written by Khatabook | July 9, 2021

ಇಪಿಎಫ್‌ಒ ಇ-ಸೇವಾ- ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ

×

Table of Content


ನೀವು ಸಂಬಳ ಪಡೆಯುವ ಉದ್ಯೋಗಿಯೇ ಮತ್ತೆ ನಿಮ್ಮ ಇಪಿಎಫ್ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದೀರಾ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಇಪಿಎಫ್‌ಒ‌ ಇ-ಸೇವಾ ಪರಿಚಯ ಇಲ್ಲಿದೆ. ಇಪಿಎಫ್ಒ ಇ-ಸೇವಾ ಪೋರ್ಟಲ್ ಒಂದು ವೇದಿಕೆಯಾಗಿದ್ದು, ಇದರ ಮೂಲಕ ನೀವು ನಿಮ್ಮ ಉದ್ಯೋಗಿ ಭವಿಷ್ಯ ನಿಧಿ ವಿವರಗಳನ್ನು ನಿರ್ವಹಿಸಬಹುದು.

ವ್ಯಾಖ್ಯಾನಗಳು:

ಇಪಿಎಫ್: ಉದ್ಯೋಗಿ ಭವಿಷ್ಯ ನಿಧಿ ಎಲ್ಲಾ ಉದ್ಯೋಗಿಗಳಿಗೆ ಲಭ್ಯವಿರುವ ನಿವೃತ್ತಿ ಪ್ರಯೋಜನಗಳ ಯೋಜನೆಗಳಲ್ಲಿ ಒಂದಾಗಿದೆ. ಉದ್ಯೋಗಿ ಭವಿಷ್ಯ ನಿಧಿ ಕೊಡುಗೆಯು ಉದ್ಯೋಗಿಯ ಮೂಲ ವೇತನದ ಶೇಕಡಾ ಹನ್ನೆರಡು ಆಗಿದೆ. 2020-2021ರ ಆರ್ಥಿಕ ವರ್ಷಕ್ಕೆ ಉದ್ಯೋಗಿ ಭವಿಷ್ಯ ನಿಧಿಗೆ ಅನ್ವಯವಾಗುವ ಬಡ್ಡಿದರ ಶೇ 8.5ರಷ್ಟಿದೆ.

ಇಪಿಎಫ್‌ಒ: ಇಪಿಎಫ್‌ಒ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯನ್ನು ಸೂಚಿಸುತ್ತದೆ. ಇದು ಸರ್ಕಾರ ಮಾಡಿದ ಕಾನೂನು ಸಂಸ್ಥೆಯಾಗಿದೆ. ಇದು 1951ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿದೆ. ನಿವೃತ್ತಿಗಾಗಿ ಉಳಿತಾಯವನ್ನು ಉಳಿಸಿಕೊಳ್ಳಲು ಇಪಿಎಫ್ ಜನರನ್ನು ಪ್ರೇರೇಪಿಸುತ್ತದೆ. 

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಿರ್ವಹಿಸುತ್ತದೆ, ಇದು ಮೂರು ಯೋಜನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅವು 

1. ನೌಕರರ ಭವಿಷ್ಯ ನಿಧಿ ಯೋಜನೆ 

2. ನೌಕರರ ಪಿಂಚಣಿ ಯೋಜನೆ 

3. ನೌಕರರ ಠೇವಣಿ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್.

ಇಪಿಎಫ್‌ಒ ಎನ್ನುವುದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಟ್ರಸ್ಟಿಗಳ ಮಂಡಳಿಗೆ (ಇಪಿಎಫ್) ಸಹಾಯ ಮಾಡಲು ಸಿದ್ಧವಾಗಿರುವ ಸಂಸ್ಥೆಯಾಗಿದೆ.

ಇಪಿಎಫ್ಒ‌ ಇ ಸೇವಾ

ಇ-ಸೇವಾ ಪೋರ್ಟಲ್ 

ಇ-ಸೇವಾ ಪೋರ್ಟಲ್ ಉದ್ಯೋಗಿ ಭವಿಷ್ಯ ನಿಧಿ ವಿನಂತಿಗಳಿಗೆ ಲಭ್ಯವಿರುವ ಆನ್‌ಲೈನ್ ಪೋರ್ಟಲ್ ಆಗಿದೆ. ಈ ಪೋರ್ಟಲ್ ಮೂಲಕ, ನೀವು ಇಪಿಎಫ್‌ಒ ಕಚೇರಿಗೆ ಭೇಟಿ ನೀಡದೆ ಆನ್‌‌ಲೈನ್ ಸೇವೆಗಳನ್ನು ಬಳಸಬಹುದು. ಇತರ ವೈಶಿಷ್ಟ್ಯಗಳೊಂದಿಗೆ, ನೀಡಿದ ಕೊಡುಗೆಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೀವು ಪಡೆಯಬಹುದು. 

ಸಂಸ್ಥೆಗಳು ನೋಂದಾಯಿಸಲು ಇತಿ ಮಿತಿ

20ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಭವಿಷ್ಯ ನಿಧಿ ಕಾಯ್ದೆಯ ಪ್ರಕಾರ ಇಪಿಎಫ್‌‌ಒದಲ್ಲಿ ನೋಂದಾಯಿಸಿಕೊಳ್ಳಬೇಕು.

ನೋಂದಣಿಗೆ ಹಂತಗಳು

  1. ಉದ್ಯೋಗದಾತರು ಇಪಿಎಫ್‌ಒ ಇ-ಸೇವಾ ಪೋರ್ಟಲ್‌ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಾಯಿಸಬೇಕು. 
  2. ಇಪಿಎಫ್‌ಒ ಇ-ಸೇವಾ ಪೋರ್ಟಲ್ ಆರಂಭಿಕ ಲಾಗಿನ್‌ಗಾಗಿ ಉದ್ಯೋಗದಾತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಿಸ್ಟಂ-ರಚಿಸಿದ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಕಳುಹಿಸುತ್ತದೆ. ಈ ತಾತ್ಕಾಲಿಕ ಬಳಕೆದಾರ ಹೆಸರು ಮತ್ತು ಪಾಸ್‌‌‌ವರ್ಡ್‌ನೊಂದಿಗೆ ಲಾಗಿನ್ ಮಾಡಿ ಮತ್ತು ನಿಮ್ಮ ಶಾಶ್ವತ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ರಚಿಸಿ. 
  3. ಮುಂದಿನ ಹಂತವೆಂದರೆ ಅಗತ್ಯವಿರುವ ಎಲ್ಲಾ ಕ್ಷೇತ್ರಗಳನ್ನು ನಮೂದಿಸುವುದು ಮತ್ತು ನಂತರ ಗುರುತು, ವಿಳಾಸದ ಪುರಾವೆ ಮತ್ತು ಇತರ ವಿವರಗಳಂತಹ ಎಲ್ಲಾ ದಾಖಲೆಗಳನ್ನು ಲಗತ್ತಿಸುವುದು.
  4. ಈಗ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಸಾಮಾನ್ಯವಾಗಿ, ಇಲಾಖೆಯು ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಒಂದು ವಾರ ತೆಗೆದುಕೊಳ್ಳುತ್ತದೆ. 
  5. ಒಮ್ಮೆ ನಿಮ್ಮ ಅರ್ಜಿಯನ್ನು ಸಂಸ್ಕರಿಸಿದ ನಂತರ ಮತ್ತು ಅನುಮೋದಿಸಿದ ನಂತರ, ನೀವು ನಿಮ್ಮ ರಿಟರ್ನ್ಸ್ ಅನ್ನು ಸಲ್ಲಿಸಲು ಪ್ರಾರಂಭಿಸಬಹುದು.

ಆನ್‌‌ಲೈನ್ ನೋಂದಣಿಯ ಪ್ರಯೋಜನಗಳು

  1. ಇಲ್ಲಿ ಕಾಗದ ಪಾತ್ರಗಳ ಅವಶ್ಯಕತೆಯಿಲ್ಲ. ದಾಖಲೆಗಳ ಭೌತಿಕ ಪರಿಶೀಲನೆಯ ಬದಲು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದರಿಂದ, ನೀವು ಸಮಯವನ್ನು ಉಳಿಸುತ್ತೀರಿ.
  2. ಸುಲಭ ಮತ್ತು ಸುಗಮ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯು ತ್ವರಿತ ಪಾವತಿಗಳಿಗೆ ಸಹಾಯ ಮಾಡುತ್ತದೆ. ಅಲ್ಲದೆ, ನೀವು ಮಾಡುವ ಯಾವುದೇ ಪಾವತಿಗಳನ್ನು SMS ಮೂಲಕ ದೃಢೀಕರಿಸಲಾಗುತ್ತದೆ.
  3. ಆನ್‌ಲೈನ್ ಡೇಟಾ ಪರಿಶೀಲನೆ ಸಾಧ್ಯವಿದೆ, ಇದು ಕೆಲವೊಮ್ಮೆ ಸಹಾಯಕವಾಗಬಹುದು. 

ಇಪಿಎಫ್‌ಒ ಇ ಸೇವಾ(E SEWA) ಸೌಲಭ್ಯದ ಬಳಕೆ

  • ನೋಂ‌ದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಉದ್ಯೋಗದಾತರು ತಮ್ಮ ಎಲೆಕ್ಟ್ರಾನಿಕ್ ರಿಟರ್ನ್ ಅನ್ನು ಅಪ್‌ಲೋಡ್ ಮಾಡಬಹು‌ದು.
  • ಉದ್ಯೋಗದಾತರ ಅಪ್‌ಲೋಡ್ ಮಾಡಿದ ರಿಟರ್ನ್ ಅನ್ನು ಡಿಜಿಟಲ್ ಸಹಿ ಮಾಡಿದ ಪ್ರತಿಯಾಗಿ ತೋರಿಸಲಾಗುತ್ತದೆ ಮತ್ತು ನೀವು ಅದನ್ನು PDF ಸ್ವರೂಪದಲ್ಲಿ ಉಳಿಸಬಹುದು. ರೆಕಾರ್ಡ್-ಕೀಪಿಂಗ್‌ಗಾಗಿ ನೀವು ಅದನ್ನು ಪ್ರಿಂಟ್ ಮಾಡಬಹುದು.
  • ಅನುಮೋದನೆ ಪಡೆದ ನಂತರ, ಅಪ್‌ಲೋಡ್ ಮಾಡಿದ ರಿಟರ್ನ್ ಆಧಾರದ ಮೇಲೆ ಚಲನ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
  • ಉದ್ಯೋಗದಾತರು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಚಲನ್‌‌ನ ಹಾರ್ಡ್ ಕಾಪಿಯನ್ನು ಮುದ್ರಿಸಿ ನಂತರ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸುವ ಆಯ್ಕೆಯೂ ಇದೆ. 
  • ಉಲ್ಲೇಖವಾಗಿ ಮತ್ತು ದಾಖಲೆಗಾಗಿ, ಉದ್ಯೋಗದಾತರು ಹಾರ್ಡ್ ಕಾಪಿ ಮತ್ತು ಚಲನ್‌ನ ಸಾಫ್ಟ್ ಕಾಪಿ ಎರಡನ್ನೂ ನಿರ್ವಹಿಸಬೇಕು.

ಇ-ರಿಟರ್ನ್ ಟೂಲ್ ಡೌನ್‌ಲೋಡ್ ಮಾಡುವ ಹಂತಗಳು ಇಲ್ಲಿವೆ:

  •       ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ.

      2. ಇ-ರಿಟರ್ನ್ ವಿಭಾಗಕ್ಕೆ ಹೋಗಿ. 

       3. ಅಗತ್ಯವಿರುವ ಘಟಕಗಳಾದ ವಿಂಡೋಸ್ ಇನ್ ಸ್ಟಾಲರ್ 3_5 ಅನ್ನು ಡೌನ್‌ಲೋಡ್ ಮಾಡಿ.

       4. ವಿವಿಧ ಆವೃತ್ತಿಗಳ ಎರಡು ಸಾಧನಗಳಿಗೆ ಡೌನ್‌ಲೋಡ್ ಲಿಂಕ್‌ಗಳನ್ನು ನೀವು ನೋಡಬಹುದು. ನೀವು ಅಗತ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು ಮತ್ತು ಅದನ್ನು ಡೌನ್‌ಲೋಡ್ ಮಾಡಬಹುದು. 

       5. ‘ಹೆಲ್ಪ್ ಫೈಲ್ಸ್ ಆಂಡ್ ಇನ್ಸ್ಟ್ರಕ್ಷನ್ಸ್' ಎಂಬ ಶೀರ್ಷಿಕೆಯಡಿಯಲ್ಲಿ, ಸ್ಥಾಪನೆ ಮತ್ತು ಇತರ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳಿಗಾಗಿ ನಿಮ್ಮ ಬಳಕೆದಾರರ ಕೈಪಿಡಿ ಸೂಚನೆಗಳ ಮೂಲಕ ನೀವು ಪಡೆಯಬಹುದು. 

ಇ-ಚಲನ್ ರಚಿಸಲು ಹಂತಗಳು

  1. ಇ ಸೇವಾ(E-SEWA) ಪೋರ್ಟಲ್ ಗೆ ಲಾಗಿನ್ ಆಗಿ

  1. ಇಸಿಆರ್(ECR) ಅಪ್‌ಲೋಡ್ ಮತ್ತು ಅಪ್‌ಲೋಡ್ ಇಸಿಆರ್ ಜನರೇಟೆಡ್ ಆಯ್ಕೆಯನ್ನು ನೀವು ಆಯ್ಕೆ ಮಾಡಬೇಕು. ಇಸಿಆರ್ ಅಪ್‌ಲೋಡ್ ಮಾಡುತ್ತಿರುವ ತಿಂಗಳು ಮತ್ತು ವರ್ಷವನ್ನು ನೀವು ಕ್ರಾಸ್ ಚೆಕ್ ಮಾಡಬೇಕು. 
  2. ಟೆಕ್ಸ್ಟ್ ಫೈಲ್ ಅನ್ನು ಸರಿಯಾಗಿ ಅಪ್‌ಲೋಡ್ ಮಾಡಿದ ನಂತರ, ಸ್ಕ್ರೀನ್ ಮೇಲೆ ಸಾರಾಂಶ ಪುಟವು ಪಾಪ್ ಅಪ್ ಆಗುತ್ತದೆ. 'ಒಟ್ಟು ಇಪಿಎಫ್ ತಪಾಸಣಾ ಶುಲ್ಕಗಳು, ಒಟ್ಟು ಇಡಿಎಲ್ಐ(EDLI) ಕೊಡುಗೆ ಮತ್ತು ತಪಾಸಣೆಗಾಗಿ ಪ್ರತ್ಯೇಕ ಶುಲ್ಕಗಳನ್ನು ನಮೂದಿಸಿ. ಹನ್ನೆರಡು ಪ್ರತಿಶತ ಕೊಡುಗೆ ದರವನ್ನು ಪೂರ್ವನಿಯೋಜಿತವಾಗಿ ಅನ್ವಯಿಸಲಾಗುತ್ತದೆ. ಆದರೆ ಅದು ನಿಮ್ಮ ಸಂಸ್ಥೆಗೆ ಅನ್ವಯಿಸಿದರೆ ನೀವು ಅದನ್ನು ಶೇಕಡಾ ಹತ್ತಕ್ಕೆ ಬದಲಾಯಿಸಬಹುದು. ಅಂತಿಮವಾಗಿ, ನಿಮ್ಮ ಇಸಿಆರ್ ಸಲ್ಲಿಸಿ.
  3. ಸೈಟ್ ಪರದೆಯ ಮೇಲೆ ಡಿಜಿಟಲ್ ಸಹಿ ಮಾಡಿದ ಫೈಲ್ ಅನ್ನು ಪ್ರದರ್ಶಿಸುತ್ತದೆ. ನೀವು SMS ಅಲರ್ಟ್‌ಗಾಗಿ ಕಾಯಬೇಕು, ಮತ್ತು ಅದರ ನಂತರ, ಇಸಿಆರ್ ಫೈಲ್ ಅಪ್‌ಲೋಡ್ ಮಾಡುವುದರೊಂದಿಗೆ ನೀವು ಪಿಡಿಎಫ್‌‌‌‌ನಲ್ಲಿರುವ ಡೇಟಾವನ್ನು ಕ್ರಾಸ್-ಚೆಕ್ ಮಾಡಬೇಕು.
  4. ಮುಂದಿನ ಹೆಜ್ಜೆಯಲ್ಲಿ, ನೀವು ಪಿಡಿಎಫ್ ಅನ್ನು ಅನುಮೋದಿಸಬೇಕು ಮತ್ತು ಇಪಿಎಫ್ ಚಲನ್ ಅನ್ನು ಉತ್ಪಾದಿಸಲು ಅಪ್ರೋವ್ ಬಟನ್ ಕ್ಲಿಕ್ ಮಾಡಬೇಕು. 
  5. ಇಸಿಆರ್ ಅನುಮೋದನೆ ಪಡೆದ ನಂತರ ವೆಬ್‌ಸೈಟ್ ತಾತ್ಕಾಲಿಕ ರಿಟರ್ನ್ ರೆಫರೆನ್ಸ್ ಸಂಖ್ಯೆಯನ್ನು (TRRN) ಉತ್ಪಾದಿಸುತ್ತದೆ. ಇದು ಚಲನ್ ರಸೀದಿ ಫೈಲ್ ಮತ್ತು ಸ್ವೀಕೃತಿಯ ಸ್ಲಿಪ್ ಅನ್ನು ಪರದೆಯ ಮೇಲೆ ಪ್ರದರ್ಶಿಸುತ್ತದೆ.
  6. ‘ಡೌನ್‌ಲೋಡ್’ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಚಲನ್ ರಶೀದಿಯನ್ನು ಡೌನ್‌ಲೋಡ್ ಮಾಡಬಹುದು.
  7. ಡೌನ್‌ಲೋಡ್ ಮಾಡಿದ ಚಲನ್ ಅನ್ನು (TRRN) ಸಂಖ್ಯೆಯೊಂದಿಗೆ ಮುದ್ರಿಸಿ.
  8. ‘ಫಾರ್ ಎಷ್ಟಬಲಿಷ್ ಮೆಂಟ್ ಯೂಸ್ ಓನ್ಲಿ’ ಶೀರ್ಷಿಕೆಯಡಿಯಲ್ಲಿ ವಿವರಗಳನ್ನು ಹಸ್ತಚಾಲಿತವಾಗಿ ನವೀಕರಿಸಿ.
  9. SBIನ ಆನ್‌ಲೈನ್ ಪೋರ್ಟಲ್ ಮೂಲಕ ನೀವು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾಗೆ ಆನ್‌ಲೈನ್ ಪಾವತಿ ಮಾಡಬಹುದು. ನೀವು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಮೂಲಕವೂ ಪಾವತಿಸಬಹುದು, ಅದನ್ನು ನೀವು ನಿಗದಿತ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಬೇಕು.
  10. ಚೆಕ್ ಸಾಕಾರಗೊಂಡ ನಂತರ, ಇಪಿಎಫ್‌ಒ ನಿಮಗೆ SMS ಅಲರ್ಟ್ ಅನ್ನು ಕಳುಹಿಸುತ್ತದೆ. ಒಂದು ತಿಂಗಳ ಈ ಇಸಿಆರ್ ಫೈಲಿಂಗ್ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ.

ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಉತ್ಪಾದಿಸಲು ಈ ಕೆಳಗಿನವುಗಳು ಪೂರ್ವನಿಬಂಧನೆಗಳಾಗಿವೆ:

  • ಉದ್ಯೋಗದಾತರು ಈಗಾಗಲೇ ಉದ್ಯೋಗದಾತ ಇ-ಸೇವಾ ಪೋರ್ಟಲ್‌‌‌‌ನಲ್ಲಿ ಸಂಸ್ಥೆಯನ್ನು ನೋಂದಾಯಿಸಿರಬೇಕು.
  • ಅವರು ಇಸಿಆರ್ ಅನ್ನು ಡೌನ್ ಲೋಡ್ ಮಾಡಿದ್ದಾರೆ.
  • ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಪಷ್ಟ ಕಲ್ಪನೆಯನ್ನು ಪಡೆಯಲು ವೆಬ್‌‌‌‌ಸೈಟ್‌‌‌‌ನಲ್ಲಿ ನೀಡಲಾದ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು(FAQs) ಬಗ್ಗೆ ಉದ್ಯೋಗದಾತರಿಗೆ ತಿಳಿದಿರಬೇಕು.

ಆಂಡ್ರಾಯ್ಡ್ ಅಪ್ಲಿಕೇಶನ್ ಗಳಿಗಾಗಿ UAN ಮೆಂಬರ್ ಇ ಸೇವಾ

  • ಯೂನಿವರ್ಸಲ್ ಅಕೌಂಟ್ ನಂಬರ್ (UAN), ಹನ್ನೆರಡು ಅಂಕಿಗಳ ಸಂಖ್ಯೆ, ಭಾರತ ಸರ್ಕಾರದ ಅಡಿಯಲ್ಲಿ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದಿಂದ ನೀಡಲಾಗುತ್ತದೆ. ಇದನ್ನು ಇಪಿಎಫ್ ಒದ ಎಲ್ಲಾ ಸದಸ್ಯರಿಗೆ ಒದಗಿಸಲಾಗುತ್ತದೆ.  ಹೀಗಾಗಿ, ಅವರು ತಮ್ಮ ಪಿಎಫ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು.
  • ಪ್ರತಿಯೊಬ್ಬ ವ್ಯಕ್ತಿಯ ಫಲಾನುಭವಿಗೆ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಎಂಬ ಯೋಜನೆಯಿಂದ UAN ಅನ್ನು ನಿಗದಿಪಡಿಸಲಾಗಿದೆ. ವ್ಯಕ್ತಿಯು ಸಂಬಳಪಡೆಯುವ ಉದ್ಯೋಗಿಯಾಗಿದ್ದರೆ ಮತ್ತು ಕಡ್ಡಾಯ ಕೊಡುಗೆ ಯನ್ನು ನೀಡಬೇಕಾದರೆ ನೀವು ಇಪಿಎಫ್ ನ ಸದಸ್ಯರಾಗಬಹುದು. 
  • ಯುಎಎನ್ ಲಾಗಿನ್ ಪೋರ್ಟಲ್ ಒಂದೇ ವೇದಿಕೆಯಾಗಿದ್ದು, ಇದರ ಮೂಲಕ ಉದ್ಯೋಗಿಯು ತನ್ನ ಎಲ್ಲಾ ಪಿಎಫ್ ಖಾತೆಗಳನ್ನು ಸಂಪರ್ಕಿಸಬಹುದು ಮತ್ತು ಪ್ರವೇಶಿಸಬಹುದು. KYC ವಿವರಗಳು, UAN ಕಾರ್ಡ್ ಮತ್ತು ಸೇವಾ ದಾಖಲೆಗಳಂತಹ ಅನೇಕ ವಿವರಗಳು ಈ ಪೋರ್ಟಲ್ ನಲ್ಲಿ ಇಪಿಎಫ್ ಸದಸ್ಯರಿಗೆ ಲಭ್ಯವಿದೆ. ಇಪಿಎಫ್ ಇ-ಸೇವಾ ಸದಸ್ಯರಿಗೆ, ಭವಿಷ್ಯ ನಿಧಿಯನ್ನು ವರ್ಗಾಯಿಸುವ ಮತ್ತು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಹೆಚ್ಚು ಸುಲಭ ಮತ್ತು ಸರಳವಾಗಿದೆ.

ಉದ್ಯೋಗಿಗಾಗಿ UAN ಮೆಂಬರ್ ಪೋರ್ಟಲ್

  • ಮೊದಲನೆಯದಾಗಿ ಸಕ್ರಿಯಗೊಳಿಸಲಾದ UAN ಅನ್ನು ಹೊಂದುವುದು. UAN ಸಕ್ರಿಯಗೊಳಿಸಲು, ನೀವು ಇಪಿಎಫ್ ಸದಸ್ಯ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ನಂತರ 'ಆಕ್ಟಿವೇಟ್ ಯುಎಎನ್' ಆಯ್ಕೆಗೆ ಹೋಗಬೇಕು.  ನಿಮ್ಮ ಯುಎಎನ್, ಆಧಾರ್, ಪ್ಯಾನ್, ಮೆಂಬರ್ ಐಡಿ, ಮೊಬೈಲ್ ಸಂಖ್ಯೆ, ಹೆಸರು, ಇಮೇಲ್ ಮತ್ತು ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಮತ್ತು ಮಾಹಿತಿಯನ್ನು ನೀಡಿ. 
  • ಮುಂದಿನದು ನೋಂದಾಯಿತ ಮೊಬೈಲ್ ಸಂಖ್ಯೆಯ ಪಿನ್ ಸ್ವೀಕರಿಸಲು 'ಗೆಟ್ ಅಥೋರೈಸೇಷನ್ ಪಿನ್' ಮೇಲೆ ಕ್ಲಿಕ್ ಮಾಡುವುದು. ಪರಿಶೀಲಿಸಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಪಿನ್ ಅನ್ನು ನಮೂದಿಸಿ.
  • ಅಂತಿಮವಾಗಿ, ಯುಎಎನ್ ಪೋರ್ಟಲ್‌‌‌‌ಗಾಗಿ ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌‌‌‌ವರ್ಡ್ ರಚಿಸಿ.

ಉದ್ಯೋಗಿಗಾಗಿ UAN ಸದಸ್ಯ ಪೋರ್ಟಲ್‌‌‌‌ಗೆ ಲಾಗಿನ್ ಮಾಡುವ ಹಂತಗಳು ಈ ಕೆಳಗಿನಂತಿವೆ.

  1. ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ.

  1. 'ಅವರ್ ಸರ್ವಿಸಸ್' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ 'ಫಾರ್ ಎಂಪ್ಲ್ಯೊಯೀಸ್' ಆಯ್ಕೆ ಮಾಡಿ

  1. ನಂತರ 'ಮೆಂಬರ್ ಯುಎಎನ್ / ಆನ್‌‌‌‌ಲೈನ್ ಸರ್ವಿಸಸ್' ಗೆ ಹೋಗಿ.

  1. ಮರುನಿರ್ದೇಶಿತ ಪುಟದಲ್ಲಿ ಯುಎಎನ್, ಪಿಎಫ್ ಮೆಂಬರ್ ಐಡಿ, ನೋಂದಾಯಿತ ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ.
  2. ಕ್ಯಾಪ್ಚಾವನ್ನು ಭರ್ತಿ ಮಾಡಿ
  3. 'ದೃಢೀಕರಣ ಪಿನ್ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ.
  4. 'ಐ ಅಗ್ರೀ' ಕ್ಲಿಕ್ ಮಾಡಿ ಮತ್ತು ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ OTPಯನ್ನು ನಮೂದಿಸಿ.
  5. ಈಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಪಾಸ್‌‌‌‌ವರ್ಡ್ ಅನ್ನು ನಮೂದಿಸುವ ಮೂಲಕ, ನೀವು ಪೋರ್ಟಲ್ ಅನ್ನು ಪ್ರವೇಶಿಸಬಹುದು.

ಉದ್ಯೋಗದಾತರಿಗೆ UAN ಸದಸ್ಯ ಪೋರ್ಟಲ್

ಉದ್ಯೋಗದಾತರಿಗೆ ಇಪಿಎಫ್‌‌‌‌ಒ ಪೋರ್ಟಲ್‌‌‌‌ಗೆ ಲಾಗಿನ್ ಮಾಡುವ ಕ್ರಮಗಳು ಬಹುತೇಕ ಉದ್ಯೋಗಿಗಳಂತೆಯೇ ಇವೆ. ಉದ್ಯೋಗದಾತರಿಗೆ ಯುಎಎನ್ ಸದಸ್ಯ ಪೋರ್ಟಲ್ ಗೆ ಲಾಗಿನ್ ಮಾಡುವ ಹಂತಗಳು ಈ ಕೆಳಗಿನಂತಿವೆ:

  1. ಮೊದಲನೆಯದಾಗಿ, ಉದ್ಯೋಗದಾತರು ಇಪಿಎಫ್ ಒ ವೆಬ್ ಸೈಟ್ ಗೆ ಭೇಟಿ ನೀಡಬೇಕು.

  1. ಇಪಿಎಫ್ ಒ ಉದ್ಯೋಗದಾತ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಪುಟದ ಬಲಬದಿಯು ಸೈನ್-ಇನ್ ಗೆ ಆಯ್ಕೆಯನ್ನು ತೋರಿಸುತ್ತದೆ.

  1. ನಂತರ ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್ ಬಳಸಿ 'ಸೈನ್ ಇನ್' ಮಾಡಿ.
  2. ಮುಂದೆ, ಇದನ್ನು ಉದ್ಯೋಗದಾತರ ಇಪಿಎಫ್ ಒ ಪೋರ್ಟಲ್ ನ ಮತ್ತೊಂದು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗದಾತರು ಕೆವೈಸಿ ವಿವರಗಳನ್ನು ನಮೂದಿಸಬೇಕು.

‌‌‌‌UAN ಸದಸ್ಯ ಪೋರ್ಟಲ್ ನಲ್ಲಿ ನೋಂದಾಯಿಸುವುದು ಹೇಗೆ?

ಯುಎಎನ್ ಲಾಗಿನ್ ಪೋರ್ಟಲ್‌‌‌‌ಗೆ ಲಾಗಿನ್ ಆಗಲು ನಿಮ್ಮ ಯುಎಎನ್ ಅನ್ನು ಸಕ್ರಿಯಗೊಳಿಸಲು ಉಲ್ಲೇಖಿಸಲಾದ ಹಂತಗಳು ಈ ಕೆಳಗಿನಂತಿವೆ:

  • ಮೊದಲನೆಯದಾಗಿ, ನೀವು ಇಪಿಎಫ್ ಸದಸ್ಯ ಪೋರ್ಟಲ್‌‌‌‌ಗೆ ಭೇಟಿ ನೀಡಬೇಕು.
  • 'ಮೈನ್ ಲಿಂಕ್ಸ್' ವಿಭಾಗದಲ್ಲಿ, 'ಆಕ್ಟಿವೇಟ್ UAN' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ ಅಗತ್ಯವಿರುವ ಎಲ್ಲಾ ವಿವರಗಳನ್ನು ಸಲ್ಲಿಸಿ ಮತ್ತು 'ಗೆಟ್ ಅಥೋರೈಸೇಷನ್ ಪಿನ್ ' ಮೇಲೆ ಕ್ಲಿಕ್ ಮಾಡಿ.
  • ಇಪಿಎಫ್‌‌‌‌ಒ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಿನ್ ಕಳುಹಿಸುತ್ತದೆ.
  • ನಿಮ್ಮ ಯುಎಎನ್ ಖಾತೆಯ ಕ್ರಿಯಾತ್ಮಕತೆಗಾಗಿ ನೀವು ನಿಮ್ಮ ಪಿನ್ ಅನ್ನು ನಮೂದಿಸಬೇಕು.
  • ಈಗ ಇಪಿಎಫ್‌‌‌‌ಒ ಪಾಸ್‌‌‌‌ವರ್ಡ್ ರಚನೆಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಕಳುಹಿಸುತ್ತದೆ.
  • ಪ್ರತಿ ಲಾಗಿನ್ ಸೆಷನ್ ನಂತರ, ಪಾಸ್‌‌‌‌ವರ್ಡ್ ಅನ್ನು ಬದಲಾಯಿಸಲು ಶಿಫಾರಸು ಮಾಡಲಾಗುತ್ತದೆ.

ನಿಮ್ಮ ಯುಎಎನ್ ಸ್ಥಿತಿಯನ್ನು ತಿಳಿಯಿರಿ

ಅಸ್ತಿತ್ವದಲ್ಲಿರುವ ಇಪಿಎಫ್ ಖಾತೆಯನ್ನು ಹೊಂದಿರುವ ಉದ್ಯೋಗಿಯ ನಿಮ್ಮ ಯುಎಎನ್ ಸ್ಥಿತಿಯನ್ನು ತಿಳಿಯಲು ಉಲ್ಲೇಖಿಸಲಾದ ಹಂತಗಳು ಈ ಕೆಳಗಿನಂತಿವೆ:

  • ವೆಬ್‌‌‌‌ಸೈಟ್ www.epfoesewa.com ಭೇಟಿ ನೀಡಿ
  • 'ನೋ ಯುವರ್ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ
  • ನಂತರ ಸದಸ್ಯ ಐಡಿ, ಪಿಎಫ್ ಸಂಖ್ಯೆ, ಪ್ಯಾನ್, ಆಧಾರ್ ಮುಂತಾದ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ.
  • ಸದಸ್ಯ ಐಡಿ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಸ್ತುತ ವಾಸಿಸುತ್ತಿರುವ ರಾಜ್ಯ ಮತ್ತು ಪ್ರಸ್ತುತ ಕಚೇರಿ ಮತ್ತು ನಿಮ್ಮ ಮೆಂಬರ್ ಐಡಿಯಂತಹ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ
  • ಹೆಸರು, ಸಂಪರ್ಕ ಸಂಖ್ಯೆ, ಜನ್ಮ ದಿನಾಂಕದಂತಹ ಇತರ ಅಗತ್ಯ ವಿವರಗಳನ್ನು ನೀವು ಸಲ್ಲಿಸಬೇಕು, ಮತ್ತು ನಂತರ ನೀವು ಕ್ಯಾಪ್ಚಾವನ್ನು ನಮೂದಿಸಬೇಕು.
  • 'ಗೆಟ್ ಅಥೋರೈಸೇಷನ್ ಪಿನ್' ಮೇಲೆ ಒತ್ತಿ.
  • ನೋಂದಾಯಿತ ಮೊಬೈಲ್ ಸಂಖ್ಯೆಗೆ OTPಯನ್ನು ಕಳುಹಿಸಲಾಗುವುದು. ನಂತರ ನೀವು OTPಯನ್ನು ನಮೂದಿಸಬೇಕು ಮತ್ತು 'ವ್ಯಾಲಿಡೇಟ್ OTP' ಮೇಲೆ ಒತ್ತಿ ಮತ್ತು UAN ಪಡೆಯಿರಿ
  • ಇಪಿಎಫ್‌‌‌‌ಒ ನಿಮ್ಮ ಯುಎಎನ್ ಸಂಖ್ಯೆ ಮತ್ತು ಸ್ಥಿತಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸುತ್ತದೆ.

ಯುಎಎನ್ ಸದಸ್ಯ ಪೋರ್ಟಲ್‌‌‌‌ನಲ್ಲಿ ಪಾಸ್‌‌‌‌ವರ್ಡ್‌‌‌‌‌‌‌‌‌‌‌‌‌‌‌‌ಗಳನ್ನು ಮರುಹೊಂದಿಸುವುದು ಹೇಗೆ?

ಯುಎಎನ್ ಸದಸ್ಯ ಪೋರ್ಟಲ್‌‌‌‌ನಲ್ಲಿ ಪಾಸ್‌‌‌‌ವರ್ಡ್ ಮರುಹೊಂದಿಸಲು ಉಲ್ಲೇಖಿಸಲಾದ ಹಂತಗಳು ಈ ಕೆಳಗಿನಂತಿವೆ:

  • ಲಾಗಿನ್ ಪುಟವನ್ನು ತೆರೆಯಿರಿ ಮತ್ತು ನಂತರ 'ಫೊರ್ಗೋಟ್ ಪಾಸ್‌‌‌‌ವರ್ಡ್ ' ಎಂದು ಒತ್ತಿ.
  • ನಿಮ್ಮ ಯುಎಎನ್ ಸಂಖ್ಯೆಯನ್ನು ಸಲ್ಲಿಸಿ ಮತ್ತು ಕ್ಯಾಪ್ಚಾ ನಮೂದಿಸಿ
  • ಸೆಂಡ್ OTP ಮೇಲೆ ಕ್ಲಿಕ್ ಮಾಡಿ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ
  • OTP ನಮೂದಿಸಿ ಮತ್ತು ಸಬ್‌‌‌‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಈಗ ನೀವು ನಿಮ್ಮ ಪಾಸ್‌‌‌‌ವರ್ಡ್ ಅನ್ನು ಮರುಹೊಂದಿಸಬಹುದು.

ಉದ್ಯೋಗದಾತರಿಗೆ ಇ-ಸೇವಾ ಪೋರ್ಟಲ್ ಬಳಸುವ ಅನುಕೂಲಗಳು

ಇಪಿಎಫ್ ಇ- ಸೇವಾ ಪ್ರಯೋಜನಗಳು ಹೀಗೆವೆ

  • ಉದ್ಯೋಗದಾತರು ಯಾವುದೇ ಕಾಗದದ ರಿಟರ್ನ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿಲ್ಲ.
  • ನಮೂನೆಗಳು 5/10/12ಎ,3ಎ, ಮತ್ತು 6ಎ ಅಡಿಯಲ್ಲಿ ಇತರ ರಿಟರ್ನ್ಸ್ ಅನ್ನು ಇನ್ನು ಮುಂದೆ ಸಲ್ಲಿಸುವ ಅಗತ್ಯವಿಲ್ಲ.
  • ಪಾವತಿ ಮಾಡಿದ ನಂತರ ಇಪಿಎಫ್‌‌‌‌ಒ SMS ಮೂಲಕ ತೊಂದರೆರಹಿತ ದೃಢೀಕರಣವನ್ನು ಕಳುಹಿಸುತ್ತದೆ.
  • ಸದಸ್ಯರ ಖಾತೆಯಲ್ಲಿ ಪ್ರತಿ ತಿಂಗಳು ಇಪಿಎಫ್ ಕೊಡುಗೆಯನ್ನು ಕ್ರೆಡಿಟ್ ಮಾಡಲಾಗುತ್ತದೆ.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಉದ್ಯೋಗದಾತರು ಇಪಿಎಫ್‌ಒ ಇ-ಸೇವಾನಲ್ಲಿ ನೋಂದಾಯಿಸಿಕೊಳ್ಳದಿದ್ದರೆ ಏನಾಗುತ್ತದೆ?

ಉದ್ಯೋಗದಾತನು ತನ್ನ ಸಂಸ್ಥೆಯನ್ನು ನೋಂದಾಯಿಸಿದರೆ ಮಾತ್ರ ಇ ಚಲನ್‌‌‌‌ನ ಆನ್‌‌‌‌ಲೈನ್ ರಚನೆ ಸಾಧ್ಯವಾಗುತ್ತದೆ. ಬಳಕೆದಾರ ಹೆಸರು ಮತ್ತು ಪಾಸ್‌‌‌‌ವರ್ಡ್ ರಚಿಸುವ ಮೂಲಕ, ನೀವು ಉದ್ಯೋಗದಾತ ಇಪಿಎಫ್‌‌‌‌ಒ ಪೋರ್ಟಲ್ ನೋಡಬಹುದು.

ಆನ್‌ಲೈನ್ ನಿರ್ಮಿತ ಚಲನ್‌ನ ಸಿಂಧುತ್ವ ವೇನು?

ಆನ್‌ಲೈನ್‌ನಲ್ಲಿ ನಿರ್ಮಿತ ಚಲನ್‌ನ ಸಿಂಧುತ್ವವು ಹನ್ನೆರಡು ದಿನಗಳು.

ಉದ್ಯೋಗದಾತರು ಅನೇಕ ಸಂಸ್ಥೆಗಳಿಗೆ ಲಾಗಿನ್ ಮಾಡಲು ಅದೇ ವಿವರಗಳನ್ನು ಬಳಸಬಹುದೇ?

ಇಲ್ಲ. ಉದ್ಯೋಗದಾತರು ಅನೇಕ ಸಂಸ್ಥೆಗಳಿಗೆ ಲಾಗಿನ್ ಮಾಡಲು ಅದೇ ವಿವರಗಳನ್ನು ಬಳಸುವಂತಿಲ್ಲ. ನೀವು ವಿವಿಧ ಸಂಸ್ಥೆಗಳಿಗೆ ಪ್ರತ್ಯೇಕ ಲಾಗಿನ್ ವಿವರಗಳನ್ನು ಹೊಂದಿರಬೇಕು. 

ಸದಸ್ಯನು ತನ್ನ ಖಾತೆಯನ್ನು ವೀಕ್ಷಿಸಲು ಇ-ಸೇವಾ ಪೋರ್ಟಲ್‌ನಲ್ಲಿ ನೋಂದಾಯಿಸಬಹುದೇ?

ಇಲ್ಲ, ಮಾನ್ಯ ಇಪಿಎಫ್ ಸಂಖ್ಯೆಯನ್ನು ಹೊಂದಿರುವ ಸಂಸ್ಥೆಯ ನೌಕರರು ಮಾತ್ರ ಖಾತೆಯನ್ನು ವೀಕ್ಷಿಸಬಹುದು.

ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ಒಳಗೊಂಡಂತೆ ಏನು ಪ್ರಯೋಜನ?

ಪ್ರೊಫೈಲ್‌ನ ನೋಂದಣಿ ಮತ್ತು ಸಂಪಾದನೆಯನ್ನು ಹೊರತುಪಡಿಸಿ ಚಟುವಟಿಕೆಗಳಿಗಾಗಿ ಇಪಿಎಫ್‌ಒ ಸೈಟ್ ಮೊಬೈಲ್ ಸಂಖ್ಯೆಗೆ SMS ಮತ್ತು ಒನ್‌-ಟೈಮ್ ಪಾಸ್‌ವರ್ಡ್‌ಗಳನ್ನು ಕಳುಹಿಸುತ್ತದೆ.

ಎಸ್ಟಬ್ಳಿಷ್ಮೆನ್ಟ್ ಪ್ರೊಫೈಲ್ ವಿವರಗಳನ್ನು ಹೇಗೆ ಬದಲಾಯಿಸಬಹುದು?

ಮೊದಲಿಗೆ, ನೀವು ಉದ್ಯೋಗದಾತ ಪೋರ್ಟಲ್‌ಗೆ ಲಾಗ್‌‌‌‌ಇನ್ ಆಗಬೇಕು. ಶೀರ್ಷಿಕೆ ಪ್ರೊಫೈಲ್ ಅಡಿಯಲ್ಲಿ, ಎಡಿಟ್ ಪ್ರೊಫೈಲ್ ಎಂದು ಲೇಬಲ್ ಮಾಡಿದ ಲಿಂಕ್ ಅನ್ನು ನೀವು ಕ್ಲಿಕ್ ಮಾಡಬೇಕು. ನೀವು ಅಗತ್ಯವಿರುವ ಬದಲಾವಣೆಗಳನ್ನು ಮಾಡಬಹುದು ಮತ್ತು ನಂತರ ಗೆಟ್ PIN ಲಿಂಕ್ ಅನ್ನು ಕ್ಲಿಕ್ ಮಾಡಿ.

ನಂತರ ನಿಮ್ಮ ನೋಂದಾಯಿತ ಪ್ರಾಥಮಿಕ ಮೊಬೈಲ್ ಸಂಖ್ಯೆಯಲ್ಲಿ ನೀವು ವಿವರಗಳನ್ನು ಸ್ವೀಕರಿಸುತ್ತೀರಿ. ನೀಡಿರುವ ಪಿನ್ ಅನ್ನು ನಮೂದಿಸಿ ಮತ್ತು ನಿಮ್ಮ ಪ್ರೊಫೈಲ್ ಅನ್ನು ನವೀಕರಿಸಿ.

ಅಂತಿಮವಾಗಿ, ನಿಮ್ಮ ಪ್ರೊಫೈಲ್ ಅನ್ನು ನವೀಕರಿಸಲಾಗಿದೆ ಎಂದು ತಿಳಿಸುವ ನಿಮ್ಮ ನೋಂದಾಯಿತ ಪ್ರಾಥಮಿಕ ಮೊಬೈಲ್ ಸಂಖ್ಯೆಯಲ್ಲಿ ನೀವು ದೃಢೀಕರಣ SMS ಅನ್ನು ಸ್ವೀಕರಿಸುತ್ತೀರಿ.

ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.
ಹಕ್ಕು ನಿರಾಕರಣೆ :
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿ, ಉತ್ಪನ್ನ ಮತ್ತು ಸೇವೆಗಳನ್ನು ""ಇರುವಂತೆ"" ಮತ್ತು ""ಲಭ್ಯವಿರುವಂತೆ"" ಆಧಾರದ ಮೇಲೆ ಯಾವುದೇ ಖಾತರಿ ಅಥವಾ ಪ್ರಾತಿನಿಧ್ಯವಿಲ್ಲದೆ, ಎಕ್ಸ್‌ಪ್ರೆಸ್ ಅಥವಾ ಸೂಚ್ಯವಾಗಿ ಒದಗಿಸಲಾಗಿದೆ. Khatabook ಬ್ಲಾಗ್‌ಗಳು ಸಂಪೂರ್ಣವಾಗಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಶೈಕ್ಷಣಿಕ ಚರ್ಚೆಗಾಗಿ ಮೀಸಲಾಗಿದೆ. ಸೇವೆಯು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಅಥವಾ ಅದು ಅಡೆತಡೆಯಿಲ್ಲದೆ, ಸಮಯೋಚಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು Khatabook ಗ್ಯಾರಂಟಿ ನೀಡುವುದಿಲ್ಲ. ದೋಷಗಳು ಯಾವುದಾದರೂ ಇದ್ದರೆ ಸರಿಪಡಿಸಲಾಗುವುದು. ಇಲ್ಲಿ ಒಳಗೊಂಡಿರುವ ವಸ್ತು ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಕಾನೂನು, ಹಣಕಾಸು ಅಥವಾ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯನ್ನು ಅವಲಂಬಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮ್ಮ ಸ್ವಂತ ನಿರ್ಧಾರಕ್ಕೆ ಬಿಟ್ಟಿದ್ದು. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುಳ್ಳು, ತಪ್ಪಾದ ಅಥವಾ ಅಪೂರ್ಣ ಮಾಹಿತಿಗೆ Khatabook ಜವಾಬ್ದಾರನಾಗಿರುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ನವೀಕರಿಸಲಾಗಿದೆ, ಪ್ರಸ್ತುತವಾಗಿದೆ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ವೆಬ್‌ಸೈಟ್ ಅಥವಾ ಮಾಹಿತಿ, ಉತ್ಪನ್ನ, ಸೇವೆಗಳು ಅಥವಾ ಸಂಬಂಧಿತವಾಗಿ ಸಂಪೂರ್ಣತೆ, ವಿಶ್ವಾಸಾರ್ಹತೆ, ನಿಖರತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ Khatabook ಯಾವುದೇ ಖಾತರಿ ನೀಡುವುದಿಲ್ಲ. ವೆಬ್‌ಸೈಟ್ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿಂದ ಅಥವಾ ಅದರ ನಿಯಂತ್ರಣವನ್ನು ಮೀರಿ ಮತ್ತು ಈ ವೆಬ್‌ಸೈಟ್‌ನ ಬಳಕೆ ಅಥವಾ ಪ್ರವೇಶದ ಪರಿಣಾಮವಾಗಿ ಅನುಭವಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಈ ವೆಬ್‌ಸೈಟ್ ಅನ್ನು ಬಳಸಲು ಅಥವಾ ಪ್ರವೇಶಿಸಲು ಅಸಮರ್ಥತೆಗೆ Khatabook ಜವಾಬ್ದಾರನಾಗಿರುವುದಿಲ್ಲ.