written by Khatabook | June 24, 2021

ಭಾರತದಲ್ಲಿ ಬ್ಯುಸಿನೆಸ್ ಮಾಡಲು ಟಾಪ್ 10 ನಗರಗಳು

ಸುಗಮ ವ್ಯಾಪಾರ ಕುರಿತ ವಿಶ್ವ ಬ್ಯಾಂಕ್‌ನ 2020ರ ವರದಿಯ ಪ್ರಕಾರ, ಭಾರತವು 190 ರಾಷ್ಟ್ರಗಳಲ್ಲಿ 63ನೇ ಸ್ಥಾನದಲ್ಲಿದೆ. ಭಾರತವು 5 ವರ್ಷಗಳಲ್ಲಿ (2014-2019) 79 ಸ್ಥಾನಗಳಿಂದ ತನ್ನ ಶ್ರೇಯಾಂಕವನ್ನು ಸುಧಾರಿಸಿದೆ. ಶ್ರೇಯಾಂಕದಲ್ಲಿ ಈ ಹೆಚ್ಚಳಕ್ಕೆ ಪ್ರಾಥಮಿಕ ಕಾರಣಗಳೆಂದರೆ ದಿವಾಳಿತನ, ದಿವಾಳಿತನ ಸಂಹಿತೆ, ಸರಕುಗಳು ಮತ್ತು ಸೇವಾ ತೆರಿಗೆಯ ಜಾರಿ. 

ಜಾಗತಿಕವಾಗಿ, ಚೀನಾವಲ್ಲದೆ, ಭಾರತವು ವ್ಯಾಪಾರಕ್ಕೆ ಸೂಕ್ತವಾದ ಹೊಸ ತಾಣವಾಗಿ ಹೊರಹೊಮ್ಮುತ್ತಿದೆ. ಮೂಲಸೌಕರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವಿನ್ಯತೆ, ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಹೆಚ್ಚಳ ಮತ್ತು ಅಗ್ಗದ ಕಾರ್ಮಿಕ ಶಕ್ತಿಯೊಂದಿಗೆ ಸೇವೆಗಳಲ್ಲಿ ವಿಶೇಷತೆಯು ಭಾರತಕ್ಕೆ ಅನುಕೂಲವನ್ನು ನೀಡುತ್ತದೆ. ಭಾರತವು ವಿದೇಶಿ ನೇರ ಹೂಡಿಕೆಗಳ (ಎಫ್‌ಡಿಐ) ಹೊಸ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ಯುಎನ್ ಸಿಟಿಎಡಿಯ 2020ರ ವಿಶ್ವ ಹೂಡಿಕೆ ವರದಿಯ ಪ್ರಕಾರ, ಎಫ್‌ಡಿಐ ಒಳಹರಿವು 2018ಕ್ಕೆ ಹೋಲಿಸಿದರೆ 2019ರಲ್ಲಿ ಶೇ.20ರಷ್ಟು ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ 51 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ: ಬಿಲ್ಲಿಂಗ್ ಸಾಫ್ಟ್‌ವೇರ್ ಎಂದರೇನು? - ಇದು ಹಣಕಾಸು ವ್ಯವಹಾರದಲ್ಲಿ ಸಣ್ಣ ವ್ಯವಹಾರಕ್ಕೆ ಹೇಗೆ ಸಹಾಯ ಮಾಡುತ್ತದೆ?

ವ್ಯವಹಾರಗಳಿಗೆ ಸ್ಥಳಗಳು ಏಕೆ ಅತ್ಯಗತ್ಯ?

ಸರಿಯಾದ ಪ್ರತಿಭಾವಂತ ಉದ್ಯೋಗಿಗಳು, ಕಚ್ಚಾ ವಸ್ತುಗಳು, ಹೂಡಿಕೆದಾರರು ಇತ್ಯಾದಿಗಳು ಸುಲಭವಾಗಿ ಸಿಗುವ ಸ್ಥಳದಲ್ಲಿ ಬ್ಯುಸಿನೆಸ್ ಪ್ರಾರಂಭಿಸಿದರೆ ಅದು ಅಭಿವೃದ್ಧಿ ಮತ್ತು ವಿಸ್ತರಣೆ ಸಾಧ್ಯತೆಯನ್ನು ನಿರ್ಧರಿಸುತ್ತದೆ. ಭಾರತದಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದರೆ, ಭಾರತದಲ್ಲಿ ವ್ಯವಹಾರ ನಡೆಸಬಹುದಾದ ಅಗ್ರ 10 ನಗರಗಳ ಪಟ್ಟಿ ಇಲ್ಲಿದೆ

1. ಮುಂಬೈ

ಮುಂಬೈನಲ್ಲಿ ವ್ಯವಹಾರವನ್ನು ಪ್ರಾರಂಭಿಸುವುದು ಹಣಕಾಸು, ಪ್ರತಿಭಾವಂತ ಜನ ಮತ್ತು ಈಗಾಗಲೇ ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.

 • ಎಲ್ಲಾ ಸ್ಥಾಪಿತ ಬ್ಯಾಂಕುಗಳು ಮುಂಬೈನಲ್ಲಿ ತಮ್ಮ ಮುಖ್ಯ ಕಚೇರಿಗಳನ್ನು ಹೊಂದಿವೆ. ಅಲ್ಲಿ ವ್ಯವಹಾರಗಳು ವೇಗದ ಸಾಲ (ಅಲ್ಪಾವಧಿ ಅಥವಾ ದೀರ್ಘಾವಧಿ)ಕ್ಕೆ ಅರ್ಜಿ ಸಲ್ಲಿಸಬಹುದು. 
 • ಪ್ರಯಾಣ ಮತ್ತು ಸಂಪರ್ಕಕ್ಕಾಗಿ, ಮುಂಬೈನಲ್ಲಿ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಭಾರತದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಮುಂಬೈ ಪೋರ್ಟ್ ಟ್ರಸ್ಟ್ ಮತ್ತು ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಭಾರತದಿಂದ ಸರಕುಗಳ ಆಮದನ್ನು ಮತ್ತು ರಫ್ತಿಗೆ ಸಹಾಯ ಮಾಡುವ ಎರಡು ಪ್ರಮುಖ ಬಂದರುಗಳಾಗಿವೆ.
 • ಮುಂಬೈಯು ವಿವಿಧ ರಾಷ್ಟ್ರೀಯ ಹೆದ್ದಾರಿಗಳು, ಆರು ಪಥದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ, ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯೊಂದಿಗೆ ಸಂಪರ್ಕ ಹೊಂದಿದೆ, ಇದು ವ್ಯಾಪಕರಸ್ತೆ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ.
 • ಐಐಟಿ-ಬಾಂಬೆ, ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇತರ ಹಲವಾರು ಸಂಸ್ಥೆಗಳಿಂದ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳುವುದು ಗುಣಾತ್ಮಕ ಮತ್ತು ಉತ್ಪಾದಕ ಕಾರ್ಯಪಡೆಯನ್ನು ಒದಗಿಸುತ್ತದೆ.
 • ಆದಾಗ್ಯೂ, ಮುಂಬೈನಲ್ಲಿ ವ್ಯಾಪಾರ ಮಾಡುವಲ್ಲಿ ಸವಾಲುಗಳಿವೆ, ಉದಾಹರಣೆಗೆ ಹೆಚ್ಚುತ್ತಿರುವ ಜನಸಂಖ್ಯೆ, ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳು, ದೈನಂದಿನ ವೆಚ್ಚಗಳು ಅಧಿಕ ಇತ್ಯಾದಿ.
 • ಸವಾಲುಗಳ ಜೊತೆಗೆ ಅವಕಾಶಗಳು ಬರುತ್ತವೆ. ಇದು ಭಾರತದ ಹಣಕಾಸು ರಾಜಧಾನಿಯಾಗಿರುವುದರಿಂದ, ಮುಂಬೈ ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳನ್ನು ಹೊಂದಿದೆ, ಇದು ಭಾರತದಲ್ಲಿ ವ್ಯವಹಾರ ನಡೆಸುವ ಉನ್ನತ ನಗರಗಳಲ್ಲಿ ಒಂದಾಗಿದೆ. ಮುಂಬೈನಲ್ಲಿ ಪ್ರಾರಂಭವಾದ ಯಶಸ್ವಿ ಸ್ಟಾರ್ಟ್‌ಅಪ್‌ಗಳಲ್ಲಿ Quikr, Bookmyshows.com, Nykaa ಇತ್ಯಾದಿಗಳು ಸೇರಿವೆ

2. ಪುಣೆ

ಪುಣೆ ಮಹಾರಾಷ್ಟ್ರದಲ್ಲಿದೆ ಮತ್ತು ಮುಂಬೈಗೆ ಹತ್ತಿರದಲ್ಲಿದೆ. ಪುಣೆಯಲ್ಲಿ ಬ್ಯುಸಿನೆಸ್ ಸೆಟ್ ಅಪ್ ಮಾಡಲು ಅವಕಾಶ ಸಿಕ್ಕಿದರೆ ಅದನ್ನು ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ. 

 • ಆರು ಪಥದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಿಂದಾಗಿ ವ್ಯವಹಾರಗಳು ಪುಣೆಯಲ್ಲಿದ್ದರೂ, ಮುಂಬೈನಲ್ಲಿ ಸಕ್ರಿಯವಾಗಿ ಇರಬಹುದು.
 • ಪುಣೆಯಲ್ಲಿ ರಿಯಲ್ ಎಸ್ಟೇಟ್ ವೆಚ್ಚ ಹೆಚ್ಚಿಲ್ಲವಾದ್ದರಿಂದ, ವ್ಯವಹಾರಗಳು ಅಂತಹ ಕಡಿಮೆ ವೆಚ್ಚದ ರಿಯಲ್ ಎಸ್ಟೇಟ್‌ಗಳನ್ನು ಬಳಸಬಹುದು. ಪುಣೆ ಅತ್ಯುತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಇದು ಬೆಂಗಳೂರು, ಮುಂಬೈ, ಗೋವಾ ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಲೋಹೆಗಾಂವ್‌ನಲ್ಲಿದ್ದು ಪುಣೆ ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ.
 • ಡೆಕ್ಕನ್ ಕಾಲೇಜು ಪೋಸ್ಟ್ ಗ್ರಾಜ್ಯುಯೇಟ್ ಆಂಡ್ ರಿಸರ್ಚ್ ಸೆಂಟರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್, ಸಿಂಬಿಯೋಸಿಸ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಂತಹ ಪ್ರಮುಖ ಸಂಸ್ಥೆಗಳು ಮಧ್ಯ ಪುಣೆಯಲ್ಲಿವೆ, ಇದು ವ್ಯವಹಾರಗಳನ್ನು ಬೆಳೆಸಲು ವಿಶಿಷ್ಟ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒದಗಿಸುತ್ತದೆ.
 • ಟೆಕ್ ದೈತ್ಯರಾದ ಇನ್ಫೊಸಿಸ್, ಟಾಟಾ ಕನ್ಸಲ್ಟೆನ್ಸಿ ಸೇವೆಗಳು, ಆಕ್ಸೆಂಚರ್ ಸೊಲ್ಯೂಷನ್ಸ್ ತಂತ್ರಜ್ಞಾನ ಬೆಂಬಲವನ್ನು ಒದಗಿಸುತ್ತವೆ. ಮಹಾರಾಷ್ಟ್ರ ರಾಜ್ಯದಲ್ಲಿ ಎಫ್‌ಡಿಐ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರದ ಯೋಜನೆಗಳು ಮಹಾ ಪರ್ವಾನ (ಮೆಗಾ ಪರ್ಮಿಷನ್) ಯೋಜನೆಯಂತಹ ಯೋಜನೆಗಳು ಉದ್ಯಮಿಗಳಿಗೆ ನೆರವಾಗುತ್ತವೆ. ಇವೆಲ್ಲವೂ ಪುಣೆಯನ್ನು ಭಾರತದಲ್ಲಿ ವ್ಯಾಪಾರ ಮಾಡುವ ಪ್ರಮುಖ ನಗರಗಳಲ್ಲಿ ಒಂದಾಗಿಸುತ್ತದೆ.

3. ಬೆಂಗಳೂರು

 • ಬೆಂಗಳೂರು ಭಾರತದ ತಂತ್ರಜ್ಞಾನ ಅಥವಾ ಸಿಲಿಕಾನ್ ವ್ಯಾಲಿ ನಗರ ಎಂದು ಕರೆಯಲ್ಪಡುತ್ತದೆ. ಇದು 5 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದ ರಾಜಧಾನಿಯಾಗಿದೆ, ಇದು ಭಾರತದಲ್ಲಿ 3ನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತವು ಉನ್ನತ ಮಾಹಿತಿ ತಂತ್ರಜ್ಞಾನ (IT) ರಫ್ತುದಾರ ರಾಷ್ಟ್ರವಾಗಿದ್ದು, ಒಟ್ಟು ಸಾಫ್ಟ್‌ವೇರ್ ರಫ್ತಿನ 1/3 ನೇ ಭಾಗ ಕೊಡುಗೆಯನ್ನು ಬೆಂಗಳೂರು ನೀಡುತ್ತಿದೆ. ಕೆಲವು ಪ್ರಮುಖ ಟೆಕ್ ದೈತ್ಯರಲ್ಲಿ ಇನ್ಫೊಸಿಸ್, ಆಕ್ಸೆಂಚರ್, ವಿಪ್ರೋ, ಸಿಸ್ಕೋ ಇತ್ಯಾದಿ ಸೇರಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೂ ಬೆಂಗಳೂರು ನಗರದಲ್ಲಿದೆ.
 • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ 4ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ಭಾರತೀಯ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದೆ. 
 • ಐಐಎಂ- ಬೆಂಗಳೂರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಮತ್ತು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು ನಗರದ ಕೆಲವು ಪ್ರಮುಖ ಸಂಸ್ಥೆಗಳಾಗಿವೆ, ಇದು ಪ್ರತಿಭಾವಂತ ಮತ್ತು ಸೃಜನಶೀಲ ಕಾರ್ಯಪಡೆಯನ್ನು ಪಡೆಯಲು ನೆರವಾಗುತ್ತದೆ. 
 • ಅರ್ಬನ್ ಲ್ಯಾಡರ್, ಹೆಕ್ಟರ್ ಬೆವರೇಜಸ್, ಝೂಮ್ ಕಾರ್‌ನಂತಹ ಕೆಲವು ಪ್ರಮುಖ ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದವು. ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವ ವ್ಯವಹಾರಗಳಿಗೆ ಇದು ಸೂಕ್ತವಾಗಿದೆ. ಪ್ರಾಥಮಿಕವಾಗಿ ತಂತ್ರಜ್ಞಾನದ ಮೇಲೆ ಅವಲಂಬಿತವಲ್ಲದ ಕಂಪನಿಗಳು ತಮ್ಮ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳನ್ನು ಸುಧಾರಿಸಲೂ ಬೆಂಗಳೂರಿನಲ್ಲಿ ವ್ಯವಸ್ಥೆಯಿದೆ. 

4. ದೆಹಲಿ

 • ದೇಶದ ರಾಜಧಾನಿ ಎನ್ನುವುದನ್ನು ಹೊರತುಪಡಿಸಿ, ದೆಹಲಿ ಮುಂಬೈಗಿಂತ ಭಿನ್ನವಾಗಿ ವಿಪರೀತ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಮೆಟ್ರೋ ಯೋಜನೆಗಳನ್ನು ಜಾರಿಗೆ ತಂದ ಮೊದಲ ರಾಜ್ಯ ದೆಹಲಿ; ದೆಹಲಿ ಮೆಟ್ರೋವು  ನೋಯ್ಡಾ, ಗಾಜಿಯಾಬಾದ್, ಗುರ್ಗಾಂವ್, ಫರೀದ್ ಮುಂತಾದ ಸ್ಥಳವನ್ನು ಸಂಪರ್ಕಿಸುವ 280ಕ್ಕೂ ಹೆಚ್ಚು ನಿಲ್ದಾಣಗಳ ಜಾಲವನ್ನು ಹೊಂದಿದೆ. ಇದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲು ಜಾಲಗಳ ವ್ಯಾಪಕ ವ್ಯಾಪ್ತಿಯನ್ನು ಹೊಂದಿದೆ. ದೆಹಲಿಯ ಜನಸಂಖ್ಯೆಯು ಮುಂಬೈ ಜನಸಂಖ್ಯೆಗೆ ಹತ್ತಿರವಾಗಿದ್ದರೂ ಸಹ ಅದು ಜನನಿಬಿಡವಾಗಿಲ್ಲ, ಇದರಿಂದ ಮೂಲಸೌಕರ್ಯಗಳನ್ನು ಸುಲಭವಾಗಿ ಪಡೆಯಬಹುದು .
 • ಈ ನಗರವು ಐಐಟಿ ದೆಹಲಿ, ಜವಾಹರಲಾಲ್ ನೆಹರು ಸಂಸ್ಥೆಗಳು, ನವದೆಹಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಶೈಕ್ಷಣಿಕ ಮತ್ತು ಉತ್ಕೃಷ್ಟತೆಗೆ ಹೆಸರುವಾಸಿಯಾದ ವಿವಿಧ ಇತರ ಸಂಸ್ಥೆಗಳನ್ನು ಹೊಂದಿದೆ. ಸರ್ಕಾರಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ವ್ಯವಹಾರಗಳಿಗೆ ದೆಹಲಿ ನೆಲೆಯಾಗಿದೆ.
 • ನಗರದಲ್ಲಿ ವ್ಯಾಪಾರ ನಡೆಸಲು ಅನೇಕ ಸವಾಲುಗಳೆಂದರೆ ವಾಯು ಮಾಲಿನ್ಯ, ಮಹಿಳಾ ಸುರಕ್ಷತೆ ಮತ್ತು ವಲಸೆ ಕಾರ್ಮಿಕರು. ಸಮೂಹ ಮಾಧ್ಯಮ ಪ್ರಸಾರ, ಅನುಮತಿಗಾಗಿ ಸರ್ಕಾರಿ ಕಚೇರಿಗಳು ದೆಹಲಿಯಲ್ಲಿ ವ್ಯವಹಾರ ನಡೆಸಲು ಪ್ರಯೋಜನಕಾರಿ, ಇದು ಭಾರತದಲ್ಲಿ ವ್ಯವಹಾರ ನಡೆಸುವ ಉನ್ನತ ನಗರಗಳಲ್ಲಿ ಒಂದಾಗಿದೆ.

5. ಹೈದರಾಬಾದ್

 • ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಿದೆ ಮತ್ತು ಇದು ಪ್ರತಿಭಾವಂತ ಕಾರ್ಯಪಡೆ ಮತ್ತು ಐಟಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬೆಂಗಳೂರು ತಾಂತ್ರಿಕ ಕೇಂದ್ರವಾಗುವ ಮೊದಲು, ಹೈದರಾಬಾದ್ ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿತ್ತು. ಈ ನಗರವು ಡಾ.ರೆಡ್ಡಿಸ್ ಲ್ಯಾಬ್, ದಿವಿಸ್ ಲ್ಯಾಬ್‌ನಂತಹ ಔಷಧೀಯ ನಿಗಮಗಳಿಗೆ ಹೆಸರುವಾಸಿಯಾಗಿದೆ.
 • ಇತ್ತೀಚಿನ ದಿನಗಳಲ್ಲಿ, ಜಿನೋಮ್ ವ್ಯಾಲಿ, ನ್ಯಾನೋ ಟೆಕ್ನಾಲಜಿ ಪಾರ್ಕ್ ಮತ್ತು ಫ್ಯಾಬ್ ಸಿಟಿ ಸೇರಿದಂತೆ ವಿವಿಧ ಜೈವಿಕ ತಂತ್ರಜ್ಞಾನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ. ಮೈಕ್ರೋಸಾಫ್ಟ್, ಅಮೆಜಾನ್, ಬ್ಯಾಂಕ್ ಆಫ್ ಅಮೇರಿಕಾ, ಫೇಸ್‌ಬುಕ್‌ನಂತಹ ಟೆಕ್ ದೈತ್ಯರು ಭಾರತದಲ್ಲಿ ತಮ್ಮ ವ್ಯವಹಾರಕ್ಕಾಗಿ ಹೈದರಾಬಾದ್‌ನೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆ.
 • ಹೈದರಾಬಾದ್ ನಗರವು ಪ್ರತಿಭಾವಂತ ಕಾರ್ಯಪಡೆ, ಬಂಡವಾಳ ಮತ್ತು ವ್ಯವಹಾರವನ್ನು ಸ್ಥಾಪಿಸಲು ಮತ್ತು ಬೆಳೆಸಲು ಪೂರಕವಾದ ಸರ್ಕಾರದ ಬೆಂಬಲವನ್ನು ಹೊಂದಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಎನ್ಎಂಐಎಂಎಸ್‌ನಂತಹ ಸಂಸ್ಥೆಗಳು ಹೈದರಾಬಾದ್‌ನ ಗಮನಾರ್ಹ ಸಂಸ್ಥೆಗಳಾಗಿವೆ, ಅವು ಸ್ಥಳೀಯ ಪ್ರತಿಭೆಗಳನ್ನು ಪಡೆಯಲು ಅನನ್ಯ ಅವಕಾಶವನ್ನು ಒದಗಿಸುತ್ತವೆ.
 • ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಹೈದರಾಬಾದ್ ನಗರದಲ್ಲಿದೆ, ಇದು ಸರಕುಗಳು, ವ್ಯಾಪಾರ ಸಭೆಗಳು ಮತ್ತು ವಿಶ್ವದ ಯಾವುದೇ ಭಾಗಕ್ಕೆ ಸುಲಭವಾಗಿ ತಲುಪಲು ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.
 • ಉದ್ಯಮದ ಹೆಚ್ಚಿನ ಭಾಗವು ಔಷಧೀಯ, ಬಯೋಟೆಕ್ ಮತ್ತು ತಂತ್ರಜ್ಞಾನದಂತಹ ಸೇವಾ ಉದ್ಯಮದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ನಿಮ್ಮ ವ್ಯವಹಾರವು ಸೇವಾ ಉದ್ಯಮದಲ್ಲಿದ್ದರೆ ಹೈದರಾಬಾದ್ ನಿಮಗೆ ಉತ್ತಮ ಆಯ್ಕೆಯಾಗಿದೆ. 

6. ಚೆನ್ನೈ

 • ಹಿಂದೆ ಮದ್ರಾಸ್ ಎಂದು ಕರೆಯಲ್ಪಡುತ್ತಿದ್ದ ಚೆನ್ನೈ ತಮಿಳುನಾಡಿನ ರಾಜಧಾನಿಯಾಗಿದೆ. ಇದು ಇಂಗ್ಲಿಷ್ ಮಾತನಾಡುವ 5ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ. ಚೆನ್ನೈ ತನ್ನ ವಾಹನ ಉದ್ಯಮಕ್ಕೆ ಹೆಸರುವಾಸಿಯಾಗಿದೆ, ದೇಶದ ಸುಮಾರು 30% ಆಟೋ ಅವಶ್ಯಕತೆಗಳನ್ನು ಚೆನ್ನೈನಲ್ಲಿ ಪೂರೈಸಲಾಗುತ್ತದೆ ಮತ್ತು ಇದು ದೇಶದಿಂದ 60% ಆಟೋ ರಫ್ತಿಗೆ ಕಾರಣವಾಗಿದೆ. ಹುಂಡೈ, ಫೋರ್ಡ್, ಬಿಎಂಡಬ್ಲ್ಯು ಮುಂತಾದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಚೆನ್ನೈನಲ್ಲಿವೆ.
 • ಘಟಕಗಳೊಂದಿಗೆ ಚೆನ್ನೈ ದೇಶದ ಅತಿದೊಡ್ಡ ಕಾರು ಉತ್ಪಾದನೆಯಾಗಿ ಹೊರಹೊಮ್ಮುತ್ತಿದೆ. ಭಾರತೀಯ ರೈಲ್ವೆಯ ಸಮಗ್ರ ಬೋಗಿಯನ್ನು ಚೆನ್ನೈನಲ್ಲಿಯೂ ತಯಾರಿಸಲಾಗುತ್ತದೆ.
 • ಇದು ದೂರಸಂಪರ್ಕ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಸಿಟಿ ಬ್ಯಾಂಕ್, ವರ್ಲ್ಡ್ ಬ್ಯಾಂಕ್‌ನಂತಹ ಉನ್ನತ ಹಣಕಾಸು ನಿಗಮಗಳು ಇಲ್ಲಿ ಕಚೇರಿಗಳನ್ನು ಹೊಂದಿವೆ.
 • ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ನಗರ ಕೇಂದ್ರದಿಂದ ಸುಮಾರು 21 ಕಿ.ಮೀ ದೂರದಲ್ಲಿದೆ, ಇಲ್ಲಿ ಸರಕುಗಳು ಮತ್ತು ಜನರ ಸಂಚಾರ ಹೆಚ್ಚಿದೆ. ಚೆನ್ನೈ ಸೀಪೋರ್ಟ್ ದೇಶದ ಅತ್ಯಂತ ಜನನಿಬಿಡ ಸ್ಥಳವಾಗಿದ್ದು, ಇದು ಆಟೋಮೋಟಿವ್ ಮತ್ತುಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
 • ಐಐಟಿ- ಮದ್ರಾಸ್, ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ ಚೆನ್ನೈನ ಕೆಲವು ಪ್ರಮುಖ ಸಂಸ್ಥೆಗಳಾಗಿವೆ. ಅಲ್ಲದೆ, ನಗರವು 80% ಕ್ಕಿಂತ ಹೆಚ್ಚಿನ ಸಾಕ್ಷರತೆಯ ಪ್ರಮಾಣವನ್ನು ಹೊಂದಿದೆ, ಇದು ಪ್ರತಿಭೆಯನ್ನು ಹುಡುಕುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇವೆಲ್ಲವೂ ಭಾರತದಲ್ಲಿ ವ್ಯಾಪಾರ ಮಾಡಲು ಚೆನ್ನೈ ಉನ್ನತ ನಗರಗಳ ಪಟ್ಟಿಯಲ್ಲಿರಲು ಉತ್ತಮ ಕಾರಣಗಳನ್ನು ನೀಡುತ್ತವೆ.

7. ಕೋಲ್ಕತ್ತಾ

 • ಈ ಹಿಂದೆ ಕಲ್ಕತ್ತಾ ಎಂದು ಕರೆಯಲ್ಪಡುತ್ತಿದ್ದ ಕೋಲ್ಕತ್ತಾ ಪಶ್ಚಿಮ ಬಂಗಾಳದ ರಾಜಧಾನಿಯಾಗಿದೆ. ಕೋಲ್ಕತ್ತಾವನ್ನು ಗಾಮಾ ನಗರವೆಂದು ಪರಿಗಣಿಸಲಾಗಿದೆ. ಕೈಗಾರಿಕೀಕರಣದ ಇತ್ತೀಚಿನ ಬೆಳವಣಿಗೆಯು ಈ ಪಟ್ಟಿಯಲ್ಲಿ ಬರಲು ಕಾರಣವಾಗಿದೆ. ಇದನ್ನು ವಾಣಿಜ್ಯ ಮತ್ತು ಪೂರ್ವ ಭಾರತದ ಹಣಕಾಸು ಎಂದು ಪರಿಗಣಿಸಲಾಗಿದೆ. 
 • ಮಾಹಿತಿ ತಂತ್ರಜ್ಞಾನದ ಗಮನಾರ್ಹ ಉಪಸ್ಥಿತಿಯು ವೇಗವಾಗಿ ಬೆಳೆಯುತ್ತಿರುವುದರಿಂದ ಪೂರ್ವ ಭಾರತದ ಅಗತ್ಯಗಳನ್ನು ಪೂರೈಸಲು ಎಂಎನ್‌ಸಿಗಳು ಬಂದು ತಮ್ಮ ವ್ಯವಹಾರವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಐಟಿಸಿ ಲಿಮಿಟೆಡ್, ಬ್ರಿಟಾನಿಯಾ ಲಿಮಿಟೆಡ್, ಪ್ರಮುಖ ಹಣಕಾಸು ಸಂಸ್ಥೆಗಳು ಬ್ಯಾಂಕ್ ಆಫ್ ಇಂಡಿಯಾ, ಯುಸಿಒ ಬ್ಯಾಂಕ್ ಇತ್ಯಾದಿಗಳು ಸ್ಥಾಪಿತವಾದ ಪ್ರಸಿದ್ಧ ಕಂಪನಿಗಳಾಗಿವೆ. ಇದು ಸೆಣಬು, ಕಬ್ಬು, ಗಣಿಗಾರಿಕೆ ಮತ್ತು ಇತರ ಕೈಗಾರಿಕೆಗಳಿಗೆ ಬಹಳ ಜನಪ್ರಿಯವಾಗಿದೆ.
 • ದಮ್‌ದಮ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೋಲ್ಕತ್ತಾದ ವಿಮಾನ ನಿಲ್ದಾಣದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಇದು ನಗರ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಹಾಲ್ಡಿಯಾ ಬಂದರು ನಗರದ ಆಮದು ಮತ್ತು ರಫ್ತು ಅಗತ್ಯಗಳನ್ನು ಪೂರೈಸುವ ಪ್ರಮುಖ ಸಮುದ್ರ ಬಂದರು.
 • ಐಐಟಿ - ಕಲ್ಕತ್ತಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ ನಗರದ ಕೆಲವು ಗಮನಾರ್ಹ ಸಂಸ್ಥೆಗಳಾಗಿವೆ, ಅವು ಕಾರ್ಯಪಡೆಯ ಅಗತ್ಯಗಳನ್ನು ಪೂರ್ಣಗೊಳಿಸಲು ಹೊಸ ಪ್ರತಿಭೆಗಳನ್ನು ನೀಡುತ್ತವೆ. ಕೋಲ್ಕತ್ತಾ ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿರುವುದರಿಂದ ಮತ್ತು ವಾಸಿಸಲು ತುಂಬಾ ಅಗ್ಗವಾಗಿರುವುದರಿಂದ, ನಗರವು ವಿವಿಧ ಬ್ಯುಸಿನೆಸ್ ಹಬ್‌ಗಳನ್ನು ಆಕರ್ಷಿಸಿದೆ.

8. ಇಂದೋರ್

 • ಇಂದೋರ್ ಮಧ್ಯಪ್ರದೇಶ ರಾಜ್ಯದ ಅತಿದೊಡ್ಡ ನಗರ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ನಗರದ ಪ್ರಮುಖ ಕೈಗಾರಿಕೆಗಳೆಂದರೆ ಉತ್ಪಾದನೆ, ಆಟೋಮೊಬೈಲ್, ಫಾರ್ಮಾಸ್ಯೂಟಿಕಲ್ಸ್ ಮತ್ತು ಟೆಕ್ಸ್ ಟೈಲ್ಸ್. ಪಿಥಂಪುರ್ ವಿಶೇಷ ಆರ್ಥಿಕ ವಲಯ, ಸಾನ್ವರ್ ಕೈಗಾರಿಕಾ ವಲಯ ಸೇರಿದಂತೆ ಇದು ಕೈಗಾರಿಕಾ ಘಟಕಗಳಲ್ಲಿ ವ್ಯಾಪಕವಾದ ಉದ್ಯಮವನ್ನು ಹೊಂದಿದೆ. 2020ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಇಂದೋರ್ ವಿವಿಧ ಮಾನದಂಡಗಳನ್ನು ಪರಿಗಣಿಸಿ ಭಾರತದ ಅತ್ಯಂತ ಸ್ವಚ್ಛ ನಗರಎಂಬ ಸ್ಥಾನ ಪಡೆದಿದೆ.
 • ಐಐಎಂ- ಇಂದೋರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ವ್ಯಾಪಾರ ಅಗತ್ಯಗಳಿಗಾಗಿ ಪ್ರತಿಭೆ ಮತ್ತು ಸೃಜನಶೀಲತೆಯನ್ನು ನಿರ್ಮಿಸುವ ಪ್ರತಿಷ್ಠಿತ ಸಂಸ್ಥೆಗಳಾಗಿವೆ. ಇದು ಮುಂಬೈ ಮತ್ತು ದೆಹಲಿ ನಡುವಿನ ವ್ಯೂಹಾತ್ಮಕ ಸ್ಥಳವಾಗಿರುವುದರಿಂದ, ಐಟಿ, ತಂತ್ರಜ್ಞಾನ, ಕಾರ್ಖಾನೆ ಮತ್ತು ಮಧ್ಯಮ ಕಚೇರಿ ಆಪರೇಟರ್‌ಗಳಲ್ಲಿ ವ್ಯವಹಾರವನ್ನು ಸ್ಥಾಪಿಸಲು ಇದು ನಿಮ್ಮ ಗಮನವನ್ನು ಸೆಳೆಯುತ್ತದೆ.
 • ನಗರ ಕೇಂದ್ರದಿಂದ 8 ಕಿ.ಮೀ ದೂರದಲ್ಲಿರುವ ದೇವಿ ಅಹಲ್ಯಾ ಬಾಯಿ ಹೋಲ್ಕರ್ ವಿಮಾನ ನಿಲ್ದಾಣವು ಮುಖ್ಯವಾಗಿ ಇಂದೋರ್ ಮತ್ತು ಪಕ್ಕದ ನಗರದ ವ್ಯಾಪಾರ ಅಗತ್ಯಗಳನ್ನು ಪೂರೈಸುತ್ತದೆ.
 • ಇಂದೋರ್ ನಗರವು ಭೋಪಾಲ್, ಉಜ್ಜಯಿನಿ, ರತ್ಲಾಮ್ ಇತ್ಯಾದಿಗಳನ್ನು ಸಂಪರ್ಕಿಸುವ ಪ್ರಮುಖ ಮತ್ತು ಸಣ್ಣ ನಗರಗಳಿಗೆ ಸಂಪರ್ಕ ಹೊಂದಿದೆ. ಅಲ್ಲದೆ, ಇಂದೋರ್ ನಗರವು ಭಾರತೀಯ ರೈಲ್ವೆ ಜೊತೆಗೆ ಸಂಪರ್ಕ ಹೊಂದಿದ್ದು, ಸರಕುಗಳು ಮತ್ತು ಜನರ ಸಂಚಾರಕ್ಕೆ ಸಹಾಯ ಮಾಡುತ್ತದೆ.

9. ಅಹಮದಾಬಾದ್

 • ಇದು ಗುಜರಾತ್ ರಾಜ್ಯದ ಅತಿದೊಡ್ಡ ನಗರವಾಗಿದ್ದು, ವಾಣಿಜ್ಯ ಮತ್ತು ಹಣಕಾಸು ರಾಜಧಾನಿಯಾಗಿದೆ. ಮೂಲಸೌಕರ್ಯ, ನಿರ್ಮಾಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹತ್ವದ ಅಭಿವೃದ್ಧಿಯಿಂದಾಗಿ ಅಹಮದಾಬಾದ್ ಹೊಸ ವ್ಯಾಪಾರ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕುಶಲ ಕಾರ್ಮಿಕ ಬಲ ಮತ್ತು ಹಣಕಾಸು ಬಂಡವಾಳ ಲಭ್ಯತೆಯ ಹೆಚ್ಚಳದಿಂದಾಗಿ, ಅನೇಕ ವ್ಯಾಪಾರ ಸಂಸ್ಥೆಗಳು ಸೌರಾಷ್ಟ್ರ ರಾಜ್ಯಗಳ ಹೆಚ್ಚುತ್ತಿರುವ ಬೇಡಿಕೆಗಳನ್ನು ಸೆರೆಹಿಡಿಯಲು ಇದನ್ನು ಹೊಸ ಮನೆ ಎಂದು ಪರಿಗಣಿಸುತ್ತಿವೆ.
 • ಈ ನಗರವು ತನ್ನ ಫಾರ್ಮಾಸ್ಯೂಟಿಕಲ್ಸ್ ಆಂಡ್ ಕೆಮಿಕಲ್ಸ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ ಏಕೆಂದರೆ ಜೈಡಸ್ ಕ್ಯಾಡಿಲಾ ಮತ್ತು ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಇಲ್ಲಿದೆ. ನಿರ್ಮಾ ಮತ್ತು ಅದಾನಿ ಗುಂಪಿನ ಪ್ರಧಾನ ಕಚೇರಿ ಕೂಡ ಈ ನಗರದಲ್ಲಿದೆ.
 • ದೇಶದಲ್ಲಿ ಡೆನಿಮ್ಸ್ ಬಟ್ಟೆಗಳ ಪ್ರಮುಖ ಅವಶ್ಯಕತೆಗಳನ್ನು ಅಹಮದಾಬಾದ್ ಪೂರೈಸುತ್ತದೆ. ನಗರವು ಜೆಮ್ ಸ್ಟೋನ್ ಮತ್ತು ಇತರ ಆಭರಣಗಳ ಪ್ರಮುಖ ರಫ್ತುದಾರರಾಷ್ಟ್ರವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಹಮದಾಬಾದ್ ಮತ್ತು ಗಾಂಧಿನಗರ ನಗರದಲ್ಲಿ ವ್ಯಾಪಾರ ಅಗತ್ಯಗಳನ್ನು ಪೂರೈಸುತ್ತದೆ. ರೈಲು ನೆಟ್ವರ್ಕ್ಸ್ ನಗರವನ್ನು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈಗೆ ಸಂಪರ್ಕಿಸುತ್ತದೆ. ರಾಜ್ಯ ಸಾರಿಗೆ ಬಸ್ಸುಗಳು ಕಾರ್ಮಿಕರ ನಗರ ಪ್ರಯಾಣದ ಅಗತ್ಯಗಳನ್ನು ಪೂರೈಸುತ್ತವೆ.
 • ಐಐಎಂ-ಅಹಮದಾಬಾದ್, ಇಂಟರ್ಪ್ರೆನ್ಯೂರ್‌ಶಿಪ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಮುದ್ರಾ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್ ನಗರದ ಕೆಲವು ಪ್ರತಿಷ್ಠಿತ ಮತ್ತು ಗಮನಾರ್ಹ ಸಂಸ್ಥೆಗಳಾಗಿವೆ, ಇದು ವ್ಯವಹಾರಗಳಿಗೆ ಪ್ರತಿಭಾವಂತ ಮತ್ತು ಸೃಜನಶೀಲ ಕಾರ್ಯಪಡೆಯನ್ನು ಒದಗಿಸುತ್ತದೆ. ಅಹಮದಾಬಾದ್ ತಾಂತ್ರಿಕ ಬೆಂಬಲದ ಜೊತೆಗೆ ವೈವಿಧ್ಯಮಯ ಸಂಸ್ಕೃತಿಯ ನಗರವಾಗಿದೆ; ನಗರದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ವ್ಯವಹಾರದ ಆಲೋಚನೆಗಳು ಯೋಗ್ಯವಾಗಿವೆ.

10. ನಾಗ್ಪುರ

 • ನಾಗ್ಪುರವು ಮಧ್ಯ ಭಾರತದ ಅತಿದೊಡ್ಡ ನಗರವಾಗಿದೆ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ 3ನೇ ಅತಿದೊಡ್ಡ ನಗರವಾಗಿದೆ. ಈ ನಗರವು ಮಹಾರಾಷ್ಟ್ರದ ವಿಭಾಗಕ್ಕೆ ವಾಣಿಜ್ಯ, ರಾಜಕೀಯ ಮತ್ತು ಹಣಕಾಸು ಕೇಂದ್ರವಾಗಿದೆ. ಇದು ಕಿತ್ತಳೆ, ಮಾವಿನ ಹಣ್ಣುಗಳಿಗೆ ಬಹಳ ಪ್ರಸಿದ್ಧವಾಗಿದೆ, ಆದಾಗ್ಯೂ, ಈ ನಗರದಲ್ಲಿ ಹೆಚ್ಚಿನ ವ್ಯಾಪಾರ ಅವಕಾಶಗಳು ಲಭ್ಯವಿದೆ.
 • ಮಧ್ಯ ನಾಗಪುರದ ಸಿತಾಬುಲ್ಡಿ ಮಾರುಕಟ್ಟೆಯನ್ನು ನಗರದ ಹೃದಯ ಭಾಗ ಎಂದು ಕರೆಯಲಾಗುತ್ತದೆ. ಈ ನಗರವು ಸಿಂಥೆಟಿಕ್ ಪಾಲಿಯೆಸ್ಟರ್ ನೂಲಿಗೆ ಪ್ರಸಿದ್ಧವಾಗಿದೆ. ನಗರದಲ್ಲಿ ಕೊರಾಡಿ ಥರ್ಮಲ್ ಸ್ಟೇಷನ್ ಮತ್ತು ಖಪಾರ್ಖೇಡಾ ಥರ್ಮಲ್ ಸ್ಟೇಷನ್ ಎಂದು ಕರೆಯಲ್ಪಡುವ ಎರಡು ಥರ್ಮಲ್ ಸ್ಟೇಷನ್‌ಗಳಿವೆ, ಇದು ನಗರಕ್ಕೆ ವಿದ್ಯುತ್ ಒದಗಿಸುತ್ತದೆ.
 • ಹಿಂಂಗಾನಾ ಕೈಗಾರಿಕಾ ಎಸ್ಟೇಟ್ ನಲ್ಲಿ 900ಕ್ಕೂ ಹೆಚ್ಚು ಎಂಎಸ್‌ಎಂಇ(MSME)ಗಳಿವೆ. ಪ್ರಮುಖ ಉತ್ಪಾದನಾ ಘಟಕಗಳೆಂದರೆ ಮಹೀಂದ್ರಾ ಆಂಡ್ ಮಹೀಂದ್ರಾ, ಬಜಾಜ್ ಆಟೋ ಸಮೂಹದ ಟ್ರ್ಯಾಕ್ಟರ್ ಉತ್ಪಾದನಾ ಘಟಕ. ಒಣ ಆಹಾರ ತಯಾರಕ ಹಲ್ದಿರಾಮ್ ಮತ್ತು ಆಯುರ್ವೇದ ಉತ್ಪನ್ನಗಳ ಕಂಪನಿ ವಿಕ್ಕೊ ಈ ನಗರದಲ್ಲಿದೆ
 • ನಗರವು ಬಹುಮಾದರಿ ಸರಕು ಕೇಂದ್ರ ಮತ್ತು ವಿಮಾನ ನಿಲ್ದಾಣವನ್ನು ಸಹ ಹೊಂದಿದೆ, ಇದು ನಾಗ್ಪುರದಲ್ಲಿ ವ್ಯಾಪಾರವನ್ನು ಸ್ಥಾಪಿಸಲು ಉತ್ಪಾದನಾ ಘಟಕಗಳಿಗೆ ಸುಲಭಗೊಳಿಸುತ್ತದೆ.
 • ಐಐಟಿ- ನಾಗ್ಪುರ, ಐಐಎಂ- ನಾಗ್ಪುರ ನಗರದ ಕೆಲವು ಪ್ರತಿಷ್ಠಿತ ಮತ್ತು ಗಮನಾರ್ಹ ಸಂಸ್ಥೆಗಳಾಗಿವೆ, ಇದು ವ್ಯಾಪಾರ ಅಗತ್ಯಗಳಿಗಾಗಿ ಉತ್ತಮ ಯುವಕರಿಗೆ ತರಬೇತಿ ನೀಡುತ್ತದೆ.

ನಿಮಗಾಗಿ ಇನ್ನೆರಡು ನಗರಗಳ ಮಾಹಿತಿ ಇಲ್ಲಿದೆ

11. ಸೂರತ್

 • ಗುಜರಾತಿನ ಈ ದೊಡ್ಡ ನಗರವು ಸುಗಮ ವ್ಯಾಪಾರಕ್ಕಾಗಿ ಉತ್ತಮ ನಿರೀಕ್ಷೆಯನ್ನು ಹೊಂದಿದೆ. ನಡೆಸಿದ ಸಮೀಕ್ಷೆಯ ಪ್ರಕಾರ, ಸೂರತ್ ಅತಿ ಹೆಚ್ಚು ಜಿಡಿಪಿ ಬೆಳವಣಿಗೆ ದರವನ್ನು 11.5% ಹೊಂದಿದೆ ಮತ್ತು ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಲಿದೆ. ಸೂರತ್ ಅನ್ನು ಭಾರತದ ವಜ್ರದ ರಾಜಧಾನಿ ಎಂದೂ ಕರೆಯಲಾಗುತ್ತದೆ, ಅಲ್ಲಿ ವಿಶ್ವದ 92% ವಜ್ರವನ್ನು ಸಂಸ್ಕರಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. 
 • ಸೂರತ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತೊಂದು ಉದ್ಯಮವೆಂದರೆ ಜವಳಿ ಮತ್ತು ರೇಷ್ಮೆ ಉತ್ಪಾದನೆ. ಸೂರತ್‌ನ ಅತ್ಯಂತ ಹಳೆಯ ವ್ಯವಹಾರವೆಂದರೆ ಜೆಆರ್‌ಐ, ಇದು 80000‌ಕ್ಕೂ ಹೆಚ್ಚು ಕಸೂತಿ ಯಂತ್ರಗಳನ್ನು ಹೊಂದಿದೆ. ಎಸ್ಸಾರ್, ಎಲ್ ಅಂಡ್ ಟಿ ಎಂಜಿನಿಯರಿಂಗ್ ಮತ್ತು ರಿಲಾಯನ್ಸ್ ಪೆಟ್ರೋಕೆಮಿಕಲ್ ಈ ಸ್ಥಳದಲ್ಲಿ ಇರುವ ಇತರ ಉದ್ಯಮಗಳಾಗಿವೆ.
 • ಸೂರತ್‌ನ ರಸ್ತೆಗಳು ಭಾರತದ ಇತರ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ ಮತ್ತು ಹೊಸ ಎಕ್ಸ್‌ಪ್ರೆಸ್ ವೇಯನ್ನು ನಿರ್ಮಿಸಲಾಗಿದೆ. ಸೂರತ್ ರೈಲು ನಿಲ್ದಾಣವು ಭಾರತದ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿದೆ, ಇದು ಇತರ ನಗರಗಳಿಗೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸೂರತ್ ವಿಮಾನ ನಿಲ್ದಾಣವು ಅಹಮದಾಬಾದ್ ನಂತರ ಗುಜರಾತ್‌ನ 2‌ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ನಗರವು ಸೀಪೋರ್ಟ್ ಅನ್ನು ಸಹ ಹೊಂದಿದೆ.

12. ಜೈಪುರ

 • ಜೈಪುರ ನಗರವನ್ನು 17‌ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾಯಿತು ಮತ್ತು ಇದು ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಬನಾಸ್ ಮತ್ತು ಬಂಗಂಗಾ ನದಿಯು ನಗರದ ಮೂಲಕ ಹಾದುಹೋಗುತ್ತದೆ. ಜೈಪುರದ ಹವಾಮಾನವು ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆಯನ್ನು ಪಡೆಯುವ ಬಿಸಿ ಮತ್ತು ಅರೆ ಶುಷ್ಕ ಹವಾಮಾನವಾಗಿದೆ. ಜೈಪುರವು ತನ್ನ ಆಧುನಿಕ ಪೂರ್ವ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಪಿಂಕ್ ನಗರ ಎಂದೂ ಕರೆಯಲಾಗುತ್ತದೆ, ಇದರ ಹಿಂದಿನ ಕಾರಣವೆಂದರೆ ವೇಲ್ಸ್‌ನ ಭೇಟಿ ನೀಡುವ ರಾಜಕುಮಾರನನ್ನು ಸ್ವಾಗತಿಸಲು ಇಡೀ ನಗರವನ್ನು ಗುಲಾಬಿ ಬಣ್ಣದಲ್ಲಿ ಚಿತ್ರಿಸಲಾಗಿತ್ತು.
 • ನಗರದ ಪ್ರಮುಖ ಕೈಗಾರಿಕೆಗಳು ಲೋಹಗಳು ಮತ್ತು ಅಮೃತಶಿಲೆಗಳು. ಈ ನಗರವು ಆಧುನಿಕ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ. ಜೆನ್ ಪ್ಯಾಕ್ಟ್, ಇನ್ಫೊಸಿಸ್‌ನಂತಹ ಸೇವಾ ಕೈಗಾರಿಕೆಗಳು ನಗರದಲ್ಲಿ ತಮ್ಮ ಬಿಪಿಒ ಕಚೇರಿಗಳನ್ನು ಹೊಂದಿವೆ. ನಗರದ ಕೆಲವು ಪ್ರಸಿದ್ಧ ಕಂಪನಿಗಳೆಂದರೆ ಐಬಿಎಂ, ಕೋಕಾ ಕೋಲಾ, ಟಿಸಿಎಸ್, ವಿಪ್ರೋ, ಟೆಕ್ ಮಹೀಂದ್ರಾ. ಮಹೀಂದ್ರಾ ವಿಶ್ವ ನಗರ ಎಂದು ಕರೆಯಲ್ಪಡುವ ಭಾರತದ ಅತಿದೊಡ್ಡ ಐಟಿ‌ಎಸ್ ಇಝಡ್ ಜೈಪುರದಲ್ಲಿದೆ.
 • ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಲ್ಲಿ ಪ್ರಯಾಣದ ಅಗತ್ಯಗಳನ್ನು ಮತ್ತು ಸಾರಿಗೆಯನ್ನು ಪೂರೈಸುವ ಪ್ರಾಥಮಿಕ ವಿಮಾನ ನಿಲ್ದಾಣವಾಗಿದೆ. ಜೈಪುರವು ಸಮಗ್ರ ರಸ್ತೆಮಾರ್ಗಗಳೊಂದಿಗೆ ಮತ್ತು ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲ್ವೆಯೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ನಿಮ್ಮ ವ್ಯವಹಾರಕ್ಕೆ ಸೂಕ್ತವಾದ ನಗರವನ್ನು ಆಯ್ಕೆ ಮಾಡಿ

ಗಾಜಿಯಾಬಾದ್, ನೋಯ್ಡಾ, ವಿಶಾಖಪಟ್ಟಣಂ ನಂತಹ ಇನ್ನೂ ಅನೇಕ ನಗರಗಳಿವೆ, ಅವು ತಮ್ಮದೇ ಆದ ನಿರ್ದಿಷ್ಟ ಕೈಗಾರಿಕೆಗಳಲ್ಲಿ ವೈವಿಧ್ಯಮಯವಾಗಿವೆ. ವ್ಯವಹಾರಗಳು ತಮ್ಮ ತಮ್ಮ ನಗರಗಳಲ್ಲಿನ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರ ವ್ಯವಸ್ಥೆಗಳನ್ನು ಬೆಂಬಲಿಸಬೇಕು. ಉತ್ಪನ್ನಗಳು, ಕಾರ್ಮಿಕ ಶಕ್ತಿ, ಕಚ್ಚಾ ವಸ್ತುಗಳು, ಗ್ರಾಹಕರು, ಮಾರುಕಟ್ಟೆ ಡೈನಾಮಿಕ್ಸ್, ನಗರದ ಸವಾಲುಗಳು ಮುಂತಾದ ಅನೇಕ ಪ್ರಮುಖ ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ ಏಕೆಂದರೆ ಅದು ಕಂಪನಿಯ ಭವಿಷ್ಯದ ಬೆಳವಣಿಗೆ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ.

ನಗರದೊಳಗೆ ಲಭ್ಯವಿರುವ ಪ್ರಸ್ತುತ ಪರಿಸರ ವ್ಯವಸ್ಥೆಯನ್ನು ಕಂಪನಿಯ ಪ್ರಮುಖ ಸಾಮರ್ಥ್ಯಗಳು ಮತ್ತು ಬಲದೊಂದಿಗೆ ಎಚ್ಚರಿಕೆಯಿಂದ ಪರಿಗಣಿಸಲು ಮೌಲ್ಯಮಾಪನ ಮಾಡಬೇಕಾಗಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸೂಕ್ತವಾದ ವ್ಯವಹಾರವನ್ನು ಸ್ಥಾಪಿಸುವುದು ಸೂಕ್ತ. ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ವ್ಯವಹಾರಗಳು ವಿವಿಧ ನಗರಗಳಲ್ಲಿ ವಿಭಿನ್ನ ವ್ಯವಹಾರ ಕೋನಗಳನ್ನು ಸ್ಥಾಪಿಸಬಹುದು ಮತ್ತು ಲಭ್ಯವಿರುವ ಸಂಪನ್ಮೂಲಗಳಿಂದ ಉತ್ತಮವಾದವುಗಳನ್ನು ಅನ್ವೇಷಿಸಬಹುದು. ಇದು ಭಾರತದಲ್ಲಿ ವ್ಯಾಪಾರ ಮಾಡಲು ಉನ್ನತ ನಗರಗಳಲ್ಲಿ ಉಪಸ್ಥಿತಿಯನ್ನು ಹೊಂದಲು ವ್ಯವಹಾರಕ್ಕೆ ಅವಕಾಶ ನೀಡುತ್ತದೆ.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ವ್ಯವಹಾರ ನಡೆಸಲು ನೀವು ನಗರಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?

ಅಗತ್ಯವಿರುವ ಸಂಪನ್ಮೂಲಗಳ ವಿಧ, ವ್ಯವಹಾರವು ಬಯಸುವ ಬಂಡವಾಳ, ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ಆಧಾರದ ಮೇಲೆ ಮಾನವ ಶಕ್ತಿಯ ಅವಶ್ಯಕತೆಗಳ ಬಗ್ಗೆ ವ್ಯವಹಾರಗಳು ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕು. ಈ ನಿಯತಾಂಕಗಳ ಆಧಾರದ ಮೇಲೆ, ವ್ಯವಹಾರಗಳು ತಮ್ಮ ಅಗತ್ಯಗಳಿಗೆ ಸೂಕ್ತವಾದ ನಗರಗಳನ್ನು ಶಾರ್ಟ್ ಲಿಸ್ಟ್ ಮಾಡಬೇಕು. ಅತ್ಯಂತ ವೆಚ್ಚ-ಪರಿಣಾಮಕಾರಿ ಆಯ್ಕೆಯನ್ನು ಆಯ್ಕೆ ಮಾಡಿ. ಅಲ್ಲದೆ, ಸ್ಥಳವು ಭವಿಷ್ಯವನ್ನು ಉಳಿಸಿಕೊಳ್ಳಲು ನಿರ್ಧರಿಸಬೇಕು ಏಕೆಂದರೆ ಅದು ಬೆಳವಣಿಗೆಯನ್ನು ನಿರ್ಧರಿಸುತ್ತದೆ. 

ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯಾವುದು ಅತ್ಯುತ್ತಮ ನಗರ?

ಉತ್ಪಾದನಾ ಘಟಕಕ್ಕೆ, ಆದ್ಯತೆಯ ಸ್ಥಳವು ರಿಯಲ್ ಎಸ್ಟೇಟ್ ಬೆಲೆಗಳು ಕಡಿಮೆ ಮತ್ತು ಪ್ರತಿಭಾವಂತ ಕಾರ್ಯಪಡೆ ಲಭ್ಯವಿರುವ ನಗರದ ಮಿತಿಯಿಂದ ಹೊರಗಿರುತ್ತದೆ. ಆದ್ದರಿಂದ ಅದರ ಆಧಾರದ ಮೇಲೆ ಚೆನ್ನೈ, ನಾಗ್ಪುರ ಅಥವಾ ಕೋಲ್ಕತ್ತಾ ಸೂಕ್ತವಾಗಿರುತ್ತದೆ.

ಮಾಹಿತಿ ತಂತ್ರಜ್ಞಾನ ವಲಯಕ್ಕೆ ಯಾವುದು ಅತ್ಯುತ್ತಮ ನಗರ?

ಭಾರತದ ಸಿಲಿಕಾನ್ ವ್ಯಾಲಿ ಅಂದರೆ ಬೆಂಗಳೂರು ಉತ್ತಮವಾಗಿರುತ್ತದೆ, ಮೂಲಸೌಕರ್ಯ, ಬಂಡವಾಳ, ಸಂಪನ್ಮೂಲ ಮತ್ತು ಪ್ರತಿಭಾವಂತ ಉದ್ಯೋಗಿಗಳ ಲಭ್ಯತೆಯಿಂದಾಗಿ ಪುಣೆ ಮತ್ತು ಹೈದರಾಬಾದ್ ನಂತರದ ಸ್ಥಾನದಲ್ಲಿದೆ

ಹಣಕಾಸು ಹೂಡಿಕೆ ಸಲಹೆಗಾರರು ಅಥವಾ ಸಲಹೆಗಾರರಿಗೆ ಯಾವುದು ಅತ್ಯುತ್ತಮ ನಗರ?

ಮುಂಬೈ ಭಾರತದ ಹಣಕಾಸು ರಾಜಧಾನಿಯಾಗಿರುವುದರಿಂದ, ಬಿಎಸ್ಇ ಮತ್ತು ಎನ್‌ಎಸ್‌ಇ ಮುಂಬೈನಲ್ಲಿವೆ. ಹೂಡಿಕೆ ಸಲಹೆಗಾರರು ಮತ್ತು ಸಲಹೆಗಾರರಿಗೆ ಇದು ಆದ್ಯತೆಯ ನಗರವಾಗಿರುತ್ತದೆ. 

ಮುಂಬೈನಲ್ಲಿ ವ್ಯವಹಾರಗಳು ಎದುರಿಸುತ್ತಿರುವ ಸವಾಲುಗಳು ಯಾವುವು

ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯ ಆಯ್ಕೆ ಎಂದರೆ ಪುಣೆಯಲ್ಲಿ ವ್ಯಾಪಾರ ಮಾಡುವುದು ಮತ್ತು ಮುಂಬೈ - ಪುಣೆ ಎಕ್ಸ್‌ಪ್ರೆಸ್ ವೇ ಮೂಲಕ ಮುಂಬೈ ನಗರಕ್ಕೆ ಸಂಪರ್ಕ ಸಾಧಿಸುವುದು. ಮತ್ತೊಂದು ಪ್ರಮುಖ ಸವಾಲೆಂದರೆ ಜನಸಂಖ್ಯೆಯ ಹೆಚ್ಚಳ, ಇದು ಸ್ಪರ್ಧಾತ್ಮಕ ವೆಚ್ಚದಲ್ಲಿ ಪ್ರತಿಭಾವಂತ ಕಾರ್ಯಪಡೆ ಅಥವಾ ವರ್ಕ್ ಫೋರ್ಸ್ ಅನ್ನು ಸಹ ನೀಡುತ್ತದೆ.

 

Related Posts

None

ವಾಟ್ಸಾಪ್ ಮಾರ್ಕೆಟಿಂಗ್


None

ಜಿಎಸ್ಟಿ ಪರಿಣಾಮ ಕಿರಾನಾ ಅಂಗಡಿ


None

ಎಚ್‌ಎಸ್‌ಎನ್ ಮತ್ತು ಎನ್‌ಐಸಿ ಕೋಡ್‌ಗಳು


None

ಕಿರಾಣಿ ಅಂಗಡಿ


None

ಕಿರಾನಾ ಅಂಗಡಿ


None

ಹಣ್ಣು ಮತ್ತು ತರಕಾರಿ ಅಂಗಡಿ


None

ಬೇಕರಿ ವ್ಯವಹಾರ


None

ಅಂಟಿಕೊಳ್ಳುವ ವ್ಯವಹಾರ


None

ಕರಕುಶಲ ವ್ಯವಹಾರ