written by Khatabook | July 25, 2022

ಡೇ ಕೇರ್ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ಟಿಪ್ಸ್

×

Table of Content


ಕಡಿಮೆ ಬಜೆಟ್‌ನಲ್ಲಿ ಯಾವುದಾದರೂ ಬ್ಯುಸಿನೆಸ್ ಪ್ರಾರಂಭಿಸಬೇಕು ಎಂದುಕೊಂಡಿದ್ದೀರಾ? ಯಾವ ಬ್ಯುಸಿನೆಸ್ ಪ್ರಾರಂಭಿಸಬಹುದು ಎನ್ನುವ ಗೊಂದಲದಲ್ಲಿದ್ದೀರಾ? ನೀವು ಮಕ್ಕಳನ್ನು ಇಷ್ಟಪಡುವ ವ್ಯಕ್ತಿಯಾಗಿದ್ದರೆ, ನಿಮಗೊಂದು ಬೆಸ್ಟ್ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಯಾವುದು ಆ ಬ್ಯುಸಿನೆಸ್? ಈ ಬ್ಯುಸಿನೆಸ್ ಪ್ರಾರಂಭಿಸಲು ತಗುಲುವ ವೆಚ್ಚ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.

ಡೇ ಕೇರ್ ಅಥವಾ ಮಕ್ಕಳ ಆರೈಕೆ ಕೇಂದ್ರ. ಬೆಂಗಳೂರಿನಂತಹ ನಗರಗಳಲ್ಲಿ ಒಳ್ಳೆ ಡಿಮ್ಯಾಂಡ್ ಅಥವಾ ಬ್ಯುಸಿನೆಸ್ ಇರುವ ಒಂದು ಉದ್ಯಮ ಎಂದರೆ ಡೇ ಕೇರ್ ಬ್ಯುಸಿನೆಸ್ . ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಂದಿಯೇ ಹೆಚ್ಚು. ಪತಿ ಪತ್ನಿಯರಿಬ್ಬರೂ ಕೆಲಸಕ್ಕೆ ಹೋಗುವ ಈ ದಿನಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರ ಅವಶ್ಯಕತೆ ಇದ್ದೇ ಇದೆ. ಹಾಗಿದ್ದಾಗ ಅವರು ಮೊದಲು ಹುಡುಕುವುದು ಒಳ್ಳೆಯ ಡೇ ಕೇರ್ ಕೇಂದ್ರವನ್ನ. ಹಾಗಾದ್ರೆ ಈ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ನೀವು ಮಾಡಬೇಕಾದ ಕೆಲಸಗಳೇನು? ಮುಂದಕ್ಕೆ ಓದಿ. 

ಯಾವುದೇ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ಸರಿಯಾದ ಯೋಜನೆ ಮಾಡುವುದು ಅತ್ಯಗತ್ಯ. ಹಾಗಾದ್ರೆ ನೀವು ಯಾವೆಲ್ಲ ವಿಷಯದ ಬಗ್ಗೆ ಗಮನ ವಹಿಸಬೇಕು. ಇಲ್ಲಿದೆ ನೋಡಿ ಕೆಲವೊಂದು ಟಿಪ್ಸ್. 

ಮಾರ್ಕೆಟ್ ಸಂಶೋಧನೆ ಮಾಡಿ

ಡೇ ಕೇರ್ ಬ್ಯುಸಿನೆಸ್ ಬಗ್ಗೆ ಸಂಪೂರ್ಣ ಐಡಿಯಾ ದೊರೆತ ಮೇಲೆ ನೀವು ಮಾಡಬೇಕಾದ ಮೊದಲ ಕೆಲಸ ಮಾರುಕಟ್ಟೆ ಸಂಶೋಧನೆ. ಯಾವುದೇ ಹೊಸ ಉದ್ಯಮ ಶುರು ಮಾಡುವ ಮುನ್ನ ನೀವು ಮಾರುಕಟ್ಟೆ ಬಗ್ಗೆ ಐಡಿಯಾ ಹೊಂದಿರದಿದ್ದರೆ ನೀವು ಮುಂದುವರೆಯುವುದು ಕಷ್ಟ. ಹಾಗಾಗಿ ನೀವು ಪ್ರಾರಂಭ ಮಾಡಬೇಕಾಗಿರುವುದು ಇಲ್ಲಿಂದಲೇ. ಯಾವ ಏರಿಯಾದಲ್ಲಿ ಡೇ ಕೇರ್ ಪ್ರಾರಂಭಿಸಬಹುದು, ಆ ಏರಿಯಾದಲ್ಲಿ ಬೇರೆ ಎಷ್ಟು ಡೇ ಕೇರ್ ಸೆಂಟರ್ ಇದೆ, ಎಷ್ಟು ಮಕ್ಕಳಿದ್ದಾರೆ, ಒಂದು ಮಗುವಿಗೆ ಅವರು ತೆಗೆದುಕೊಳ್ಳುತ್ತಿರುವ ಹಣವೆಷ್ಟು, ಮಕ್ಕಳಿಗಾಗಿ ಅವರು ಹೊಂದಿರುವ ಸೌಲಭ್ಯಗಳು ಯಾವುವು ಇವೆಲ್ಲದರ ಬಗ್ಗೆ ಮೊದಲು ಸಂಶೋಧನೆ ಮಾಡಿ. ಇದಾದ ಬಳಿಕ ಕಾನೂನಾತ್ಮಕ ಮತ್ತು ಫೈನಾನ್ಷಿಯಲ್ ಸಂಬಂಧಿತ ಮಾಹಿತಿಗಳನ್ನು ಕಲೆ ಹಾಕಿ. ಯಾಕೆಂದರೆ ಯಾವುದೇ ಉದ್ಯಮ ಪ್ರಾರಂಭಿಸುವ ಮೊದಲು ಇವೆಲ್ಲವನ್ನೂ ತಿಳಿದುಕೊಳ್ಳುವುದು ಬಹಳ ಮುಖ್ಯ. 

ಸರಿಯಾದ ಯೋಜನೆ ರೂಪಿಸಿ

ಸರಿಯಾದ ಯೋಜನೆ ರೂಪಿಸುವುದು ನಿಮ್ಮ ಬ್ಯುಸಿನೆಸ್ ಯಶಸ್ವಿಯಾಗಲು ಮುಖ್ಯ ಕಾರಣ. ಹಾಗಾಗಿ ಪ್ರಾರಂಭದಿಂದಲೇ ಯೋಜನೆಯನ್ನು ರೂಪಿಸುವುದು ಬಹಳ ಮುಖ್ಯ. ದಿನಂದಿನ ದಿನಕ್ಕೆ ಡೇ ಕೇರ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ಡೇ ಕೇರ್ ಬಹಳ ಚೆನ್ನಾಗಿದ್ದರೆ ಪೋಷಕರನ್ನು ಬಹಳ ಬೇಗ ಆಕರ್ಷಿಸುತ್ತದೆ. ಸಣ್ಣ ಮಕ್ಕಳನ್ನು ಡೇ ಕೇರ್ ನಲ್ಲಿ ಬಿಡುವ ಸಂದರ್ಭ ಎದುರಾದಾಗ ಪೋಷಕರಿಗೆ ಆತಂಕ ಸಹಜ. ಹೀಗಿದ್ದಾಗ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡುವುದು ನಿಮ್ಮ ಕರ್ತವ್ಯ. ಇವುಗಳನ್ನೂ ಪಟ್ಟಿ ಮಾಡಿ:

  • ಮಕ್ಕಳ ಸಂಖ್ಯೆ: ನಿಮ್ಮ ಕಟ್ಟಡ ಎಷ್ಟು ದೊಡ್ಡದಿದೆ ಎನ್ನುವ ಆಧಾರದ ಮೇಲೆ ಎಷ್ಟು ಮಕ್ಕಳನ್ನು ತೆಗೆದುಕೊಳ್ಳಬಹುದು ಎನ್ನುವುದನ್ನು ಪ್ಲ್ಯಾನ್ ಮಾಡಿ

  • ಮಕ್ಕಳ ವಯಸ್ಸು: ಡೇ ಕೇರ್ ಅಂದಾಕ್ಷಣ ೬ ತಿಂಗಳ ಮಗುವಿನಿಂದ ಹಿಡಿದು ೩ ವರ್ಷದವರೆಗೂ ಮಕ್ಕಳನ್ನು ಡೇ ಕೇರ್ ಅಲ್ಲಿ ಬಿಡುವವರು  ಇದ್ದಾರೆ. ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ರೀತಿಯ ಕಾಳಜಿ ಬೇಕಾಗುತ್ತದೆ. ಅದಕ್ಕೆ ಕೆಲಸದವರ ಅವಶ್ಯಕತೆಯೂ ಇದೆ. ಹೀಗಾಗಿ ಅದರ ಆಧಾರದ ಮೇಲೆ ಯಾವ ವಯಸ್ಸಿನ ಮಕ್ಕಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಿ. 

  • ಪೀಠೋಪಕರಣಗಳು: ಇನ್ನು ಸಣ್ಣ ಮಕ್ಕಳು ಎಂದಾಕ್ಷಣ ಊಟ, ಆಟ, ನಿದ್ದೆ ಸಹಜ. ಹಾಗಾಗಿ ಅದಕ್ಕೆ ತಕ್ಕನಾದ ವ್ಯವಸ್ಥೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಚಳಿ, ಮಳೆಯ ಸಮಯದಲ್ಲಿ ಬೇಕಾಗುವ ಹೊದಿಕೆಗಳು, ಅವರ ವಯಸ್ಸಿಗೆ ತಕ್ಕ ಹಾಗೆ ಆಟವಾಡಲು ಬೇಕಾಗುವ ಆಟಿಕೆಗಳು, ಪೆಟ್ಟಾಗದ ರೀತಿಯಲ್ಲಿ ನೋಡಿಕೊಳ್ಳಲು ಸುರಕ್ಷಾ ಕವಚಗಳು ಬಹಳ ಮುಖ್ಯ. 

ಬಂಡವಾಳ

ಇವೆಲ್ಲವೂ ರೆಡಿಯಾದ ಮೇಲೆ ಮುಂದಿನ ಕೆಲಸ ಹಣದ ವ್ಯವಸ್ಥೆ. ನಿಮ್ಮ ಬ್ಯುಸಿನೆಸ್ ಪ್ರಾರಂಭಿಸಲು ಬೇಕಾದ ಎಲ್ಲಾ ಯೋಜನೆಗಳು ರೆಡಿಯಾದ ಮೇಲೆ ನೀವು ಹಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಲೈಸೆನ್ಸ್ ಪಡೆಯಲು, ರೂಮ್ ಬಾಡಿಗೆ ಪಡೆಯುವುದಾದರೆ ಬಾಡಿಗೆ ಮತ್ತು ಡೆಪಾಸಿಟ್ ಗೆ ಹಣ, ಪೀಠೋಪಕರಗಳ ಸಿದ್ಧತೆಗೆ ಬೇಕಾದ ಹಣ, ಕೆಲಸಕ್ಕೆ ಜನ ಇಡುವುದಾದರೆ ಅವರಿಗೆ ವೇತನ ಪಾವತಿಸಲು ಹೀಗೆ ಬೇರೆ ಬೇರೆ ಅಗತ್ಯತೆಗಳಿಗೆ ಬೇರೆ ಬೇರೆ ಮೊತ್ತದ ಅಗತ್ಯವಿರುತ್ತದೆ. ಹೀಗಾಗಿ ಮೊದಲೇ ಯೋಜನೆ ರೂಪಿಸಿಕೊಂಡು ಮುಂದುವರೆಯುವುದು ಒಳ್ಳೆಯದು.

ಮಕ್ಕಳ ಆರೈಕೆ ಸಂಬಂಧಿತ ಕೋರ್ಸ್

ಇನ್ನು ಸಣ್ಣ ಮಕ್ಕಳ ಡೇ ಕೇರ್ ನಡೆಸುವುದು ಅಷ್ಟೊಂದು ಸುಲಭವಲ್ಲ. ನುರಿತ ಅನುಭವ ಇಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನಿಮ್ಮ ಬ್ಯುಸಿನೆಸ್ ಯೋಜನೆ ಯಶಸ್ವಿಯಾಗಬೇಕಾದರೆ ನೀವು ಮಕ್ಕಳ ಕಾಳಜಿಗೆ ಸಂಬಂಧಿಸಿದ ಯಾವುದಾದರೂ ಕೋರ್ಸ್ ಪಡೆಯುವುದು ನಿಮಗೆ ಪ್ಲಸ್ ಪಾಯಿಂಟ್. ಇದು ನಿಮ್ಮ ಡೇ ಕೇರ್ ಬಗ್ಗೆ ಪೋಷಕರಲ್ಲೂ ಒಂದು ಒಳ್ಳೆ ಭಾವನೆ ಮೂಡಿಸುತ್ತೆ. ಹಾಗಾಗಿ ಈ ಉದ್ಯಮ ಪ್ರಾರಂಭಿಸುವ ಮೊದಲು ಅದಕ್ಕೆ ಸಂಬಂಧಿಸಿದ ಟ್ರೇನಿಂಗ್ ಪಡೆಯುವುದು ಸೂಕ್ತ. 

ಲೊಕೇಶನ್ ಆರಿಸಿ

ಇನ್ನು ಡೇ‌ಕೇರ್‌ಗೆ ಒಂದೊಳ್ಳೆ ಲೊಕೇಶನ್ ಆರಿಸುವುದು ಕೂಡ ನಿಮ್ಮ ಬ್ಯುಸಿನೆಸ್ ಯಶಸ್ವಿಯಾಗುವುದಕ್ಕೆ ಸಹಾಯ ಮಾಡುತ್ತದೆ. ಆದಷ್ಟು ಶಾಂತ ಪ್ರದೇಶ ಮತ್ತು ವಾಹನಗಳು ಬಂದು ಹೋಗುವುದಕ್ಕೆ ಸುಲಭವಾಗುವಂತಹ ಪ್ರದೇಶದಲ್ಲಿ ಡೇಕೇರ್ ಮಾಡುವುದು ಉತ್ತಮ. 

ಒಳ್ಳೆ ಹೆಸರು ಕೊಡಿ

ನಿಮ್ಮ ಡೇ‌ಕೇರ್‌ಗೆ ಒಂದೊಳ್ಳೆ ಹೆಸರು ನೀಡಿ. ಹೆಸರು ಎಲ್ಲದರ ಮೂಲ ಕೇಂದ್ರ ಬಿಂದು. ಹೆಸರು ಮೊದಲು ಎಲ್ಲರನ್ನು ಆಕರ್ಷಿಸುತ್ತೆ. ಹಾಗಾಗಿ ಆಕರ್ಷಕ ಮತ್ತು ವಿಭಿನ್ನ ಹೆಸರನ್ನು ನಿಮ್ಮ ಡೇ ಕೇರ್ ಗೆ ಇಡಿ. 

ತುರ್ತು ಪರಿಸ್ಥಿತಿಗೆ ತಯಾರಿ

ಮಕ್ಕಳು ಎಂದ ಮೇಲೆ ಅನಾರೋಗ್ಯ, ಚಿಕಿತ್ಸೆ ಅವಶ್ಯಕತೆ ಬಂದೆ ಬರುತ್ತೆ. ತುಂಬಾ ಮಕ್ಕಳಿದ್ದಾಗ ಎಷ್ಟು ಜಾಗರೂಕತೆ ವಹಿಸಿದರೂ ಬೀಳೋದು ಏಳೋದು ಸಾಮಾನ್ಯ. ಹಾಗಾಗಿ ಈ ಸಂದರ್ಭದಲ್ಲಿ ಅಗತ್ಯಕ್ಕೆ ಬೇಕಾಗುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಹತ್ತಿರದ ಆಸ್ಪತ್ರೆ ಅಥವಾ ವೈದ್ಯರ ದೂರವಾಣಿ ಸಂಖ್ಯೆ, ಆಂಬುಲೆನ್ಸ್ ನಂಬರ್ ನಿಮ್ಮ ಬಳಿ ಇರಲಿ. 

ಡೇಕೇರ್ ಗಾಗಿ ಹೂಡಿಕೆ ಮತ್ತು ಸಾಲಗಳು:

ಬ್ಯಾಂಕುಗಳು ಅನುಮೋದಿಸುವ ಸುಲಭ ಸಾಲಗಳನ್ನು ಪಡೆಯಬಹುದು ಅಥವಾ ಇತರ ದೊಡ್ಡ ಸ್ಥಾಪಿತ ಬ್ರಾಂಡ್‌ಗಳೊಂದಿಗೆ ಇದನ್ನು ಪ್ರಾರಂಭಿಸಬಹುದು. ಈ ವ್ಯವಹಾರವು ಒಂದು ಬಾರಿಯ ಹೂಡಿಕೆಯಾಗಿದೆ ಮತ್ತು ವರ್ಷವಿಡೀ ಆದಾಯ ಗಳಿಸಬಹುದು. ಡೇಕೇರ್ ಮೊದಲ ವರ್ಷದಲ್ಲಿಯೇ ಉತ್ತಮವಾಗಿ ನಡೆದರೆ, ಇತರ ಪ್ರಸಿದ್ಧ ಹೂಡಿಕೆದಾರರಿಂದ ಹಣ ಮತ್ತು ಹೂಡಿಕೆಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿವೆ.

ಸಿಬ್ಬಂದಿ ನಿಯೋಜನೆ

ನಿಮ್ಮ ಪ್ರಿಸ್ಕೂಲ್ /ಡೇಕೇರ್ ಸಿಬ್ಬಂದಿ ನಿಮ್ಮ ಯಶಸ್ಸಿಗೆ ದೊಡ್ಡ ಕೊಡುಗೆ ನೀಡುತ್ತಾರೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಸಹಾನುಭೂತಿ ಹೊಂದಿರುವ ಜನರ ನಡುವೆ ಇರಲು ತಮ್ಮ ಮಕ್ಕಳನ್ನು ಇಷ್ಟಪಡುತ್ತಾರೆ. ಹೀಗಾಗಿ ಸರಿಯಾದ ಕೌಶಲ್ಯಗಳನ್ನು ಹೊಂದಿರುವ ಜನರನ್ನು ಹುಡುಕುವುದರ ಜೊತೆಗೆ, ನಿಮ್ಮ ಪ್ರಿ ಸ್ಕೂಲ್‌ಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೊದಲು ಸರಿಯಾದ ಹಿನ್ನೆಲೆ ಪರಿಶೀಲನೆಗಳನ್ನು ಸಹ ಮಾಡಿ. ಅವರ ಶೈಕ್ಷಣಿಕ ಹಿನ್ನೆಲೆ, ಅರ್ಹತೆಗಳು ಮತ್ತು ಅನುಭವವನ್ನು ಪರಿಶೀಲಿಸಿ. ಅಲ್ಲದೆ, ಯಾವುದೇ ಕ್ರಿಮಿನಲ್ ಹಿನ್ನೆಲೆಯ ಇತಿಹಾಸಕ್ಕಾಗಿ ಎಲ್ಲಾ ಶಿಕ್ಷಕರು ಮತ್ತು ಇಡೀ ಸಿಬ್ಬಂದಿಯನ್ನು ಪರಿಶೀಲಿಸಿ. ಒಂದೋ ಎಲ್ಲಾ ನೇಮಕಾತಿಗಳನ್ನು ನೀವೇ ಮಾಡಬಹುದು, ಆದರೆ ನೀವು ಬಜೆಟ್ ಹೊಂದಿದ್ದರೆ, ಸಿಬ್ಬಂದಿ ಏಜೆನ್ಸಿಯನ್ನು ಟ್ರೈ ಮಾಡಿ.

ನಿಮ್ಮ ಪ್ರಿಸ್ಕೂಲ್ ವ್ಯವಹಾರಕ್ಕಾಗಿ ಲೀಡ್ ಗಳನ್ನು ಪಡೆಯಲು ಮಾರ್ಕೆಟಿಂಗ್ ತಂತ್ರವನ್ನು ರಚಿಸಿ.

ನಿಮ್ಮ ಮಾರ್ಕೆಟಿಂಗ್ ಕಾರ್ಯತಂತ್ರವು ಈ ಕೆಳಗಿನ ಕಾರ್ಯತಂತ್ರಗಳನ್ನು ಹೊಂದಿರಬೇಕು:

  • ಮುದ್ರಣ ಜಾಹೀರಾತು ಮತ್ತು ಪ್ರಸಾರ. 
  • ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಇದರಲ್ಲಿ ನೀವು ನಿಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳ ಮೂಲಕ ನಿಮ್ಮ ಸ್ಥಳೀಯ ಪ್ರೇಕ್ಷಕರೊಂದಿಗೆ ಸಂವಹನ ನಡೆಸಬಹುದು.
  • ಪ್ರಸ್ತುತ ತಮ್ಮ ಮಕ್ಕಳನ್ನು ನಿಯಮಿತವಾಗಿ ನಿಮ್ಮ ಪ್ರಿ ಸ್ಕೂಲ್‌ಗೆ ಕಳುಹಿಸುವ ಪೋಷಕರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸುವುದು
  • ನಿಮ್ಮ ಸಮುದಾಯದಲ್ಲಿ ಮಕ್ಕಳ ಚಟುವಟಿಕೆಗಳನ್ನು ಆಯೋಜಿಸುವುದು.
  • ಈ ಎಲ್ಲಾ ಮಾರ್ಕೆಟಿಂಗ್ ಉಪಕ್ರಮಗಳು ನಿಮ್ಮ ಡೇಕೇರ್ ಅಥವಾ ಪ್ರಿಸ್ಕೂಲ್ ವ್ಯವಹಾರದ ಬಗ್ಗೆ ಸುದ್ದಿಯನ್ನು ಹರಡಲು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
  • ಪ್ರಿಸ್ಕೂಲ್ ಮತ್ತು ಡೇಕೇರ್ ಬಿಸಿನೆಸ್ ಸೆಟಪ್ ವೆಚ್ಚಗಳು
  • ಪ್ರಿಸ್ಕೂಲ್ ಸೆಟಪ್ ವೆಚ್ಚವು ಮೂಲಸೌಕರ್ಯಗಳನ್ನು ನಿರ್ಮಿಸಲು, ರೆಕಾರ್ಡ್ ತಯಾರಿಸಲು, ಸಿಬ್ಬಂದಿಯನ್ನು ನಿರ್ವಹಿಸಲು, ಸಂಬಳಗಳನ್ನು ಪಾವತಿಸಲು ಮತ್ತು ಇತರ ಮಾರುಕಟ್ಟೆ ವೆಚ್ಚಗಳನ್ನು ಅವಲಂಬಿಸಿ 2-20 ಲಕ್ಷ ರೂ.ಗಳವರೆಗೆ ಬೇಕಾಗಬಹುದು.

ಉಪಸಂಹಾರ

ಒಮ್ಮೆ ಮಾತ್ರ ಬಂಡವಾಳ ಹೂಡಿ ವರ್ಷವಿಡೀ ಲಾಭ ಗಳಿಸಬಹುದಾದ ಉದ್ಯಮಗಳಲ್ಲಿ ಡೇ ಕೇರ್ ಕೂಡ ಒಂದು. ಹೆಚ್ಚು ನೌಕರರ ಅಗತ್ಯವಿಲ್ಲದೆ ಕೆಲವೇ ಕೆಲವು ನೌಕರರ ಜೊತೆಗೆ ನೀವು ಈ ಉದ್ಯಮವನ್ನು ಪ್ರಾರಂಭಿಸಬಹುದು. ಇದಕ್ಕೆ ಬೇಕಾಗಿರುವುದು ಸರಿಯಾದ ಯೋಜನೆ, ಬಂಡವಾಳ ಮತ್ತು ಆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಹುಮ್ಮಸ್ಸು. ಇತ್ತೀಚಿನ ಅಪ್ ಡೇಟ್, ನ್ಯೂಸ್ ಬ್ಲಾಗ್ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಂಎಸ್ಎಂಇಗಳು), ವ್ಯವಹಾರ ಸಲಹೆಗಳು, ಆದಾಯ ತೆರಿಗೆ, ಜಿಎಸ್ಟಿ, ಸಂಬಳ ಮತ್ತು ಅಕೌಂಟಿಂಗ್ ಸಂಬಂಧಿಸಿದ ಲೇಖನಗಳಿಗಾಗಿ Khatabook ಫಾಲೋ ಮಾಡಿ. 

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.