದಲ್ಲಿ ಪೇಮೆಂಟ್ ಗಳನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆಯಾದ NPCI ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತಿದೆ, ಈ ಆ್ಯಪ್ ತನ್ನ ಅತ್ಯಂತ ಸುರಕ್ಷಿತ ಪೇಮೆಂಟ್ ಗೇಟ್‌ವೇ ಆಗಿದೆ. 90 ಸೆಕೆಂಡ್ ನಿಷ್ಕ್ರಿಯತೆಯ ನಂತರ, ನಿಮ್ಮನ್ನು ಲಾಕ್ ಮಾಡಲಾಗುತ್ತದೆ ಮತ್ತು ಆ್ಯಪ್ ನಿಂದ ನಿರ್ಗಮಿಸಲಾಗುತ್ತದೆ.

BHIM UPI ಮೂಲಕ ನಾನು GST ಪೇಮೆಂಟ್ ಮಾಡಬಹುದಾ?

ಹೌದು! 29 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಪ್ರಕಾರ, ನೀವು BHIM UPI ಮೂಲಕ ಜಿಎಸ್ಟಿ ಪೇಮೆಂಟ್ ಮಾಡಬಹುದು ನಂತರ ಡಿಜಿಟಲ್ ಪೇಮೆಂಟ್ ಗಾಗಿ ಬಿಲ್ ನ ಜಿಎಸ್ಟಿ ಭಾಗದಲ್ಲಿ ಕ್ಯಾಶ್ ಬ್ಯಾಕ್ ರೂಪದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. ಇದಲ್ಲದೆ, ಜಿಎಸ್ಟಿ ಭಾಗದಲ್ಲಿ ನೀವು 20% ಕ್ಯಾಶ್ ಬ್ಯಾಕ್ ಅನ್ನು ಸಹ ಪಡೆಯುತ್ತೀರಿ, ಅದು ನಿಮಗೆ ಸಲ್ಲುತ್ತದೆ, ಅದು ಪ್ರತಿ ವಹಿವಾಟಿಗೆ 100 ರೂ. ಮಾತ್ರ

ಯಾವುದೇ ಗುಪ್ತ ವೆಚ್ಚವಿದೆಯೇ?

ಕಾರ್ಡ್ ಪಾವತಿಯನ್ನು ಬಳಸುವುದಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸುವ dukaan-maliks ನಮಗೆಲ್ಲರಿಗೂ ತಿಳಿದಿಲ್ಲವೇ? UPI ಬಳಸಿ ಮಾಡುವ ವಹಿವಾಟುಗಳು ಸಂಪೂರ್ಣವಾಗಿ ಉಚಿತ ಮತ್ತು BHIM ಅಪ್ಲಿಕೇಶನ್ ತನ್ನ ಸೇವೆಗಳನ್ನು ಬಳಸುವುದಕ್ಕಾಗಿ ಒಂದು ಪೈಸೆಯನ್ನೂ ವಿಧಿಸುವುದಿಲ್ಲವಾದ್ದರಿಂದ BHIM UPI ನೊಂದಿಗೆ ಪಾವತಿಸುವುದರಿಂದ ಆ ಅನಗತ್ಯ ಹೆಚ್ಚುವರಿ ಬಕ್ಸ್ ಅನ್ನು ಉಳಿಸುತ್ತದೆ.

BHIM ಅಪ್ಲಿಕೇಶನ್ ಸರಿಯಾದ ತಂತ್ರ ಮತ್ತು ಪರಿಪೂರ್ಣ ಲಾಂಚ್ ಹೊಂದಿದೆ. ಡೆಮೋನಿಟೈಸೇಶನ್ ಸಮಯದಲ್ಲಿ ಈ ಆ್ಯಪ್ ಅನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ, ಆದ್ದರಿಂದ ಇದು ಹಿಟ್ ಆಗಿದೆ. ಇಂದು, ಈ ಡಿಜಿಟಲ್ ಯುಗದಲ್ಲಿ, ಭಾರತ ಸರ್ಕಾರವು ದೈನಂದಿನ ವಹಿವಾಟುಗಳನ್ನು ನಗದುರಹಿತ, ಸುಲಭ ಮತ್ತು ಸುರಕ್ಷಿತವಾಗಿಸಿದೆ, BHIM UPIಗೆ ಧನ್ಯವಾದಗಳು.

ಸಂಕ್ಷಿಪ್ತವಾಗಿ ನಮ್ಮಿಂದ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಯಸುತ್ತೀರಾ? ಕೆಳಗೆ ಕಾಮೆಂಟ್ ಮಾಡಿ ಮತ್ತು ನಮಗೆ ತಿಳಿಸಿ!

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.