written by Khatabook | June 23, 2021

ಭಾರತದಲ್ಲಿ ಜಿಮ್ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ಮಾಹಿತಿ

×

Table of Content


ಫಿಟ್ನೆಸ್ ಉದ್ಯಮವು ಭಾರತದಲ್ಲಿ ಹೆಚ್ಚು ಲಾಭದಾಯಕ ವ್ಯವಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಜಿಮ್‌ಗಳು ಅತೀ ಜನಪ್ರಿಯವಾಗಿವೆ. ಮನೆಯಲ್ಲಿ ವರ್ಕ್‌ಔಟ್ ಮಾಡಲು ಸಾಧ್ಯವಾದರೂ, ಜಿಮ್‌ಗಳು ವರ್ಕ್‌ಔಟ್‌ನ ಹೆಚ್ಚಿನ ಪ್ರಯೋಜನಗಳನ್ನು ಜನರಿಗೆ ನೀಡುತ್ತದೆ. ಜಿಮ್ ಸಾಧನಗಳು ಸ್ವಲ್ಪ ದುಬಾರಿಯಾದರೂ ಅದರ ಜೊತೆಗೆ ಹೆಚ್ಚಿನ ಸ್ಥಳದ ಅವಶ್ಯಕತೆ ಕೂಡ ಅದಕ್ಕಿದೆ. ಆದರೆ ಅದರಿಂದ ಆಗುವ ಪ್ರಯೋಜನಗಳು ಮಾತ್ರ ಹಲವು. 

ಫಿಟ್ನೆಸ್ ಉದ್ಯಮವು 2022ರ ವೇಳೆಗೆ ಒಟ್ಟಾರೆ 32 ಬಿಲಿಯನ್ ಡಾಲರ್ ಬೆಳವಣಿಗೆಯನ್ನು ಕಾಣಲಿದೆ, ಜಿಮ್‌ಗಳು ಮತ್ತು ಸ್ಲಿಮ್ಮಿಂಗ್ ಸೇವೆಗಳು ಒಟ್ಟು 6.6 ಬಿಲಿನ್ ಡಾಲರ್‌ಗಿಂತ ಹೆಚ್ಚಿನ ಕೊಡುಗೆ ನೀಡುತ್ತವೆ. ಜಿಮ್ ಪ್ರಾರಂಭಿಸುವ ಯೋಜನೆಯಲ್ಲಿರುವವರಿಗೆ ಈ ಬ್ಲಾಗ್ ಭಾರತದಲ್ಲಿ ಜಿಮ್ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು ಮತ್ತು ದೀರ್ಘಾವಧಿಯಲ್ಲಿ ಅದನ್ನು ಹೇಗೆ ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸುವುದು ಎಂಬುದರ ಕುರಿತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುತ್ತದೆ.

ವ್ಯವಹಾರ ಮಾದರಿಯನ್ನು ಆರಿಸಿ

ನೀವು ಆಯ್ಕೆ ಮಾಡಿದ ವ್ಯವಹಾರ ಮಾದರಿಯು ನೀವು ಸೆಟ್ ಅಪ್ ಮಾಡಿದ ಸ್ಥಳದಲ್ಲಿ ನಿಮ್ಮ ಜಿಮ್ ಎಷ್ಟು ಚೆನ್ನಾಗಿ ನಡೆಯಬಹುದು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನಿಮ್ಮ ಆಯ್ಕೆ ಸರಿಯಾಗಿರಲಿ ಮತ್ತು ನಿಮ್ಮ ವ್ಯವಹಾರ ಮಾದರಿಗಳು ಹೀಗಿರಲಿ:

1. ಮೆಂಬರ್‌‌ಶಿಪ್ ಮಾಡೆಲ್:

  • ಜಿಮ್‌ಗಳು ದೀರ್ಘಕಾಲದವರೆಗೆ ಬಳಸುವ ಸಾಮಾನ್ಯ ವ್ಯವಹಾರ ಮಾದರಿ ಇದು. ಇದರಲ್ಲಿ ಗ್ರಾಹಕರು ಮಾಸಿಕ ಶುಲ್ಕವನ್ನು ಪಾವತಿಸುತ್ತಾರೆ ಮತ್ತು ಇದು ನಿಮಗೆ ನಿಯಮಿತ ಆದಾಯವನ್ನು ನೀಡುತ್ತದೆ.
  • ಉತ್ತಮ ಬೇಡಿಕೆಯಿರುವ ಪ್ರದೇಶದಲ್ಲಿ ನೀವು ಸೆಟ್ ಅಪ್ ಮಾಡಿದ್ದರೆ, ನೀವು ಹೆಚ್ಚಿನ ಗ್ರಾಹಕರನ್ನು ಹೊಂದಿರುತ್ತೀರಿ. ಈ ಮಾದರಿಯು ಸಾಕಷ್ಟು ಲಾಭದಾಯಕವಾಗಿರುತ್ತದೆ.
  • ನಿಮ್ಮ ಮಾಸಿಕ ಖರ್ಚು ರೂ. 50,000 ಆಗಿದ್ದರೆ ಮತ್ತು ಮಾಸಿಕ ಸದಸ್ಯತ್ವ ಶುಲ್ಕ ರೂ. 1000 ಆಗಿದ್ದರೆ, ನಂತರ ನಿಮ್ಮ ಖರ್ಚುಗಳನ್ನು ಸರಿದೂಗಿಸಲು ನಿಮಗೆ ಕನಿಷ್ಠ 50 ಸದಸ್ಯರ ಅಗತ್ಯವಿದೆ.

2. ಜಿಮ್‌ಗೆ ಹೋದಾಗ ಮಾತ್ರ ಪಾವತಿ:

  • ನೀವು ಹೊಸ ಜಿಮ್ ಪ್ರಾರಂಭಿಸುತ್ತಿದ್ದರೆ ಮತ್ತು ಹೊಸ ಗ್ರಾಹಕರನ್ನು ಜಿಮ್‌ಗೆ ಸೇರಿಸಲು ಬಯಸುತ್ತಿದ್ದರೆ ಈ ಮಾದರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
  • ಜಿಮ್‌ಗೆ ನಿಯಮಿತವಾಗಿ ಹೋಗಲು ಸಾಧ್ಯವಾಗದ ಜನರಿಗೆ ಇದು ಉತ್ತಮವಾಗಿದೆ ಮತ್ತು ಅವರ ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರತಿ ಭೇಟಿಗೆ ಒಂದು ಸಣ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
  • ಉದಾಹರಣೆಗೆ, 10 ಭೇಟಿಗಳಿಗೆ ಪ್ಯಾಕೇಜ್ ರೂ.1000 ಆಗಿದ್ದರೆ, ಅವರು ಅಗತ್ಯವಿದ್ದಾಗ 10 ಬಾರಿ ಜಿಮ್‌ಗೆ ಭೇಟಿ ನೀಡಬಹುದು.

3. ಡೈನಾಮಿಕ್ ಬೆಲೆ ಮಾದರಿ:

  • ತೂಕ ಇಳಿಸುವಿಕೆ ಅಥವಾ ದೇಹದಾರ್ಢ್ಯ ಅಥವಾ ಇತರ ಫಿಟ್‌ನೆಸ್ ಸಂಬಂಧಿತ ಕಾರ್ಯಕ್ರಮಗಳಿಗಾಗಿ ನೀವು ತರಬೇತುದಾರರೊಂದಿಗೆ ಜಿಮ್ ಅಥವಾ ಫ್ರ್ಯಾಂಚೈಸ್ ಅನ್ನು ಪ್ರಾರಂಭಿಸಿದರೆ ಈ ಮಾದರಿ ಕಾರ್ಯನಿರ್ವಹಿಸುತ್ತದೆ.
  • ಗ್ರಾಹಕರಿಗೆ ಅವರ ಅಗತ್ಯತೆಗಳು ಮತ್ತು ಗುರಿಗಳ ಆಧಾರದ ಮೇಲೆ ವಿಭಿನ್ನ ಪ್ಯಾಕೇಜ್‌ಗಳನ್ನು ನೀಡಲಾಗುವುದು. ದೊಡ್ಡ ನಗರಗಳಲ್ಲಿ ಉನ್ನತ ಮಟ್ಟದ ಸ್ಥಳಗಳ ಹತ್ತಿರದಲ್ಲಿ ನಿಮ್ಮ ಜಿಮ್ ಅನ್ನು ತೆರೆದರೆ ಅದು ಹೆಚ್ಚು ಲಾಭದಾಯಕ ಮಾದರಿಯಾಗಿದೆ.

4. ಸಂಯೋಜಿತ ಮಾಡೆಲ್:

  • ಈ ಮಾದರಿಯು ಸದಸ್ಯತ್ವವನ್ನು ಸಂಯೋಜಿಸುತ್ತದೆ ಮತ್ತು ಹೋದಾಗ ಮಾತ್ರ ಪಾವತಿಸಿ ಮಾದರಿಯು ಜಿಮ್‌ಗಳು ಮತ್ತು ಗ್ರಾಹಕರಿಗೆ ಸಹಾಯ ಮಾಡುತ್ತದೆ.
  • ನಿಯಮಿತ ಸದಸ್ಯರು ಸದಸ್ಯತ್ವ ಮಾದರಿಯಿಂದ ಲಾಭ ಪಡೆಯಬಹುದು, ಆದರೆ ಅನಿಯಮಿತ ಸದಸ್ಯರು ಇತರ ಆಯ್ಕೆಗಳನ್ನು ಆರಿಸಬಹುದು
  • ನೀವು ಹೆಚ್ಚಿನ ಗ್ರಾಹಕರ ನೆಲೆಯನ್ನು ಮತ್ತು ಸ್ಥಿರ ಆದಾಯವನ್ನು ಹೊಂದಿರುವಿರಿ ಎನ್ನುವುದನ್ನು ಇದು ಖಚಿತಪಡಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಹಾರ್ಡ್‌ವೇರ್ ಶಾಪ್ ಪ್ರಾರಂಭಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಸ್ಥಳ ಆಯ್ಕೆ

  • ಒಂದು ಸ್ಥಳವು ನಿಮ್ಮ ಜಿಮ್ ವ್ಯವಹಾರವನ್ನು ಚೆನ್ನಾಗಿ ನಡೆಸಲು ಅಥವಾ ನಿಲ್ಲಿಸುವಲ್ಲಿ ಪ್ರಮುಖ ಅಂಶವಾಗಿದೆ. ನಿಮ್ಮ ಜಿಮ್ ಅನ್ನು ವಸತಿ ಪ್ರದೇಶಗಳು, ಗೇಟೆಡ್ ಸಮುದಾಯಗಳು ಅಥವಾ ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ಹತ್ತಿರದಲ್ಲಿ ಪ್ರಾರಂಭಿಸುವುದು ಸೂಕ್ತ. ವಸತಿ ಪ್ರದೇಶದ ಹತ್ತಿರ ಯಾವುದೇ ಸ್ಥಳಾವಕಾಶವಿಲ್ಲದಿದ್ದರೆ, ಕಡಿಮೆ ಬಾಡಿಗೆಗೆ ಲಭ್ಯವಿರುವ ಮುಂದಿನ ಹತ್ತಿರದ ಸ್ಥಳದಲ್ಲಿ ದೊಡ್ಡ ಜಾಗವನ್ನು ಆರಿಸಿ.
  • ವಸತಿ ಪ್ರದೇಶಗಳಿಗೆ ಹತ್ತಿರವಿರುವ ಜಿಮ್‌ಗಳಿಗೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಹೆಚ್ಚು ಜನರು ಬರುತ್ತಾರೆ. ಆದ್ದರಿಂದ ಬಹುತೇಕ ಜನರು ಕಡಿಮೆ ಜನದಟ್ಟಣೆ ಮತ್ತು ಹೆಚ್ಚು ಶಾಂತ ಜಾಗದಲ್ಲಿ ವರ್ಕ್ ಔಟ್ ಮಾಡಲು ಇಚ್ಚಿಸುವ ಸಾಧ್ಯತೆ ಹೆಚ್ಚು.

ಭಾರತದಲ್ಲಿ ಜಿಮ್ ಸೆಟ್ ಅಪ್ ಮಾಡಲು ತಗಲುವ ವೆಚ್ಚ

ಭಾರತದಲ್ಲಿ ಜಿಮ್ ಸ್ಥಾಪಿಸುವ ವೆಚ್ಚವು ಗಾತ್ರ, ಸೌಲಭ್ಯಗಳು, ಗುಣಮಟ್ಟದ ಉಪಕರಣಗಳು ಮತ್ತು ನೀವು ಯಾವ ರೀತಿಯ ತರಬೇತುದಾರರನ್ನು ನೇಮಿಸಿಕೊಳ್ಳಲಿದ್ದೀರಿ ಎಂಬುದರ ಆಧಾರದ ಮೇಲೆ ಬದಲಾಗಬಹುದು. ಎಲ್ಲದರ ವಿವರ ಇಲ್ಲಿದೆ:

  • ಸ್ಥಳ ಮತ್ತು ಬಾಡಿಗೆ: ಹೆಚ್ಚಿನ ಜನರನ್ನು ಆಕರ್ಷಿಸಲು ಜಿಮ್‌ಗಳು ವಿಶಾಲವಾಗಿರಬೇಕು. ಆದ್ದರಿಂದ ಕನಿಷ್ಠ 10,000 ಚದರ ಅಡಿ ವಿಸ್ತೀರ್ಣ ಬೇಕಾಗುತ್ತದೆ. ಸ್ಥಳವನ್ನು ಅವಲಂಬಿಸಿ, ಬಾಡಿಗೆಯು ರೂ. 30,000 ದಿಂದ ರೂ. 5,00,000 ದವರೆಗೆ ಇರಬಹುದು
  • ಸಲಕರಣೆಗಳು: ಉತ್ತಮ ಜಿಮ್‌ಗಳಿಗೆ ಬಹಳಷ್ಟು ಸಂಖ್ಯೆಯಲ್ಲಿ ಸಾಧನಗಳು ಬೇಕಾಗುತ್ತದೆ, ಆದ್ದರಿಂದ ಹೆಚ್ಚಿನ ಜನರು ಒಂದೇ ಸಮಯದಲ್ಲಿ ಕೆಲಸ ಮಾಡಬಹುದು. ನೀವು ಸಣ್ಣದಾಗಿ ಪ್ರಾರಂಭಿಸುತ್ತಿದ್ದರೆ, ಮೂಲ ಸಲಕರಣೆಗಳ ವೆಚ್ಚವು ಸುಮಾರು ರೂ. 5,00,000 ಆಗಿದ್ದರೆ, ಸುಧಾರಿತ ಉಪಕರಣಗಳನ್ನು ಹೊಂದಿರುವ ದೊಡ್ಡ ಜಿಮ್‌ ಪ್ರಾರಂಭಿಸಲು 50,00,000 ರೂ. ಬೇಕಾಗಬಹುದು 
  • ಒಳಾಂಗಣಗಳು: ನಿಮ್ಮಲ್ಲಿಗೆ ಹೆಚ್ಚು ದುಬಾರಿ ಫೀಸು ನೀಡಿ ಜನ ಬರಬೇಕು ಅಂದುಕೊಂಡರೆ, ನಿಮ್ಮ ಒಳಾಂಗಣವು ಕ್ಲಾಸಿಯಾಗಿರಬೇಕು. ಈ ರೀತಿಯ ಒಳಾಂಗಣ ವಿನ್ಯಾಸಕ್ಕೆ ತಗಲುವ ವೆಚ್ಚ ರೂ. 2,00,000 ರಿಂದ ರೂ. 5,00,000.
  • ನಿರ್ವಹಣೆ ಸಿಬ್ಬಂದಿ: ಫ್ರಂಟ್ ಡೆಸ್ಕ್ ರಿಸೆಪ್ಷನಿಸ್ಟ್ ಸೇರಿದಂತೆ ನಿರ್ವಹಣಾ ಸಿಬ್ಬಂದಿಗೆ ರೂ. 30,000 ದಿಂದ ಶುರು ಮಾಡಿ ಎಷ್ಟು ಜನರನ್ನು ಈ ಕೆಲಸಕ್ಕೆ ನೇಮಿಸುತ್ತೀರಿ ಎನ್ನುವುದರ ಆಧಾರದ ಮೇಲೆ 60,000 ದವರೆಗೆ ನೀಡಬೇಕಾಗಬಹುದು. 
  • ತರಬೇತುದಾರರು: ಅರ್ಹ ತರಬೇತುದಾರರನ್ನು ನೇಮಿಸಿಕೊಳ್ಳಲು ಸ್ವಲ್ಪ ಹೆಚ್ಚು ವೆಚ್ಚವಾಗಬಹುದು. ಇದು ಎಷ್ಟು ಜನರನ್ನು ಈ ಕೆಲಸಕ್ಕೆ ನೇಮಿಸುತ್ತೀರಿ ಎನ್ನುವುದರ ಆಧಾರದ ಮೇಲೆ 1,00,000 ರೂ.ವರೆಗೆ ನೀಡಬೇಕಾಗಬಹುದು.

ಅಗತ್ಯ ಪರವಾನಗಿಗಳನ್ನು ಪಡೆದುಕೊಳ್ಳಿ

ಎಲ್ಲಾ ವ್ಯವಹಾರಗಳು ಕಾನೂನು ಮಾರ್ಗಸೂಚಿಗಳನ್ನು ಪೂರೈಸಬೇಕು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಈ ಉದ್ಯಮ ಪ್ರಾರಂಭಿಸುವಾಗ ನೀವು ಗಮನ ಹರಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿದೆ:

  • ಜಿಮ್ ನೋಂದಣಿ. ಇತರ ಎಲ್ಲ ವ್ಯವಹಾರಗಳಂತೆ, ನಿಮ್ಮ ಜಿಮ್ ಅನ್ನು ಏಕಮಾತ್ರ ಮಾಲೀಕತ್ವ, ಪಾಲುದಾರಿಕೆ ಸಂಸ್ಥೆ ಅಥವಾ ಕಂಪನಿಯಾಗಿ ನೋಂದಾಯಿಸಿಕೊಳ್ಳಬೇಕು.
  • ಇತರ ದಾಖಲೆಗಳಲ್ಲಿ ಕಟ್ಟಡ ಪರವಾನಗಿಗಳು, ಆರಂಭಿಕ ಹೂಡಿಕೆ-ಸಂಬಂಧಿತ ಒಪ್ಪಂದಗಳು, ತೆರಿಗೆ ನೋಂದಣಿ, ಕಾರ್ಯವಿಧಾನಗಳು ಇತ್ಯಾದಿ ಸೇರಿವೆ.
  • ಒಳಾಂಗಣ ಈಜುಕೊಳಗಳು, ಸ್ಪಾ, ಲಾಕರ್ ಕೊಠಡಿಗಳು ಮತ್ತು ಹೆಚ್ಚಿನವುಗಳಂತಹ ಜಿಮ್ ಸೌಲಭ್ಯಗಳಿಗಾಗಿ ವಿಶೇಷ ಅನುಮತಿ ಬೇಕಾಗುತ್ತದೆ.
  • ವಿಮೆ ಸಹ ಜಿಮ್‌ಗಳ ಒಂದು ಪ್ರಮುಖ ಭಾಗವಾಗಿದೆ, ಏಕೆಂದರೆ ಅಪಘಾತಗಳು ಮತ್ತು ಸಲಕರಣೆಗಳಿಗೆ ಸಂಬಂಧಿಸಿದ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚು.
  • ವ್ಯವಹಾರವು 20 ಲಕ್ಷ ಅಥವಾ ಕೆಲವು ರಾಜ್ಯಗಳಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ವಹಿವಾಟು ದಾಖಲಿಸಿದರೆ ಜಿಎಸ್ಟಿ ನೋಂದಣಿ ಕಡ್ಡಾಯವಾಗಿದೆ..
  • ಫಿಟ್‌ನೆಸ್‌ಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಿಗೆ ಪೊಲೀಸ್ ಇಲಾಖೆಯ ಅನುಮತಿ ಕೂಡ ಅತ್ಯಗತ್ಯ.

ಫಿಟ್ನೆಸ್ ತರಬೇತುದಾರರನ್ನು ನೇಮಿಸಿ

  • ನೀವು ಜಿಮ್ ವ್ಯವಹಾರವನ್ನು ಪ್ರಾರಂಭಿಸಿದಾಗ ಫಿಟ್‌ನೆಸ್ ತರಬೇತುದಾರರನ್ನು ನೇಮಿಸಿಕೊಳ್ಳುವುದು ಮುಖ್ಯ. ಫಿಟ್ನೆಸ್ ತರಬೇತುದಾರರು ಸರಿಯಾದ ದಿನಚರಿಯಲ್ಲಿ ತರಬೇತಿ ನೀಡಲು ಸಹಾಯ ಮಾಡಬಹುದು ಮತ್ತು ಗ್ರಾಹಕರಿಗೆ ವೈಯಕ್ತಿಕ ಸಲಹೆಯನ್ನು ನೀಡಬಹುದು. ಈ ಸೇವೆಗಳು ನಿಮ್ಮ ದೀರ್ಘಾವಧಿಯ ಸದಸ್ಯತ್ವವನ್ನು ಖಚಿತಪಡಿಸುತ್ತವೆ.
  • ಅವರು ತಾಲೀಮು ಅವಧಿಗಳನ್ನು ಸಂಘಟಿಸಲು ಸಹಾಯ ಮಾಡಬಹುದು ಮತ್ತು ಅಗತ್ಯವಾದ ವ್ಯಾಯಾಮ ದಿನಚರಿ ಮತ್ತು ಯಂತ್ರಗಳನ್ನು ಸದಸ್ಯರಿಗೆ ಪ್ರತಿದಿನವೂ ನಿಯೋಜಿಸಬಹುದು. ಇದು ಹೆಚ್ಚು ಜನ ಬರುವ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ 
  • ಅನುಭವಿ ತರಬೇತುದಾರರನ್ನು ನೇಮಿಸಿಕೊಳ್ಳುವುದರಿಂದ ಸೇವೆಯ ಗುಣಮಟ್ಟ ಸುಧಾರಿಸುವುದಲ್ಲದೆ ಜನರು ಇತರರಿಗೂ ನಿಮ್ಮಲ್ಲಿಗೆ ಬರುವಂತೆ ಶಿಫಾರಸು ಮಾಡಬಹುದು. ಅವರ ಅನುಭವಗಳು ನಿಮ್ಮ ಹೊಸ ಉದ್ಯಮಕ್ಕೆ ಸಹಾಯ ಮಾಡುವುದಲ್ಲದೆ ಅದನ್ನು ಇನ್ನಷ್ಟು ಸುಧಾರಿಸಲು ಸಹಾಯ ಮಾಡುತ್ತದೆ.
  • ಆದಾಗ್ಯೂ, ಫಿಟ್‌ನೆಸ್ ತರಬೇತುದಾರರನ್ನು ನೇಮಿಸಿಕೊಳ್ಳುವುದು ದುಬಾರಿಯಾಗಬಹುದು ಮತ್ತು ನೀವು ಎಷ್ಟು ಜನರನ್ನು ನೇಮಿಸಿಕೊಳ್ಳಬೇಕು ಎಂಬುದರ ಆಧಾರದ ಮೇಲೆ ರೂ.1,00,000 ವರೆಗೆ ಅವರಿಗೇ ನೀಡಬೇಕಾಗಬಹುದು.

ಫಿಟ್‌ನೆಸ್ ತರಬೇತುದಾರರನ್ನು ನೇಮಿಸುವ ಮೊದಲು, ನೀವು ನೋಡಬಹುದಾದ ಎಲ್ಲ ರುಜುವಾತುಗಳು ಇಲ್ಲಿವೆ:

  • GFFI (ಗೋಲ್ಡ್ ಜಿಮ್ ಫಿಟ್‌ನೆಸ್ ಸಂಸ್ಥೆ)
  • BFY ಸ್ಪೋರ್ಟ್ಸ್ & ಫಿಟ್‌ನೆಸ್
  • CBT (ಸರ್ಟಿಫೈಡ್ ಬಾಡಿಬಿಲ್ಡಿಂಗ್ & ಜಿಮ್/ಪರ್ಸನಲ್ ಟ್ರೈನರ್)
  • IAFT (ಇಂಡಿಯನ್ ಅಕಾಡೆಮಿ ಆಫ್ ಫಿಟ್‌ನೆಸ್ ತರಬೇತಿ)

ಇದನ್ನೂ ಓದಿ: ಭಾರತದಲ್ಲಿ ಬೇಕರಿ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ? - ಹೆಚ್ಚುವರಿ ಆದಾಯವನ್ನುಗಳಿಸಲು ಸಲಹೆಗಳು!

ಸಲಕರಣೆಗಳು ಮತ್ತು ಒಳಾಂಗಣಗಳು

ಎಲ್ಲಾ ಜಿಮ್‌ಗಳಿಗೆ ಉತ್ತಮ ಗುಣಮಟ್ಟದ ಉಪಕರಣಗಳು ಮುಖ್ಯ. ನಿಮ್ಮ ಜಿಮ್ ಸೆಟಪ್ ಈ ಮೂಲ ಸಾಧನಗಳನ್ನು ಹೊಂದಿರಬೇಕು:

  • ಟ್ರೇನಿಂಗ್ ಬೆಂಚ್: ಇವು ವಿವಿಧ ರೀತಿಯ ತರಬೇತಿ ವ್ಯಾಯಾಮಗಳಿಗೆ ಬಳಸುವ ಮೂಲ ಸಾಧನಗಳಾಗಿವೆ. ಇವುಗಳು ಹೆಚ್ಚು ಸಂಖ್ಯೆಯಲ್ಲಿ ನಿಮಗೆ ಬೇಕಾಗುತ್ತದೆ ಏಕೆಂದರೆ ಅವುಗಳನ್ನು ವೆಯ್ಟ್ ತರಬೇತಿಗಾಗಿ ಬಳಸಲಾಗುತ್ತದೆ. ಬೆಂಚುಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಮತ್ತು ಹೊಂದಿಸಲು ಸುಲಭವಾಗಬೇಕು.
  • ಫ್ರೀ ವೈಯ್ಟ್: ಡಂಬ್‌ಬೆಲ್ ಸೆಟ್‌ಗಳು, ಬಾರ್ಬೆಲ್ ಸೆಟ್‌ಗಳು, ಕೆಟಲ್ಬೆಲ್ ಸೆಟ್‌ಗಳು, ವೆಯ್ಟ್ ಪ್ಲೇಟ್ ಮತ್ತು ತೂಕವನ್ನು ಪ್ರತಿರೋಧವಾಗಿ ಬಳಸುವ ಇತರ ಸಾಧನಗಳಿಂದ ಪ್ರಾರಂಭವಾಗುವ ಹಲವಾರು ಶ್ರೇಣಿಯ ಸಾಧನಗಳನ್ನು ಫ್ರೀ ವೈಯ್ಟ್ ಒಳಗೊಂಡಿದೆ. ಜಿಮ್‌ನಲ್ಲಿ ಇವು ಹೆಚ್ಚು ಬಳಕೆಯಾಗುವ ಸಾಧನವಾಗಿರುವುದರಿಂದ, ಜಿಮ್ ಪೂರ್ಣ ಸಾಮರ್ಥ್ಯದಲ್ಲಿದ್ದರೂ ಸಹ, ಹೆಚ್ಚಿನ ಸಂಖ್ಯೆಯಲ್ಲಿ ಇದು ಇದೆ ಎಂದು ಖಚಿತಪಡಿಸಿಕೊಳ್ಳಿ.
  • ಫುಲ್ ಅಪ್ ಫ್ರೇಮ್ ಮತ್ತು ಬಾರ್ಸ್: ಇವು ದೇಹದ ತೂಕದ ವ್ಯಾಯಾಮಕ್ಕಾಗಿ ಹತ್ತುವ ಗೋಡೆ ಅಥವಾ ಸೀಲಿಂಗ್ ಬೆಂಬಲ ಬೇಕಾಗುತ್ತದೆ. ಸ್ಕ್ವಾಟಿಂಗ್ ರ್ಯಾಕ್ ಮತ್ತು ಬಾರ್ಬೆಲ್ಗಳನ್ನು ಹಿಡಿದಿಡಲು ರ್ಯಾಕ್ ಕೂಡ ಬೇಕಾಗುತ್ತದೆ.
  • ಕಾರ್ಡಿಯೋ ಸಲಕರಣೆ: ತ್ರೆಡ್‌ಮಿಲ್‌ಗಳು, ಸ್ಟೇಷನರಿ ಬೈಸಿಕಲ್‌ಗಳು ಮತ್ತು ಪಂಚ್ ಬ್ಯಾಗ್‌ಗಳು ಎಲ್ಲಾ ಜಿಮ್‌ಗಳಲ್ಲಿ ಅಗತ್ಯವಾದ ಎಲ್ಲಾ ರೀತಿಯ ಕಾರ್ಡಿಯೋ ಉಪಕರಣಗಳಾಗಿವೆ. ಎಲ್ಲಾ ಜನರಿಗೆ ಸ್ಥಳಾವಕಾಶ ಕಲ್ಪಿಸಲು ದೊಡ್ಡ ಗಾತ್ರದ ಜಿಮ್‌ಗಳಲ್ಲಿ 5 - 15 ಸಲಕರಣೆಗಳನ್ನಾದರೂ ಇಟ್ಟುಕೊಳ್ಳಬೇಕಾಗುತ್ತದೆ. ಪಂಚಿಂಗ್ ಬ್ಯಾಗ್ ಕಡಿಮೆ ಇದ್ದರೂ ಪರವಾಗಿಲ್ಲ ಮತ್ತು ಸೀಲಿಂಗ್ ಸಪೋರ್ಟ್ ಸರಿಯಾಗಿ ಬೇಕಾಗುತ್ತದೆ.
  • ಪರಿಕರಗಳು: ಪ್ರತಿರೋಧಕ ಬ್ಯಾಂಡ್‌ಗಳು, ಫಿಟ್‌ನೆಸ್ ಬಾಲ್, ರೋಯಿಂಗ್ ಯಂತ್ರಗಳು, ಆಬ್ಸ್ ಚಕ್ರಗಳು, ಮ್ಯಾಟ್ಸ್, ಬ್ಯಾಟಲ್ ರೋಪ್ ಹೀಗೆ ಜಿಮ್‌ಗಳಿಗೆ ಅಗತ್ಯವಾದ ಹಲವಾರು ಸಾಧನಗಳಿವೆ.
  • ಒಳಾಂಗಣಗಳು: ಒಳಾಂಗಣವನ್ನು ಪ್ರಕಾಶಮಾನವಾದ ದೀಪಗಳು, ಉತ್ತಮ ಚಿತ್ರಕಲೆ ಮತ್ತು ಸಾಕಷ್ಟು ಪ್ರೇರಕ ಪೋಸ್ಟರ್‌ಗಳಿಂದ ಚೆನ್ನಾಗಿ ತಯಾರಿಸಬೇಕು. ಉಪಕರಣಗಳು ಉರುಳಿದ ಸಂದರ್ಭದಲ್ಲಿ ರಕ್ಷಣಾತ್ಮಕ ಬಂಪರ್‌ಗಳಿರುವ ಗೋಡೆಗಳನ್ನು ಹೊಂದಿರಬೇಕು

ಮೆಂಬರ್ ಇನ್ಸೆಂಟಿವ್

ಸ್ಟ್ಯಾಂಡರ್ಡ್ ಜಿಮ್ ಪ್ಯಾಕೇಜುಗಳಿಂದ ಜಿಮ್ ಸದಸ್ಯರನ್ನು ಉಳಿಸಿಕೊಳ್ಳಲು ಸಾಕಾಗುವುದಿಲ್ಲ. ಫ್ಯಾಟ್ ಬರ್ನ್ ಕಾರ್ಯಕ್ರಮಗಳು, ಜುಂಬಾ, ಏರೋಬಿಕ್ಸ್ ಅಥವಾ ಸದಸ್ಯರಿಗೆ ಮೌಲ್ಯವನ್ನು ಸೇರಿಸುವ ವಿಶೇಷ ತರಬೇತಿಯಂತಹ ಹೆಚ್ಚುವರಿ ಬ್ಯುಸಿನೆಸ್ ಮತ್ತು ಚಟುವಟಿಕೆಗಳನ್ನು ಸಹ ನೀವು ನೀಡಬಹುದು.

ಭಾರತದಲ್ಲಿ ಮಾರ್ಕೆಟಿಂಗ್ ಜಿಮ್ ಬ್ಯುಸಿನೆಸ್

ನಿಮ್ಮ ಜಿಮ್ ಅನ್ನು ಮಾರ್ಕೆಟಿಂಗ್ ಮಾಡುವುದು ನೀವು ಆರಂಭದಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ಭವಿಷ್ಯದಲ್ಲಿ ಹೇಗೆ ಅಭಿವೃದ್ಧಿ ಮಾಡುತ್ತೀರಿ ಎಂಬುದನ್ನು ನಿರ್ಧರಿಸಬಹುದು. ನೀವು ಇದನ್ನು ಈ ಕೆಳಗಿನ ವಿಧಾನಗಳಲ್ಲಿ ಮಾಡಬಹುದು:

  • ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ತೆರೆಯುವ ಮೂಲಕ ಮತ್ತು ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಮೂಲಕ ನಿಮ್ಮ ಆನ್‌ಲೈನ್ ಗುರುತನ್ನು ರಚಿಸುವುದರೊಂದಿಗೆ ಪ್ರಾರಂಭಿಸಿ.
  • ನಿಮ್ಮ ವೆಬ್‌ಸೈಟ್ ನಿಮ್ಮ ಸೌಲಭ್ಯ ಮತ್ತು ಕೊಡುಗೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರಬೇಕು. ಎಸ್‌ಇಒ (ಸರ್ಚ್ ಎಂಜಿನ್ ಆಪ್ಟಿಮೈಸೇಶನ್) ಗಾಗಿ ಬ್ಲಾಗ್‌ಗಳನ್ನು ಬರೆಯಿರಿ ಮತ್ತು ಸಾಕಷ್ಟು ವಿಷಯವನ್ನು ರಚಿಸಿ. ಹೆಚ್ಚಿನ ಬಳಕೆದಾರರು ತಮಗೆ ಬೇಕಾದುದನ್ನು ಕಂಡುಹಿಡಿಯಲು ಗೂಗಲ್ ಅನ್ನು ಬಳಸುವುದರಿಂದ, ಬಲವಾದ ಎಸ್‌ಇಒ ಕಾರ್ಯತಂತ್ರವನ್ನು ಹೊಂದಿರುವುದು ದೊಡ್ಡ ಆದಾಯವ ಪಡೆಯಲು ಸಹಾಯ ಮಾಡುತ್ತದೆ 
  • ನಿಮ್ಮ ವ್ಯವಹಾರವನ್ನು ತ್ವರಿತವಾಗಿ ಉತ್ತೇಜಿಸಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಇನ್‌ಸ್ಟಾಗ್ರಾಮ್ ಹೊಂದುವುದು. ನಿಮ್ಮ ಸೌಲಭ್ಯ ಮತ್ತು ಕೆಲಸ ಮಾಡುವ ಜನರ ಚಿತ್ರಗಳನ್ನು ಪೋಸ್ಟ್ ಮಾಡಿ. ಪ್ರತಿದಿನ ಆಸಕ್ತಿದಾಯಕ ಕಥೆಗಳನ್ನು ಮಾಡಿ, ಜನರು ನಿಮ್ಮ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಬಹುದು ಮತ್ತು ನೋಡಬಹುದು.

ಜಿಮ್ ಫ್ರ್ಯಾಂಚೈಸ್

ಭಾರತದಲ್ಲಿ ಹೆಚ್ಚಿನ ಅನುಭವದ ಅಗತ್ಯವಿಲ್ಲದ ಜಿಮ್ ವ್ಯವಹಾರ ಯೋಜನೆಯನ್ನು ನೀವು ಹುಡುಕುತ್ತಿದ್ದರೆ, ಫ್ರ್ಯಾಂಚೈಸ್ ತೆಗೆದುಕೊಳ್ಳುವುದು ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಭಾರತದಲ್ಲಿ ಜಿಮ್ ಫ್ರ್ಯಾಂಚೈಸ್ ವೆಚ್ಚವು ದುಬಾರಿಯಾಗಬಹುದಾದರೂ, ಮೊದಲಿನಿಂದಲೂ ಎಲ್ಲವನ್ನೂ ಪ್ರಾರಂಭಿಸುವ ಜಂಜಾಟವನ್ನು ಇದು ಕಡಿಮೆ ಮಾಡುತ್ತದೆ. ಜಿಮ್ ಫ್ರ್ಯಾಂಚೈಸ್ ಅನ್ನು ತೆಗೆದುಕೊಳ್ಳುವುದು, ಉದ್ಯಮದ ಬಗ್ಗೆ ಬಹಳಷ್ಟು ಕಲಿಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಆ ಜ್ಞಾನದಿಂದ, ನೀವು ನಿಮ್ಮ ಸ್ವಂತ ಜಿಮ್ ಅನ್ನು ಪ್ರಾರಂಭಿಸಬಹುದು ಮತ್ತು ಸಮಸ್ಯೆಗಳನ್ನು ಪರಿಹರಿಸಬಹುದು.

ಜಿಮ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್

ನಿಮ್ಮ ಜಿಮ್ ವ್ಯವಹಾರವು ನೂರಾರು ಸದಸ್ಯರೊಂದಿಗೆ ದೊಡ್ಡದಾಗಲು ಯೋಜಿಸಿದರೆ, ನಿಮಗೆ ಖಂಡಿತವಾಗಿಯೂ ಜಿಮ್ ನಿರ್ವಹಣಾ ಸಾಫ್ಟ್‌ವೇರ್ ಅಗತ್ಯವಿರುತ್ತದೆ. ಸಾಫ್ಟ್‌ವೇರ್ ವೈಯಕ್ತಿಕ ಸದಸ್ಯರು, ಅವರ ದಿನಚರಿಗಳು, ಪ್ರಗತಿ, ವಿಶೇಷ ಅಗತ್ಯಗಳು, ಕಾಮೆಂಟ್‌ಗಳು ಮತ್ತು ಕ್ರಮಬದ್ಧತೆಯನ್ನು ಗಮನದಲ್ಲಿರಿಸಿಕೊಳ್ಳಬಹುದು. ಈ ಎಲ್ಲಾ ಮಾಹಿತಿಯು ನಿಮಗೆ ಅಗತ್ಯವಾದ ವ್ಯವಹಾರ-ಸಂಬಂಧಿತ ಮೆಟ್ರಿಕ್‌ಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ನೀವು ಸಣ್ಣದನ್ನು ಪ್ರಾರಂಭಿಸುತ್ತಿದ್ದರೆ ಸಾಫ್ಟ್‌ವೇರ್ ಸ್ವಲ್ಪ ದುಬಾರಿಯಾಗಿದೆ. ನಿಮ್ಮ ವ್ಯವಹಾರವು ಬೆಳೆಯಲು ಪ್ರಾರಂಭಿಸಿದಾಗ ನೀವು ಇದನ್ನು ಬಳಸಬಹುದು.

ಸಮಾಪ್ತಿ

ಉತ್ತಮ ಜಿಮ್ ಬ್ಯುಸಿನೆಸ್ ಅದನ್ನು ಸ್ಥಾಪಿಸಿದ ಸ್ಥಳ, ಆರಂಭಿಕ ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಉದ್ಯಮದಲ್ಲಿ ಅನುಭವಿ ಅಥವಾ ಫ್ರ್ಯಾಂಚೈಸ್ ತೆಗೆದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ವ್ಯವಹಾರ ಆಯ್ಕೆಯಾಗಿದೆ. ನೀವು ನಿರೀಕ್ಷಿಸಿರುವ ವ್ಯವಹಾರಕ್ಕೆ  ಅಡಿಪಾಯ ಹಾಕಲು ಈ ಮಾಹಿತಿಯು ಖಂಡಿತ ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ.

ಹೆಚ್ಚು ಕೇಳಲಾದ ಪ್ರಶ್ನೆಗಳು

ಪ್ರಶ್ನೆ: ಜಿಮ್‌ಗಳು ಸಾಮಾನ್ಯವಾಗಿ ಎಷ್ಟು ಸದಸ್ಯರನ್ನು ಹೊಂದಿರುತ್ತದೆ?

ಉತ್ತರ:

ದೊಡ್ಡ ಜಿಮ್‌ಗಳು ವಿಶೇಷವಾಗಿ ಅವರು ಫ್ರಾಂಚೈಸಿಗಳಾಗಿದ್ದರೆ ಸರಾಸರಿ 1000 ಸದಸ್ಯರನ್ನು ಹೊಂದಿರುತ್ತವೆ. 

ಪ್ರಶ್ನೆ: ಜಿಮ್ ಮಾಲೀಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳು ಯಾವುವು?

ಉತ್ತರ:

ಮುಖ್ಯ ಸಮಸ್ಯೆ ಆರಂಭದಲ್ಲಿ ಹೊಸ ಗ್ರಾಹಕರನ್ನು ಪಡೆಯುವುದು. ನಂತರ ಸಿಬ್ಬಂದಿ, ವೆಚ್ಚಗಳು ಮತ್ತು ಹಣಕಾಸುಗಳನ್ನು ನಿರ್ವಹಿಸುವುದು ಬರುತ್ತದೆ.

ಪ್ರಶ್ನೆ: ಜಿಮ್ ತರಬೇತುದಾರನ ಸಂಬಳ ಎಷ್ಟು?

ಉತ್ತರ:

ಫ್ರೆಶರ್‌ಗಳಿಗೆ ರೂ. 15,000 ರಿಂದ ರೂ. 20,000. ಅನುಭವಿ ತರಬೇತುದಾರರು ರೂ. 40,000 ರಿಂದ ರೂ. 1 ಲಕ್ಷದವರೆಗೆ ಪಡೆಯುತ್ತಾರೆ. ವಿಶೇಷ ಪ್ರಮಾಣೀಕರಣ ಹೊಂದಿರುವವರಿಗೆ ಸುಮಾರು ರೂ. 60,000 ಪ್ರಾರಂಭದಲ್ಲೇ ನೀಡಬೇಕಾಗಬಹುದು.

ಪ್ರಶ್ನೆ: ಭಾರತದಲ್ಲಿ ಜಿಮ್ ಪ್ರಾರಂಭಿಸಲು ಎಷ್ಟು ಹೂಡಿಕೆ ಬೇಕು?

ಉತ್ತರ:

ನೀವು ಅನೇಕ ಗ್ರಾಹಕರನ್ನು ನಿರೀಕ್ಷಿಸಬಹುದಾದ ಯೋಗ್ಯ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಜಿಮ್ ಪ್ರಾರಂಭಿಸಬೇಕೆಂದರೆ ನಿಮಗೆ ಕನಿಷ್ಠ 50 ಲಕ್ಷ ರೂ. ಬೇಕಾಗುತ್ತದೆ. ನೀವು ಸೀಮಿತ ಬಜೆಟ್‌ನಲ್ಲಿದ್ದರೆ ಮತ್ತು ಸಣ್ಣದನ್ನು ಪ್ರಾರಂಭಿಸಲು ಯೋಚಿಸಿದರೆ 10 ಲಕ್ಷ ರೂ.ವರೆಗೆ ಬೇಕಾಗುತ್ತದೆ.

ಪ್ರಶ್ನೆ: ಜಿಮ್ ಅನ್ನು ವ್ಯವಹಾರವಾಗಿ ಪ್ರಾರಂಭಿಸುವುದು ಒಳ್ಳೆಯದೇ?

ಉತ್ತರ:

ಜಿಮ್‌ಗೆ ಹೂಡಿಕೆಯ ಮೇಲೆ ಇದು ಆವಲಂಬಿತ. ಇದನ್ನು ಯಶಸ್ವಿಯಾಗಿ ನಡೆಸಲು, ನಿಮಗೆ ಉದ್ಯಮದಲ್ಲಿ ಸ್ವಲ್ಪ ಅನುಭವ ಬೇಕಾಗುತ್ತದೆ. ನೀವು ಎಷ್ಟು ಚೆನ್ನಾಗಿ ಹೊಂದಿಸಿದ್ದೀರಿ ಮತ್ತು ನಿಮ್ಮ ವ್ಯವಹಾರ ಮಾದರಿಯನ್ನು ಆಧರಿಸಿ, ಜಿಮ್‌ಗಳು ಉತ್ತಮ ಬ್ಯುಸಿನೆಸ್ ಆಗಿ ಬದಲಾಗಬಹುದು.

ಪ್ರಶ್ನೆ: ಭಾರತದಲ್ಲಿ ಜಿಮ್‌ಗಳು ಲಾಭದಾಯಕವಾಗಿದೆಯೇ?

ಉತ್ತರ:

ಲಾಭದಾಯಕತೆಯು ಜಿಮ್‌ನ ಸ್ಥಳ ಮತ್ತು ನೀಡುವ ಸೇವೆಗಳ ಮೇಲೆ ಅವಲಂಬಿಸಿರುತ್ತದೆ. ಇದಕ್ಕೆ ಬೇಕಾಗುವ ಅಂದಾಜು ಮೊತ್ತ ರೂ. 50 ಲಕ್ಷ, ನಿಮ್ಮ ವಾರ್ಷಿಕ ಲಾಭ ಸುಮಾರು 15 ಲಕ್ಷ ರೂ.

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.