written by Khatabook | February 4, 2022

ಕೇಂದ್ರ ಬಜೆಟ್ 2022 ಕುರಿತು ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು

×

Table of Content


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ 2022-23 ರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಮುಂದಿನ 25 ವರ್ಷಗಳ ಕಾಲ ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಿಸ್ತರಣೆಗೆ ಕೇಂದ್ರ ಬಜೆಟ್ ಅಡಿಪಾಯ ಹಾಕಲಿದೆ ಎಂದು ಮೋದಿ ಸರ್ಕಾರದ ಎರಡನೇ ಅವಧಿಯ 4ನೇ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು. 

ರೈಲ್ವೆ, ಲೋಹಗಳು, ಸೌರಶಕ್ತಿ, ಸಿಮೆಂಟ್ ಮತ್ತು ನಿರ್ಮಾಣ ಸೇರಿದಂತೆ ಈ ವರ್ಷದ ಬಜೆಟ್‌ನಲ್ಲಿ ಶಿಕ್ಷಣ, ಡಿಜಿಟಲ್ ಹಣಕಾಸು, ದೂರಸಂಪರ್ಕ, ಸೌರಶಕ್ತಿ, ಎಲೆಕ್ಟ್ರಿಕ್ ವಾಹನಗಳು, ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇನ್ನು ಆರೋಗ್ಯ ಕ್ಷೇತ್ರವು ಕೂಡ 2022 ರ ಬಜೆಟ್‌ನ ಪ್ರಮುಖ ಭಾಗವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಕಲ್ಲಿದ್ದಲು, ಥರ್ಮಲ್ ಪವರ್, ಸ್ಟೀಲ್ ಮತ್ತು ಆಟೋಮೊಬೈಲ್ ವಲಯಕ್ಕೆ ಈ ಬಾರಿ ಹೆಚ್ಚಿನ ಅನುದಾನ ಸಿಕ್ಕಿಲ್ಲ.

ಆಮದು ಮಾಡಿದ ಸರಕುಗಳ ಮೇಲಿನ ಕೃಷಿ ಸೆಸ್, ಎಲೆಕ್ಟ್ರಾನಿಕ್ಸ್ ಮೇಲಿನ ಕಸ್ಟಮ್ಸ್ ಸುಂಕದ ಹೆಚ್ಚಳ, ರಾಸಾಯನಿಕಗಳು, ವಜ್ರಗಳು ಮತ್ತು ಅಮೂಲ್ಯ ರತ್ನಗಳ ಮೇಲಿನ ಕಡಿತದೊಂದಿಗೆ ನೇರ ತೆರಿಗೆಗಳು ಬದಲಾಗದೆ ಉಳಿದಿವೆ. ಬೆಳವಣಿಗೆಯನ್ನು ಬೆಂಬಲಿಸಲು ಆರ್ಥಿಕತೆಯ ವಾರ್ಷಿಕ ವೆಚ್ಚವನ್ನು 39.5 ಟ್ರಿಲಿಯನ್ ರೂಪಾಯಿಗಳಿಗೆ (US$529 ಶತಕೋಟಿ) ಹೆಚ್ಚಿಸಲು ಪ್ರಸ್ತಾಪಿಸಿದ ಸಚಿವರು  2026 ರ ವೇಳೆಗೆ ಭಾರತವು US$5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗಲಿದೆ ಎಂದು ಹೇಳಿದರು. 

ಸಚಿವರ ಬಜೆಟ್ ಭಾಷಣದ ಪ್ರಮುಖ ಹತ್ತು ವಿಷಯಗಳು 

2022-2023ರ ಕೇಂದ್ರ ಬಜೆಟ್‌ನಿಂದ ನೀವು ತಿಳಿದುಕೊಳ್ಳಬೇಕಾದ ಹತ್ತು ಪ್ರಮುಖ ವಿಷಯಗಳು ಇಲ್ಲಿವೆ:

ಆರ್ಥಿಕತೆ ಮತ್ತು ಖರ್ಚು

ಹಣಕಾಸು ವರ್ಷ 2023 ರ ಬಂಡವಾಳ ವೆಚ್ಚವು GDP ಯ ಸುಮಾರು 2.9% ರಷ್ಟಿರುವ ಸರ್ಕಾರಿ ವೆಚ್ಚಕ್ಕೆ ₹7.5 ಲಕ್ಷ ಕೋಟಿ ಹಂಚಿಕೆಯೊಂದಿಗೆ ಏರಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಗುರಿಯು 35.4% ರಷ್ಟು ವಿಸ್ತರಿಸಿದೆ.

ಹಣಕಾಸು ವರ್ಷ 2023 ಗಾಗಿ ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್) ₹10.7 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದೆ.

ಹಣಕಾಸು ವರ್ಷ 2022-23 ಕ್ಕೆ GDP ಯ 6.4% ರಷ್ಟು ಹಣಕಾಸಿನ ಕೊರತೆಯನ್ನು ನಿರೀಕ್ಷಿಸಲಾಗಿದೆ ಮತ್ತು 2021-22 ರ ಕೊರತೆಯನ್ನು GDP ಯ 6.9% ಗೆ ಪರಿಷ್ಕರಿಸಲಾಗಿದೆ. 2026 ರ ಆರ್ಥಿಕ ವರ್ಷಕ್ಕೆ 4.5% ರ ಹಣಕಾಸಿನ ಗುರಿಯನ್ನು ಟಾರ್ಗೆಟ್ ಮಾಡಿದೆ.

ಸಚಿವೆ  ಸೀತಾರಾಮನ್ ಅವರು ಹಣಕಾಸು ವರ್ಷ 23 ರಲ್ಲಿ ಬಡ್ಡಿ ರಹಿತ ಸಾಲದ ರೂಪದಲ್ಲಿ ಕ್ಯಾಪೆಕ್ಸ್‌ಗಾಗಿ ರಾಜ್ಯಗಳಿಗೆ ಆರ್ಥಿಕ ಸಹಾಯವನ್ನು ₹1 ಲಕ್ಷ ಕೋಟಿಗೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಘೋಷಿಸಿದರು. FY22 ರಲ್ಲಿ ಈ ಅಂಕಿ ಅಂಶವು ₹ 15,000 ಕೋಟಿ ಆಗಿತ್ತು.

ಮೂಲಸೌಕರ್ಯಕ್ಕೆ ಉತ್ತೇಜನ

ಪ್ರಧಾನ ಮಂತ್ರಿ ಘಟಿ ಶಕ್ತಿ ಮೂಲಕ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಗಮನಹರಿಸಲಾಗಿದೆ. ಪ್ರಧಾನಮಂತ್ರಿ ಘಟಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ 7 ಎಂಜಿನ್‌ಗಳೊಂದಿಗೆ ಪರಿವರ್ತಕ ವಿಧಾನವನ್ನು ಒಳಗೊಂಡಿದೆ. ಅವುಗಳೆಂದರೆ - ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ.

ಶಕ್ತಿ ಪ್ರಸರಣ, ಐಟಿ ಸಂವಹನ, ಬೃಹತ್ ನೀರು ಮತ್ತು ಒಳಚರಂಡಿ ಮತ್ತು ಸಾಮಾಜಿಕ ಮೂಲಸೌಕರ್ಯಗಳಂತಹ ವಿವಿಧ ಕ್ಷೇತ್ರಗಳ ಪಾತ್ರದಿಂದ ಈ ಎಂಜಿನ್‌ಗಳನ್ನು ಬೆಂಬಲಿಸಲಾಗುತ್ತದೆ.

ಹಣಕಾಸು ವರ್ಷ 2023 ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 25,000 ಕಿಮೀ ವಿಸ್ತರಿಸಲಾಗುವುದು. ಮೇಲಾಗಿ, ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ ಹಣಕಾಸು ಒದಗಿಸುವ ಹೊಸ ವಿಧಾನಗಳ ಮೂಲಕ ₹20,000 ಕೋಟಿಗಳನ್ನು ವಿನಿಯೋಗಿಸಲಾಗುತ್ತದೆ.

ರೈಲ್ವೆ ಮತ್ತು ಸಾರಿಗೆ

ಪ್ರತ್ಯೇಕವಾಗಿ ಘೋಷಿಸಲಾಗುತ್ತಿದ್ದ ರೈಲ್ವೆ ಬಜೆಟ್ ಅನ್ನು 2016 ರಲ್ಲಿ ಕೇಂದ್ರ ಬಜೆಟ್‌ನೊಂದಿಗೆ ವಿಲೀನಗೊಳಿಸಲಾಯಿತು. ₹1,40,367.13 ಕೋಟಿ ಹಂಚಿಕೆಯೊಂದಿಗೆ, ರೈಲ್ವೆ ಕೂಡ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 400 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಯಿತು. ಇದಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಿರುವ ರೈಲ್ವೆ ವಲಯಕ್ಕೆ 100 ಘಟಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಕೂಡ ಸೇರಿಸಲಾಗುವುದು ಎಂದು ಸಚಿವೆ ತಿಳಿಸಿದರು.

2023 ರ ವೇಳೆಗೆ ಬ್ರಾಡ್ ಗೇಜ್ ಮಾರ್ಗಗಳ 100% ವಿದ್ಯುದ್ದೀಕರಣವನ್ನು ಕೂಡ ಸಚಿವರು ಉಲ್ಲೇಖಿಸಿದ್ದಾರೆ.

ಸ್ಥಳೀಯ ವ್ಯಾಪಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯನ್ನು ಘೋಷಿಸಲಾಗಿದೆ. ಸಣ್ಣ ರೈತರು ಮತ್ತು SME ಗಳಿಗೆ ಹೊಸ ಉತ್ಪನ್ನಗಳು ಮತ್ತು ದಕ್ಷ ಲಾಜಿಸ್ಟಿಕ್ ಸೇವೆಗಳನ್ನು ರೈಲ್ವೆ ಅಭಿವೃದ್ಧಿಪಡಿಸುವುದರ ಜೊತೆಗೆ ತಡೆರಹಿತ ಪರಿಹಾರಗಳನ್ನು ಒದಗಿಸಲು ಅಂಚೆ ಮತ್ತು ರೈಲ್ವೆ ಜಾಲದ ಏಕೀಕರಣವನ್ನು ಮಾಡಲು ಯೋಜನೆ ರೂಪಿಸಲಾಗಿದೆ.

ಶಿಕ್ಷಣದಲ್ಲಿ ಡಿಜಿಟಲೀಕರಣ

2022 ರ ಬಜೆಟ್ ವಿಶ್ವ ದರ್ಜೆಯ ಡಿಜಿಟಲ್ ವಿಶ್ವವಿದ್ಯಾನಿಲಯದ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿತು ಏಕೆಂದರೆ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳಿಗೆ 'ಡಿಜಿಟಲ್' ಒಂದು ವಿಷಯವಾಗಿ ಉಳಿದಿದೆ.

ಕೋಟಿಗಟ್ಟಲೆ ಮಕ್ಕಳ ಮೇಲೆ ಕೋವಿಡ್ ಸಾಂಕ್ರಾಮಿಕದ ಪ್ರಭಾವ ಮತ್ತು ಕಳೆದ 2 ವರ್ಷಗಳಿಂದ ಔಪಚಾರಿಕ ಶಾಲಾ ಶಿಕ್ಷಣದ ನಷ್ಟವನ್ನು ಒಪ್ಪಿಕೊಂಡ ಸಚಿವರು, ಅಸ್ತಿತ್ವದಲ್ಲಿರುವ 12 ಶೈಕ್ಷಣಿಕ ಟೆಲಿವಿಷನ್ ಚಾನೆಲ್‌ಗಳನ್ನು 200 ಕ್ಕೆ ಏರಿಸಿ PM E-ವಿದ್ಯಾ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದರು. ಇದು ಪ್ರಾದೇಶಿಕ ಭಾಷೆಗಳಿಗೂ ಉತ್ತೇಜನ ನೀಡಲಿದೆ.

ಕೃಷಿ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಕೌಶಲ್ಯ ಕೋರ್ಸ್‌ಗಳನ್ನು ಸಹ ಘೋಷಿಸಲಾಯಿತು.

ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ

ಜಿಎಸ್‌ಟಿ ಸಂಗ್ರಹಣೆಗಳು ₹1.38 ಲಕ್ಷ ಕೋಟಿಗಳಲ್ಲಿ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದು, ಇದು ಭಾರತದಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಪ್ರಾರಂಭಿಸಿದ ನಂತರದ ಅತ್ಯಧಿಕವಾಗಿದೆ. ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ಸಮಯದಲ್ಲಿ ಪತ್ತೆಯಾದ ಬಹಿರಂಗಪಡಿಸದ ಆದಾಯದ ಮೇಲೆ ಯಾವುದೇ ನಷ್ಟದ ಸೆಟ್-ಆಫ್ ಅನ್ನು ಅನುಮತಿಸಲಾಗುವುದಿಲ್ಲ ಎನ್ನುವುದನ್ನೂ ಹಣಕಾಸು ಸಚಿವರು ಘೋಷಿಸಿದರು.

ಆದಾಗ್ಯೂ, ಸಂಬಳದ ವರ್ಗಕ್ಕೆ ಯಾವುದೇ ತೆರಿಗೆ ಸುಧಾರಣೆಗಳನ್ನು ಘೋಷಿಸಲಾಗಿಲ್ಲ. ವಿವಿಧ ವಲಯಗಳಿಂದ ಬೇಡಿಕೆಗಳ ಹೊರತಾಗಿಯೂ ವೈಯಕ್ತಿಕ ಆದಾಯ ತೆರಿಗೆ ರಚನೆಯು ಬದಲಾಗದೆ ಉಳಿದಿದೆ. ಹೆಚ್ಚು ಮುಖ್ಯವಾಗಿ, ತೆರಿಗೆದಾರರು ಸಂಬಂಧಿತ ಮೌಲ್ಯಮಾಪನ ವರ್ಷದ 2 ವರ್ಷಗಳಲ್ಲಿ ನವೀಕರಿಸಿದ ITR(ಆದಾಯ ತೆರಿಗೆ ರಿಟರ್ನ್) ಸಲ್ಲಿಸಬಹುದು.TDS ನಿಯಮಗಳ ಬದಲಾವಣೆ ಎಂದರೆ, 1 ವರ್ಷದ ITR ಫೈಲಿಂಗ್ ಮಿಸ್ ಮಾಡಿಕೊಂಡರೂ ಹೆಚ್ಚಿನ TDS ಕಡಿತವಾಗಬಹುದು.

ಆದಾಗ್ಯೂ, ಡಿಜಿಟಲ್ ಸ್ವತ್ತುಗಳನ್ನು ಸ್ವೀಕರಿಸುವವರಿಗೆ 30% ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ತಜ್ಞರು ಇದನ್ನು "ಕ್ರಿಪ್ಟೋ ತೆರಿಗೆ" ಎಂದು ಕರೆಯುತ್ತಿದ್ದಾರೆ, ಅಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯನ್ನು ಸ್ವೀಕರಿಸುವವರು  30% ತೆರಿಗೆ ನೀಡಬೇಕಾಗುತ್ತದೆ.

ಕೃಷಿ ಮತ್ತು ರೈತರಿಗೆ ಹೆಚ್ಚಿನ ಪ್ರಾಮುಖ್ಯತೆ

ತಂತ್ರಜ್ಞಾನದ ಬಳಕೆ, ಹಸಿರು ಶಕ್ತಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪ್ರಾಮುಖ್ಯತೆಯ ಜೊತೆಗೆ ರೈತರಿಗೆ ₹2.37 ಲಕ್ಷ ಕೋಟಿ MSP (ಕನಿಷ್ಠ ಬೆಂಬಲ ಬೆಲೆ) ಘೋಷಿಸಲಾಯಿತು. ಬೆಳೆ ಮೌಲ್ಯಮಾಪನ, ಡಿಜಿಟಲ್ ಭೂ ದಾಖಲೆಗಳ ಪ್ರಮೋಷನ್, ಭತ್ತ ಖರೀದಿ ಜೊತೆಗೆ ಕೀಟನಾಶಕ ಸಿಂಪಡಣೆಗಾಗಿ ಕಿಸಾನ್ ಡ್ರೋನ್‌ ಯೋಜನೆಯನ್ನು ಘೋಷಿಸಲಾಯಿತು.

ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದರಿಂದ, ಮೋದಿ ಸರ್ಕಾರಕ್ಕೆ 'ಎಲ್ಲವನ್ನೂ ಒಳಗೊಂಡ ಅಭಿವೃದ್ಧಿ' ಆದ್ಯತೆಯಾಗಿ ಉಳಿಯಿತು. ಕೃಷಿ ಸ್ಟಾರ್ಟಪ್‌ಗಳು ಮತ್ತು ಗ್ರಾಮೀಣ ಉದ್ಯಮಗಳಿಗೆ ಹಣಕಾಸು ಒದಗಿಸಲು, ನಬಾರ್ಡ್ ಮೂಲಕ ಸಹ-ಹೂಡಿಕೆ ಮಾದರಿಯಡಿಯಲ್ಲಿ ಸಂಗ್ರಹಿಸಿದ ಸಂಯೋಜಿತ ಬಂಡವಾಳದೊಂದಿಗೆ ನಿಧಿಯನ್ನು ಸರ್ಕಾರವು ಸುಗಮಗೊಳಿಸಲಿದೆ.

ಬ್ಯಾಂಕಿಂಗ್ ಮತ್ತು ECLGS ವಿಸ್ತರಣೆ

ಎಲ್ಲಾ ಅಂಚೆ ಕಛೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ತರಲು ನಿರ್ಧರಿಸಲಾಗಿದೆ. ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿಯನ್ನು ಬಜೆಟ್‌ನಲ್ಲಿ ಘೋಷಿಸಲಾಯಿತು, ಇದನ್ನು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು ವರ್ಷ 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ತಿಳಿಸಿದರು.

ನಿಗದಿತ ವಾಣಿಜ್ಯ ಬ್ಯಾಂಕ್‌ಗಳಿಂದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವುದಾಗಿ ಸಚಿವರು ಘೋಷಿಸಿದರು. ಬಜೆಟ್ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿದೆ. ಇದಲ್ಲದೆ, ECLGS ಗಾಗಿ ಖಾತರಿ ಕವರ್ ಅನ್ನು ₹ 50,000 ಕೋಟಿಗಳಿಂದ ಒಟ್ಟು ₹ 5 ಲಕ್ಷ ಕೋಟಿಗಳಿಗೆ ವಿಸ್ತರಿಸಲಾಗುವುದು. ಹೆಚ್ಚುವರಿ ಮೊತ್ತವನ್ನು ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮೈಕ್ರೋ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE), SME ಗಳಿಗೆ ₹ 2 ಲಕ್ಷ ಕೋಟಿಗಳಷ್ಟು ಹೆಚ್ಚುವರಿ ಸಾಲವನ್ನು ಒದಗಿಸುವ ನಿಧಿಯೊಂದಿಗೆ ಇರಲಿದೆ, ಹೀಗಾಗಿ ಇದು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ. ಇನ್ಸಾಲ್ವೆನ್ಸಿ ಮತ್ತು ದಿವಾಳಿತನ(bankrutcy) ಕೋಡ್ (IBC) ನಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದೆ.

ಸೌರ ಶಕ್ತಿ ಮತ್ತು EV ಬ್ಯಾಟರಿಗಳು

ಶುದ್ಧ ಇಂಧನವನ್ನು ಉತ್ತೇಜಿಸುವ ಗುರಿಯೊಂದಿಗೆ, ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳನ್ನು ತಯಾರಿಸಲು PLI ಯೋಜನೆಯ ಅಡಿಯಲ್ಲಿ ₹19,500 ಕೋಟಿ ಹಣವನ್ನು ಹೆಚ್ಚುವರಿಯಾಗಿ ನಿಗದಿಪಡಿಸಲಾಗಿದೆ. 

ಖಾಸಗಿ ಕಂಪನಿಗಳು ವಿನಿಮಯ ಮಾಡೆಲ್ ಮಾಡಲು ಉತ್ತೇಜನ ನೀಡುವುದರೊಂದಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಕ್ಕೆ ಅನುಮತಿಸಲು ಬ್ಯಾಟರಿ ವಿನಿಮಯ ನೀತಿಯನ್ನು ಘೋಷಿಸಲಾಯಿತು. ಹಸಿರು ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಲು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಗ್ರೀನ್ ಬಾಂಡ್‌ಗಳ ವಿತರಣೆಯನ್ನು ಘೋಷಿಸಲಾಯಿತು.

ಸ್ಟಾರ್ಟಪ್ ಮತ್ತು MSME ಗಳಿಗೆ ಪ್ರಮುಖ ಆದ್ಯತೆ

MSMEಗಳು ಮತ್ತು ಸ್ಟಾರ್ಟಪ್‌ಗಳಿಗೆ ಹಲವಾರು ಪ್ರಯೋಜನಗಳನ್ನು ವಿಸ್ತರಿಸುವುದರೊಂದಿಗೆ, ಡಿಜಿಟಲ್ ಪರಿಸರ ವ್ಯವಸ್ಥೆ, ಉತ್ಪಾದನಾ ವಲಯ ಮತ್ತು ಕೈಗಾರಿಕೆಗಳು ಬಜೆಟ್‌ನ ಕೇಂದ್ರಬಿಂದುವಾಗಿ ಉಳಿದಿವೆ. ಪ್ರಸ್ತುತ ಮೂರು ವರ್ಷಗಳ ವಿನಾಯಿತಿಗೆ ಹೆಚ್ಚುವರಿಯಾಗಿ 1 ವರ್ಷಕ್ಕೆ ತೆರಿಗೆ ಪ್ರಯೋಜನಗಳನ್ನು ಹೆಚ್ಚಿಸಲಾಗಿದೆ.

ವಿವಿಧ ಅಪ್ಲಿಕೇಶನ್‌ಗಳ ಮೂಲಕ 'ಡ್ರೋನ್ ಶಕ್ತಿ'ಗೆ ಅನುಕೂಲವಾಗುವಂತೆ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲಾಗುತ್ತದೆ ಮತ್ತು  Drone-As-A-Service (ಡ್ರೋನ್-ಆಸ್-ಎ-ಸರ್ವಿಸ್) (DrAAS) ಗಾಗಿ ITI ಗಳಲ್ಲಿ ಕೌಶಲ್ಯವನ್ನು ಒದಗಿಸಲಾಗುತ್ತದೆ.

ದೆಹಲಿಯು ಭಾರತದ ಸ್ಟಾರ್ಟಪ್ ಕ್ಯಾಪಿಟಲ್ ಆಗುವುದರೊಂದಿಗೆ, ಭಾರತವು ಈಗ 61,400 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ವಿಭಾಗ (DPIIT) ಗುರುತಿಸಿದೆ. 2021-22ರಲ್ಲಿ ಕನಿಷ್ಠ 14,000 ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳನ್ನು ಇದಕ್ಕೆ ಸೇರಿಸಲಾಗಿದೆ.

ಉದ್ಯಮ, ಇ-ಶ್ರಮ್, NCS ಮತ್ತು ಅಸೀಮ್‌ನಂತಹ ಎಂಎಸ್‌ಎಂಇ(MSME)ಗಳ ಪೋರ್ಟಲ್‌ಗಳನ್ನು ಪರಸ್ಪರ ಜೋಡಿಸಲಾಗುತ್ತದೆ ಮತ್ತು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ. ಮುಂದಿನ 5 ವರ್ಷಗಳವರೆಗೆ 6,000 ಕೋಟಿ ರೂ.ಗಳ ಹಂಚಿಕೆಯೊಂದಿಗೆ MSME ಕಾರ್ಯಕ್ಷಮತೆಯನ್ನು ವೇಗಗೊಳಿಸಲು 5 ವರ್ಷಗಳ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ವಸತಿ ಮತ್ತು ನಗರ ಯೋಜನೆ

ಪ್ರಧಾನಮಂತ್ರಿ ಆವಾಸ್ ಯೋಜನೆಯು 2022-2023 ರಲ್ಲಿ ಗುರುತಿಸಲಾದ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ನಿರ್ಮಿಸುವುದರೊಂದಿಗೆ ₹48,000 ಕೋಟಿಗಳನ್ನು ಹಂಚಿಕೆ ಮಾಡಿದೆ. 2022-23ರಲ್ಲಿ 3.8 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ₹60,000 ಕೋಟಿ ಮಂಜೂರು ಮಾಡಲಾಗಿದೆ. ನಗರ ಯೋಜನೆಗಾಗಿ ಅಸ್ತಿತ್ವದಲ್ಲಿರುವ 5 ಶೈಕ್ಷಣಿಕ ಸಂಸ್ಥೆಗಳನ್ನು ₹250 ಕೋಟಿ ಹಂಚಿಕೆಯೊಂದಿಗೆ ಸೆಂಟರ್ ಫಾರ್ ಎಕ್ಸಲೆನ್ಸ್ ಎಂದು ಗೊತ್ತುಪಡಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಸಹಕಾರ ಸಂಘಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯನ್ನು 18% ರಿಂದ 15% ಕ್ಕೆ ಇಳಿಸುವ ಪ್ರಸ್ತಾಪವನ್ನು ಸಹ ಮುಂದಿಡಲಾಯಿತು.

ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ (MSME) ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್‌ಗಳು, ಸುದ್ದಿ ಬ್ಲಾಗ್‌ಗಳು, ವ್ಯಾಪಾರ ಸಲಹೆಗಳು, ಆದಾಯ ತೆರಿಗೆ, GST, ಸಂಬಳ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದ ಲೇಖನಗಳಿಗಾಗಿ, Khatabook ಅನ್ನು ಫಾಲೋ ಮಾಡಿ. 

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.